ಕ್ರಿಕೆಟ್

ಮಹಿಳಾ ವಿಶ್ವ ಟಿ20: ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಗೆ 8ವಿಕೆಟ್ ಜಯ, 4ನೇ ಬಾರಿ ಚಾಂಪಿಯನ್ ಆದ ಕಾಂಗರೂ ಪಡೆ

ಇಂಗ್ಲೆಂಡ್ ವಿರುದ್ಧ ಎಂಟು ವಿಕೆಟ್ ಗಳ ಭರ್ಜರಿ ಜಯದೊಡನೆ ಆಸ್ಟ್ರೇಲಿಯಾ ಮಹಿಳೆಯರು ನಾಲ್ಕನೇ ವಿಶ್ವ ಮಹಿಳಾ ಟಿ20 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ

ಮಹಿಳಾ ವಿಶ್ವ ಟಿ20: ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಗೆ 8ವಿಕೆಟ್ ಜಯ, 4ನೇ ಬಾರಿ ಚಾಂಪಿಯನ್ ಆದ ಕಾಂಗರೂ ಪಡೆ
ಮಹಿಳಾ ವಿಶ್ವ ಟಿ20: ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಗೆ 8ವಿಕೆಟ್ ಜಯ,
Published On :
ನಾರ್ತ್ ಸೌಂಡ್ ಅಂಟಿಗಾ:ಇಂಗ್ಲೆಂಡ್ ವಿರುದ್ಧ ಎಂಟು ವಿಕೆಟ್ ಗಳ ಭರ್ಜರಿ ಜಯದೊಡನೆ ಆಸ್ಟ್ರೇಲಿಯಾ ಮಹಿಳೆಯರು ನಾಲ್ಕನೇ ವಿಶ್ವ ಮಹಿಳಾ ಟಿ20 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ
ಸರ್ ವಿವಿಯನ್ ರಿಚರ್ಡ್ಸ್ ಲ್ರೀಡಾಂಗಣದಲ್ಲಿ ನಡೆದ ಅಂತಿಮ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಲ್ ರೌಂಡರ್ ಆಶ್ಲಿ ಗಾರ್ಡನರ್ ಬ್ಯಾಟಿಂಗ್ ಹಾಗೂ ವ್ಬೌಲಿಂಗ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದಿದ್ದ ಇಂಗ್ಲೆಂಡ್ 19.4 ಓವರ್ ಗಳಲ್ಲಿ 105 ರನ್ ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಇಂಗ್ಲೆಂಡ್ ಪರ ಪ್ರಾರಂಭಿಕ ಆಟಗಾರ್ತಿಯಾಗಿದ್ದ  ಡೇನಿಯಲ್ ವ್ಯಾಟ್ (43) ಅವರದೇ ಟಾಪ್ ಸ್ಕೋರ್ ಆಗಿತ್ತು. 
ಇನ್ನು ಆಂಗ್ಲರ ಗುರಿಯನ್ನು ಬೆನ್ನತ್ತಿದ ಕಾಂಗರೂ ಮಹಿಳಾ ಪಡೆ 15.1 ಓವರ್ ಗಳಲ್ಲಿಗುರಿ ಮುಟ್ಟಿತು. ಈ ಮೂಲಕ ಆಸ್ಟ್ರೇಲಿಯಾ ನಾಲ್ಕನೇ ಬಾರಿಗೆ ಪ್ರತಿಷ್ಠಿತ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡು ಸಂಭ್ರಮಿಸಿದೆ.
ಈ ಹಿಂದೆ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೇಂಡ್ ಮಾತ್ರವೇ ತಲಾ ಒಂದು ಬಾರಿ ಚಾಂಪಿಯನ್ ಆಗಿದ್ದು ಬಿಟ್ಟರೆ ಇನ್ನಾವ ತಂಡವೂ ಪ್ರಶಸ್ತಿ ಗಳಿಸಿಕೊಂಡಿಲ್ಲ.
ಪ್ರಸ್ತುತ ಸರಣಿಯಲ್ಲಿ ಭಾರತ ಸೆಮಿಫೈನಲ್ ಸುತ್ತಿನಲ್ಲಿ ಇಂಗ್ಲೆಂಡ್ ಮಹಿಳೆಯರಿಗೆ ಸೋತು ಟೂರ್ನಿಯಿಂದ ಹಿಂದೆ ಸರಿದಿತ್ತು.
ಸಂಕ್ಷಿಪ್ತ ಸ್ಕೋರ್: 
ಇಂಗ್ಲೆಂಡ್ 19.4 ಓವರ್ ಗಳಲ್ಲಿ 105/10
ಆಸ್ಟ್ರೇಲಿಯಾ 15.1 ಓವರ್ ಗಳಲ್ಲಿ 106/2

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.