ಇನ್ನೆಂದೂ ನಾನು ಆಸ್ಟ್ರೇಲಿಯಾ ಪರ ಆಡಲಾಗದು: ಕಣ್ಣೀರುಡುತ್ತಲೇ ಕ್ರಿಕೆಟ್ ಗೆ ಡೇವಿಡ್ ವಾರ್ನರ್ ನಿವೃತ್ತಿ
ನಾನು ಇನ್ನೆಂದೂ ಆಸ್ಟ್ರೇಲಿಯಾ ಪರ ಕ್ರಿಕೆಟ್ ಆಡುವುದಿಲ್ಲ ಎಂದು ಆಸಿಸ್ ತಂಡದ ಮಾಜಿ ಉಪನಾಯಕ ಡೇವಿಡ್ ವಾರ್ನರ್ ಶನಿವಾರ ಹೇಳಿದ್ದಾರೆ.

Published On :
ಸಿಡ್ನಿ: ನಾನು ಇನ್ನೆಂದೂ ಆಸ್ಟ್ರೇಲಿಯಾ ಪರ ಕ್ರಿಕೆಟ್ ಆಡುವುದಿಲ್ಲ ಎಂದು ಆಸಿಸ್ ತಂಡದ ಮಾಜಿ ಉಪನಾಯಕ ಡೇವಿಡ್ ವಾರ್ನರ್ ಶನಿವಾರ ಹೇಳಿದ್ದಾರೆ.
ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವರ್ಷದ ನಿಷೇಧ ಶಿಕ್ಷೆಗೆ ಗುರಿಯಾಗಿರುವ ಡೇವಿಡ್ ವಾರ್ನರ್, ಇಂದು ಸಿಡ್ನಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ತೀವ್ರ ಭಾವುಕರಾದ ವಾರ್ನರ್, ಇನ್ನೆಂದೂ ಆಸ್ಟ್ರೇಲಿಯಾ ಪರ ಕ್ರಿಕೆಟ್ ಆಡುವುದಿಲ್ಲ ಎಂದು ಹೇಳಿ ಕಣ್ಣೀರು ಹಾಕುತ್ತಲೇ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ.
ನನಗೆ ತಂಡವನ್ನು ಗೆಲ್ಲಿಸುವುದಷ್ಟೇ ಮುಖ್ಯವಾಗಿತ್ತು. ಹಾಗಾಗಿ ಈ ನಿರ್ಧಾರ ತೆಗೆದುಕೊಂಡೆ. ಇದರಿಂದ ಆಗುವ ವ್ಯತಿರಿಕ್ತ ಪರಿಣಾಮ ಅರ್ಥಮಾಡಿಕೊಳ್ಳಲಿಲ್ಲ. ಈ ಬಗ್ಗೆ ನನ್ನ ಜೀವವಿರುವವರೆಗೂ ಕೊರಗು ಕಾಡುತ್ತದೆ. ಪ್ರಕರಣದಲ್ಲಿ ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ. ಪ್ರಕರಣದಲ್ಲಿ ನಾನು ಬಲಿಪಶುವಾದೆನು ಎಂದೆನಿಸುತ್ತಿದೆ. ಈ ಪ್ರಕರಣ ನನ್ನ ಜೀವನದುದ್ದಕ್ಕೂ ನನ್ನನ್ನು ಕಾಡಲಿದೆ. ನನ್ನ ದೇಶಕ್ಕೆ ಜಯ ದೊರಕಿಸಿಕೊಡಬೇಕು ಎಂಬುದಷ್ಟೇ ನನ್ನ ಉದ್ದೇಶವಾಗಿತ್ತು. ಆದರೂ ಇಡೀ ಪ್ರಕರಣದ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ ಎಂದು ವಾರ್ನರ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ನಲ್ಲಿ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಸ್ಯಾಂಡ್ಪೇಪರ್ ಬಳಸಿ ಚೆಂಡು ವಿರೂಪಗೊಳಿಸಿ ಮೋಸವೆಸಗಿದ್ದರ ಸಂಪೂರ್ಣ ಹೊಣೆಯನ್ನು ನಾನೇ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಸುದ್ದಿಗೋಷ್ಠಿಯುದ್ದಕ್ಕೂ ತೀವ್ರ ಭಾವುಕರಾಗಿದ್ದ ಡೇವಿಡ್ ವಾರ್ನರ್ ಅಳುತ್ತಲೇ ತಮ್ಮ ಅಭಿಮಾನಿಗಳು, ಸಹ ಆಟಗಾರರು, ತಮ್ಮ ಕುಟುಂಹ ಹಾಗೂ ಆಸ್ಟ್ರೇಲಿಯಾ ಪ್ರಜೆಗಳ ಕ್ಷಮೆ ಕೋರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಆಸ್ಟ್ರೇಲಿಯಾAustraliaSydneyಸಿಡ್ನಿನಿವೃತ್ತಿDavid Warnerಡೇವಿಡ್ ವಾರ್ನರ್retirementBall Tampering Rowಚೆಂಡು ವಿರೂಪಗೊಳಿಸಿದ ಪ್ರಕರಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


