ಮತ್ತೆ ವಿಲನ್ ಆಗ್ತಿದ್ರಾ ಮನೀಶ್ ಪಾಂಡೆ, ಸ್ವಲ್ಪ ಎಡವಿದ್ರೂ ಪಂದ್ಯ ಟೈ?: ಕೊನೆಯ ಓವರ್‌ನ ರೋಚಕ ವಿಡಿಯೋ!
ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸಿದೆ. ಇನ್ನು ಪಂದ್ಯದ ಕೊನೆಯ ಎಸೆತದಲ್ಲಿ ಮನೀಷ್ ಪಾಂಡೆ 1 ರನ್...

Published On :
ಚೆನ್ನೈ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸಿದೆ. ಇನ್ನು ಪಂದ್ಯದ ಕೊನೆಯ ಎಸೆತದಲ್ಲಿ ಮನೀಷ್ ಪಾಂಡೆ 1 ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಆದರೆ ಆ ಓವರ್ ನಲ್ಲಿ ಮನೀಶ್ ಸ್ವಲ್ಪ ಎಡವಿದ್ರೂ ಪಂದ್ಯ ಟೈ ಆಗುವ ಸಾಧ್ಯತೆ ಇತ್ತು.
ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾಗೆ ಕೊನೆಯ ಓವರ್ ನಲ್ಲಿ 6 ಎಸೆತದಲ್ಲಿ 5 ರನ್ ಬೇಕಿತ್ತು. ಆಗ ವಿಂಡೀಸ್ ಬೌಲರ್ ಅಲೇನ್ ಬೌಲಿಂಗ್ ಮಾಡಿದರು. ಮೊದಲ ಎಸೆತದಲ್ಲಿ ಶಿಖರ್ ಧವನ್ 2 ರನ್ ಬಾರಿಸಿದರು. 2ನೇ ಎಸೆತದಲ್ಲಿ ಧವನ್ 1 ರನ್ ಪಡೆದರು. ನಂತರದ ಎಸೆತದಲ್ಲಿ ಮನೀಶ್ ಸಹ 1 ರನ್ ಪಡೆದರು. ಅಲ್ಲಿಗೆ ಟೀಂ ಇಂಡಿಯಾ 181 ರನ್ ಗಳಿಸಿ ರನ್ ಸಮಗೊಳಿಸಿತ್ತು. ಇನ್ನು ಪಂದ್ಯ ಗೆಲ್ಲಲು 1 ರನ್ ಬಾಕಿ ಇತ್ತು. 3 ಎಸೆತ ಉಳಿದಿತ್ತು. 4ನೇ ಎಸೆತದಲ್ಲಿ ಧವನ್ ಯಾವುದೇ ರನ್ ಪಡೆಯಲ್ಲಿಲ್ಲ.
ಕೊನೆಗೆ ಉಳಿದಿದ್ದು 2 ಎಸೆತ ಭಾರತ ಗೆಲುವಿಗೆ ಬೇಕಿದಿದ್ದು 1 ರನ್ ಮಾತ್ರ. 5ನೇ ಎಸೆತದಲ್ಲಿ ಧವನ್ ಬಿರುಸಾಗಿ ಹೊಡೆದರು. ಆದರೆ ಚೆಂಡು ನೇರವಾಗಿ ಪೊಲಾರ್ಡ್ ಕೈಸೇರಿ ಧವನ್ ಔಟಾದರು. ಇನ್ನು ಉಳಿದ ಕೊನೆಯ ಎಸೆತದಲ್ಲಿ ಗೆಲುವಿಗೆ 1 ರನ್ ಬೇಕಿತ್ತು. ಸ್ಟ್ರೈಕ್ ನಲ್ಲಿದ್ದದ್ದು ಮನೀಷ್ ಪಾಂಡೆ, ಮನೀಶ್ ಪಾಂಡೆ ಲೇಗ್ ಸೈಡ್ ನಲ್ಲಿ ಚೆಂಡನ್ನು ಬಾರಿಸಿದರು. ಆಗ ಬೌಲರ್ ಅಲೇನ್ ಚೆಂಡನ್ನು ಹಿಡಿಯಲು ಪ್ರಯತ್ನಿಸಿದರು. ಆದರೆ ಚೆಂಡು ಅಲೇನ್ ಕೈತಪ್ಪಿದ್ದರಿಂದ ಮನೀಷ್ ಪಾಂಡೆ ಸುಲಭವಾಗಿ 1 ರನ್ ಪಡೆದರು. ಇಲ್ಲದಿದ್ದರೆ ಪಂದ್ಯ ನಿಜಕ್ಕೂ ಟೈ ಆಗುವ ಸಾಧ್ಯತೆ ಇತ್ತು.
ಚೆನ್ನೈನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ಗಳಿಂದ ಭರ್ಜರಿ ಜಯ ಗಳಿಸಿದ್ದು 3-0 ಅಂತರದಿಂದ ಸರಣಿ ಕ್ಲೀನ್ ಸ್ವಿಪ್ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಟೀಂ ಇಂಡಿಯಾTeam IndiaShikhar Dhawanಶಿಖರ್ ಧವನ್West indiesManish Pandeyವೆಸ್ಟ್ ಇಂಡೀಸ್ಮನೀಶ್ ಪಾಂಡೆCricket Offbeatಕ್ರಿಕೆಟ್ ಸ್ವಾರಸ್ಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


