ಕ್ರಿಕೆಟ್ ಇತಿಹಾಸದಲ್ಲೇ ಅತೀ ಕೆಟ್ಟ ಬೌಲಿಂಗ್, ದಂಗಾದ ಬ್ಯಾಟ್ಸ್ ಮನ್, ವಿಡಿಯೋ ನೋಡಿದ್ರೆ ಖಂಡಿತ ನಗ್ತೀರಾ!
ಕ್ರಿಕೆಟ್ ಇತಿಹಾಸದಲ್ಲಿ ಕೆಲವೊಂದು ಸನ್ನಿವೇಶಗಳು ಮತ್ತೆ ಮತ್ತೆ ಪುನಾರಾವರ್ತನೆ ಆಗುತ್ತಿರುತ್ತವೆ ಎಂಬುದಕ್ಕೆ ಇದು ತಾಜಾ ಉದಾಹರಣೆ...

Published On :
ಕ್ವೀನ್ಸ್ ಲ್ಯಾಂಡ್: ಕ್ರಿಕೆಟ್ ಇತಿಹಾಸದಲ್ಲಿ ಕೆಲವೊಂದು ಸನ್ನಿವೇಶಗಳು ಮತ್ತೆ ಮತ್ತೆ ಪುನಾರಾವರ್ತನೆ ಆಗುತ್ತಿರುತ್ತವೆ ಎಂಬುದಕ್ಕೆ ಇದು ತಾಜಾ ಉದಾಹರಣೆ. ಹೌದು ದಕ್ಷಿಣ ಆಫ್ರಿಕಾದ ವೇಗಿ ಕಗಿಸೋ ರಬಾಡ ಅತೀ ಕೆಟ್ಟ ಬೌಲಿಂಗ್ ಮಾಡಿ ಸುದ್ದಿಯಾಗಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಏಕೈಕ ಟಿ20 ಪಂದ್ಯದ 9ನೇ ಓವರ್ ನಲ್ಲಿ ಕಗಿಸೋ ರಬಾಡ ಕೈಯಿಂದ ಜಾರಿದ ಚೆಂಡು ಫಸ್ಟ್ ಕವರ್ಸ್ ನಲ್ಲಿ ಹೋಗಿ ಬಿದ್ದಿದ್ದು ಇದನ್ನು ಮೈದಾನದ ಅಂಪೈರ್ ಡೆಡ್ ಬಾಲ್ ಎಂದು ಘೋಷಿಸಿದ್ದಾರೆ.
ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಗ್ಲೇನ್ ಮ್ಯಾಕ್ಸ್ ವೆಲ್ ಬ್ಯಾಟಿಂಗ್ ಮಾಡುತ್ತಿದ್ದು ರಬಾಡರ ವಿಚಿತ್ರ ಎಸೆತಕ್ಕೆ ಬೆರಗಾಗಿದ್ದಾರೆ. ಇತ್ತ ಬೌಲರ್ ಸಹ ಅನಿರೀಕ್ಷಿತ ಎಸೆತಕ್ಕೆ ದಂಗಾಗಿದ್ದಾರೆ.
ಅಲ್ಲದೆ ರಬಾಡ ಎಸೆದ ವಿಚಿತ್ರ ಬಾಲ್ ಪ್ರೇಕ್ಷಕರನ್ನು ಅರೆಕ್ಷಣ ಅಚ್ಚರಿಗೊಳ್ಳುವಂತೆ ಮಾಡಿದ್ದು ಸುಳ್ಳಲ್ಲ.
BALLLLL
RABADA KE BALLLLLLLLLLL
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಆಸ್ಟ್ರೇಲಿಯಾAustraliaದಕ್ಷಿಣ ಆಫ್ರಿಕಾSouth AfricaKagiso RabadaCricket Offbeatಕ್ರಿಕೆಟ್ ಸ್ವಾರಸ್ಯಕಾಗಿಸೋ ರಬಾಡDead Ballಡೆಡ್ ಬಾಲ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


