ಸ್ಟಂಪ್ ಹೇಗೆ ಮಾಡಬೇಕೆಂದು ಯುವ ಕ್ರಿಕೆಟಿಗನಿಗೆ 'ಚಾಣಾಕ್ಷ' ಧೋನಿಯಿಂದ ಪಾಠ!
ವಿಕೆಟ್ ಹಿಂದೆ ತಮ್ಮ ಚಾಣಾಕ್ಷ ಕೀಪಿಂಗ್ ನಿಂದ ಹೆಸರು ಮಾಡಿರುವ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮುಂಬೈ ಇಂಡಿಯನ್ಸ್ ತಂಡದ ಯುವ ಕೀಪರ್...

Published On :
ಪುಣೆ: ವಿಕೆಟ್ ಹಿಂದೆ ತಮ್ಮ ಚಾಣಾಕ್ಷ ಕೀಪಿಂಗ್ ನಿಂದ ಹೆಸರು ಮಾಡಿರುವ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮುಂಬೈ ಇಂಡಿಯನ್ಸ್ ತಂಡದ ಯುವ ಕೀಪರ್ ಇಶಾನ್ ಕಿಶನ್ ಗೆ ಕೀಪಿಂಗ್ ಪಾಠ ಹೇಳಿಕೊಟ್ಟಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಎಂಎಸ್ ಧೋನಿಯನ್ನು ಸ್ಟಂಪ್ ಔಟ್ ಮಾಡುವ ಅದ್ಭುತ ಅವಕಾಶವನ್ನು ಇಶಾನ್ ಕಿಶನ್ ಕಳೆದುಕೊಂಡಿದ್ದರು. 15ನೇ ಓವರ್ ನಲ್ಲಿ ಮರ್ಕಾಂಡೆ ಎಸೆದ 3ನೇ ಎಸೆತ ವೈಡ್ ಆಗಿತ್ತು. ಈ ಸಂದರ್ಭದಲ್ಲಿ ಧೋನಿ ಕ್ರಿಸ್ ಬಿಟ್ಟಿದ್ದರು. ಆದರೆ ಬಾಲ್ ಹಿಡಿದಿದ್ದ ಕಿಶನ್ ಸ್ಟಂಪ್ ಗೆ ಹೊಡೆಯುವುದಕ್ಕೆ ನಿಧಾನ ಮಾಡಿದರು. ಅಷ್ಟರಲ್ಲಿ ಧೋನಿ ಕ್ರಿಸ್ ಗೆ ಬ್ಯಾಟ್ ಇಟ್ಟಿದ್ದರು.
ಇದಾದ ನಂತರ ಎಂಎಸ್ ಧೋನಿ ಇಶಾನ್ ಕಿಶನ್ ಗೆ ಕೀಪಿಂಗ್ ಹೇಗೆ ಮಾಡಬೇಕೆಂದು ಕೆಲವು ಕೌಶಲ್ಯಗಳನ್ನು ತಿಳಿಸಿಕೊಟ್ಟಿದ್ದರು. ಧೋನಿ ಕಿಶನ್ ಗೆ ಮಾರ್ಗದರ್ಶನ ನೀಡುತ್ತಿರುವುದು ಇದೇ ಮೊದಲೇನಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
MS Dhoniಎಂಎಸ್ ಧೋನಿChennai Super Kingsಚೆನ್ನೈ ಸೂಪರ್ ಕಿಂಗ್ಸ್Mumbai Indiansಮುಂಬೈ ಇಂಡಿಯನ್ಸ್Ishan Kishanಇಶಾನ್ ಕಿಶನ್Cricket OffbeatIPL 2018ಐಪಿಎಲ್ 2018ಕ್ರಿಕೆಟ್ ಸ್ವಾರಸ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


