ಉತ್ತಪ್ಪ ಕ್ಯಾಚ್ ಕೈ ಚೆಲ್ಲಿದ ಯುವ ಆಟಗಾರ ಮಾಯಾಂಕ್ ಮೇಲೆ ಹಾರ್ದಿಕ್ ಕೋಪ: ವಿಡಿಯೋ ವೈರಲ್
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ಕನ್ನಡಿಗ ರಾಬಿನ್ ಉತ್ತಪ್ಪ ನೀಡಿದ್ದ ಕ್ಯಾಚ್ ಕೈಚೆಲ್ಲಿದ ಮುಂಬೈ ತಂಡದ ಯುವ ಆಟಗಾರ ಮಾಯಾಂಕ್ ವಿರುದ್ಧ ಹಾರ್ದಿಕ್...

Published On :
ಮುಂಬೈ: ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ಕನ್ನಡಿಗ ರಾಬಿನ್ ಉತ್ತಪ್ಪ ನೀಡಿದ್ದ ಕ್ಯಾಚ್ ಕೈಚೆಲ್ಲಿದ ಮುಂಬೈ ತಂಡದ ಯುವ ಆಟಗಾರ ಮಾಯಾಂಕ್ ವಿರುದ್ಧ ಹಾರ್ದಿಕ್ ಪಾಂಡ್ಯ ಕೋಪಗೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಾಖೆಂಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 6ನೇ ಓವರ್ ನಲ್ಲಿ 4 ರನ್ ಗಳಿಸಿದ್ದ ಉತ್ತಪ್ಪ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಭಾರೀ ಹೊಡೆತಕ್ಕೆ ಕೈ ಹಾಕಿದ್ದರು. ಆದರೆ ಈ ವೇಳೆ ಮಾಯಾಂಕ್ ಕೈಗೆ ಬಂದಿದ್ದ ಚೆಂಡನ್ನು ಹಿಡಿಯಲು ವಿಫಲರಾಗಿದ್ದರು. ಈ ವೇಳೆ ಹಾರ್ದಿಕ್ ಮಾಯಾಂಕ್ ಮೇಲೆ ಕೋಪಗೊಡರು.
ಜೀವದಾನ ಪಡೆದ ಉತ್ತಪ್ಪ 35 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ನೆರವಿನಿಂದ 54 ರನ್ ಗಳಿಸಿದರು. ಜತೆಗೆ ಐಪಿಎಲ್ ನಲ್ಲಿ ಉತ್ತಪ್ಪ 4 ಸಾವಿರ ರನ್ ಗಡಿ ದಾಟಿದ್ದಾರೆ.
ಕೆಕೆಆರ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡ 10 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಸಾಧಿಸಿ 8 ಅಂಕಗಳೊಂದಿಗೆ 5ನೇ ಸ್ಥಾನ ಪಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Robin UthappaKolkata Knight RidersMumbai Indiansಮುಂಬೈ ಇಂಡಿಯನ್ಸ್Hardik Pandyaಹಾರ್ದಿಕ್ ಪಾಂಡ್ಯಕೋಲ್ಕತ್ತಾ ನೈಟ್ ರೈಡರ್ಸ್IPL 2018Mayank Markandಮಾಯಾಂಕ್ ಮಾರ್ಕೆಂಡ್ರಾಬಿನ್ ಉ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


