ಐಪಿಎಲ್ 2018: ಹೈದರಾಬಾದ್ ವಿರುದ್ಧ ಬೆಂಗಳೂರಿಗೆ 14 ರನ್ ಜಯ
ಇಂಡಿಯನ್ ಪ್ರೀಮಿಯರ್ ಲೀಗ್ 2018ರ ಪಂದ್ಯಾವಳಿಯ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ ರೈಸರ್ಸ್ ಹೈದರಾಬಾದ್ ನ್ನು 14 ರನ್ ಗಳಿಂದ....

Published On :
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2018ರ ಪಂದ್ಯಾವಳಿಯ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ ರೈಸರ್ಸ್ ಹೈದರಾಬಾದ್ ನ್ನು 14 ರನ್ ಗಳಿಂದ ಮಣಿಸಿ ವಿಜಯಿಯಾಗಿದೆ.
ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲಿಗೆ ಬ್ಯಾಟ್ ಮಾಡಿದ ಬೆಂಗಳೂರು ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 218 ರನ್ ಕಲೆ ಹಾಕಿತ್ತು.
ಆರ್ಸಿಬಿ ಪರವಾಗಿ ಎಬಿ ಡಿವಿಲಿಯರ್ಸ್(69), ಮೋಯಿನ್ ಅಲಿ(65), ಕೋಲಿನ್ ಡಿ ಗ್ರ್ಯಾಂಡ್ ಹೋಮ್(40) ಹಾಗೂ ಸರ್ಫರಾಜ್ ಖಾನ್(22) ಉತ್ತಮ ಪ್ರದರ್ಶನ ನಿಡಿದ್ದರು.
ಹೈದರಾಬಾದ್ ಪರವಾಗಿ ರಶಿದ್ ಖಾನ್ ಮೂರು ವಿಕೆಟ್, ಸಿದ್ದಾರ್ಥ್ ಕೌಲ್ ಎರಡು, ಸಂದೀಪ್ ಶರ್ಮಾ ಒಂದು ವಿಕೆಟ್ ಪಡೆದರು.
ಆರ್ಸಿಬಿ ಯಿಂದ 219 ರನ್ ಗುರಿ ಪಡೆದ ಹೈದರಾಬಾದ್ ನಿಗದಿತ ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿಕೊಳ್ಳುವಲ್ಲಿ ಮಾತ್ರ ಯಶಸ್ವಿಯಾಗಿತ್ತು.
ಹೈದರಾಬಾದ್ ತಂಡದ ಪರವಾಗಿ ಕೇನ್ ವಿಲಿಯಮ್ಸನ್(81) ಮನೀಶ್ ಪಾಂಡೆ(62*) ಹಾಗೂ ಅಲೆಕ್ಸ್(37) ತಂಡಕ್ಕೆ ಉತ್ತಮ ರನ್ ಕೊಡುಗೆ ನಿಡಿದ್ದರು.
ಬೆಂಗಳೂರಿನ ಬೌಲರ್ ಗಳಾದ ಯಜುವೇಂದ್ರ ಚಹಾಲ್, ಯಜುವೇಂದ್ರ ಚಹಾಲ್ ಹಾಗೂ ಮೋಯಿನ್ ಅಲಿ ತಾವುಗಳು ಒಂದೊಂದು ವಿಕೆಟ್ ಪಡೆದು ಮಿಂಚಿದ್ದರು.
ಬೆಂಗಳೂರು ತಂಡ ಈ ಗೆಲುವಿನೊಡನೆ ಮತ್ತೆ ಪ್ಲೇ ಆಫ್ ಗೆ ತೆರಳುವ ತನ್ನ ಕನಸಿಗೆ ರೆಕ್ಕೆ ಮೂಡಿಸಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Royal Challengers Bangaloreರಾಯಲ್ ಚಾಲೆಂಜರ್ಸ್ ಬೆಂಗಳೂರುSunrisers Hyderabadಸನ್ ರೈಸರ್ಸ್ ಹೈದರಾಬಾದ್IPL 2018ಐಪಿಎಲ್ 2018
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


