ಕ್ರಿಕೆಟ್

ಬಾಂಗ್ಲಾ ವಿರುದ್ಧ ಕೊನೆ ಎಸೆತದಲ್ಲಿ ದಿನೇಶ್ ಸಿಕ್ಸರ್; ಲಂಕಾ ಅಭಿಮಾನಿ ನಾಗಿನ್ ಡ್ಯಾನ್ಸ್! ವಿಡಿಯೋ ವೈರಲ್

ಶ್ರೀಲಂಕಾದಲ್ಲಿ ನಡೆದ ನಿಡಾಹಸ್ ತ್ರಿಕೋನ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ದಿನೇಶ್ ಕಾರ್ತಿಕ್ ಭರ್ಜರಿ ಬ್ಯಾಟಿಂಗ್ ನಿಂದಾಗಿ ಟೀಂ ಇಂಡಿಯಾ...

ಬಾಂಗ್ಲಾ ವಿರುದ್ಧ ಕೊನೆ ಎಸೆತದಲ್ಲಿ ದಿನೇಶ್ ಸಿಕ್ಸರ್; ಲಂಕಾ ಅಭಿಮಾನಿ ನಾಗಿನ್ ಡ್ಯಾನ್ಸ್! ವಿಡಿಯೋ ವೈರಲ್
ಲಂಕಾ ಅಭಿಮಾನಿಯಿಂದ ನಾಗಿನ್ ಡ್ಯಾನ್ಸ್
Published On :
ಶ್ರೀಲಂಕಾದಲ್ಲಿ ನಡೆದ ನಿಡಾಹಸ್ ತ್ರಿಕೋನ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ದಿನೇಶ್ ಕಾರ್ತಿಕ್ ಭರ್ಜರಿ ಬ್ಯಾಟಿಂಗ್ ನಿಂದಾಗಿ ಟೀಂ ಇಂಡಿಯಾ ವಿರೋಚಿತ ಗೆಲುವು ಸಾಧಿಸಿದೆ. 
ಈ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ 8 ಎಸೆತಗಳಲ್ಲಿ 29 ರನ್ ಬಾರಿಸುವ ಮೂಲಕ ನಿಡಾಹಸ್ ತ್ರಿಕೋನ ಟಿ20 ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪಂದ್ಯ ಗೆಲ್ಲುತ್ತಿದ್ದಂತೆ ಇತ್ತ ಭಾರತೀಯ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದರೆ ಅತ್ತ ಶ್ರೀಲಂಕಾ ಅಭಿಮಾನಿಗಳು ಸಹ ಈ ಭಾರತೀಯರ ಗೆಲುವು ತಮ್ಮ ಸ್ವಾಭಿಮಾನದ ಗೆಲುವು ಎಂದು ಸಂಭ್ರಮಿಸಿದ್ದಾರೆ. ಭಾರತೀಯ ಕ್ರಿಕೆಟಿಗರ ಜತೆಗೆ ಲಂಕಾದ ಧ್ವಜವನ್ನು ಹೊತ್ತ ಅಭಿಮಾನಿಗಳು ಮೈದಾನದಲ್ಲಿ ಸಂಭ್ರಮಿಸಿದ್ದರು. 
ಈ ಪಂದ್ಯ ಶ್ರೀಲಂಕಾ ಅಭಿಮಾನಿಯೊಬ್ಬ ಪೆವಿಲಿಯನ್ ನಲ್ಲಿ ನಾಗಿನ್ ಡ್ಯಾನ್ಸ್ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. 
ನಿಡಾಹಸ್ ತ್ರಿಕೋನ ಟಿ20 ಸರಣಿಯಲ್ಲಿ ನಾಗಿನ್ ಡ್ಯಾನ್ಸ್ ಹೆಚ್ಚು ಜನಪ್ರಿಯವಾಗಿತ್ತು. ಅತ್ತ ಲಂಕಾ ಮತ್ತು ಬಾಂಗ್ಲಾದೇಶದ ಆಟಗಾರರ ನಡುವೆ ಜಿದ್ದಾಜಿದ್ದಿಗೆ ಇದು ಕಾರಣವಾಗಿತ್ತು. 
ಬಾಂಗ್ಲಾದೇಶ ಆಟಗಾರರ ನಾಗಿನ್ ಡ್ಯಾನ್ಸ್ ಸರಣಿ ಆರಂಭವಾಗಿದ್ದು, ಬಾಂಗ್ಲಾದೇಶದಲ್ಲಿ. ಹೌದು ಕಳೆದ ವರ್ಷ ಶ್ರೀಲಂಕಾ ಕ್ರಿಕೆಟ್ ತಂಡ ಬಾಂಗ್ಲಾದೇಶ ಪ್ರವಾಸ ಕೈಗೊಂಡಿತ್ತು. ಬಾಂಗ್ಲಾ ವಿರುದ್ಧ ಮೊದಲ ಪಂದ್ಯದಲ್ಲಿ ಬಾಂಗ್ಲಾ ಆಟಗಾರ ನಜ್ಮುಲ್ ಇಸ್ಲಾಂ ಉಪುಲ್ ತರಂಗಾರನ್ನು ಔಟ್ ಮಾಡಿದ ಬಳಿಕ ಮೈದಾನದಲ್ಲಿ ಸಂಭ್ರಮ ವ್ಯಕ್ತಪಡಿಸುವ ವೇಳೆ ನಾಗಿನ್ ಡ್ಯಾನ್ಸ್ ಮಾಡಿದ್ದರು. ಶೇರ್ ಇ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಈ ಘಟನೆಗೆ ವಿಕೆಟ್ ಕೀಪರ್ ಮುಶ್ಫಿಕರ್ ರಹೀಂ ಕೂಡ ಇಸ್ಲಾಂಗೆ ಸಾಥ್ ನೀಡಿದ್ದರು.
ಆ ಬಳಿಕ ಈ ಘಟನೆ ಮತ್ತೆ ಮರುಕಳಿಸಿದ್ದು ಕಳೆದ ಶುಕ್ರವಾರ. ಅಂದರೆ ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳ ನಡುವಿನ ಪಂದ್ಯದಲ್ಲಿ. ಈ ಪಂದ್ಯದಲ್ಲಿ ಅಂದು ಬಾಂಗ್ಲಾದಲ್ಲಿ ನಾಗಿನ್ ಡ್ಯಾನ್ಸ್ ಮಾಡಿದ್ದ ರಹೀಂ 25ರನ್ ಗಳಿಸಿ ಲಂಕಾದ ಅಮಿಲಾ ಅಪೊನ್ಸೋ ಬೌಲಿಂಗ್ ನಲ್ಲಿ ಔಟ್ ಆಗಿದ್ದರು. ಈ ವೇಳೆ ಅಪೋನ್ಸೋ ಕೂಡ ರಹೀಮ್ ರನ್ನು ಪುಂಗಿ ಉದುವ ರೀತಿಯಲ್ಲಿ ಅಣಕಿಸಿ ಪೆವಿಲಿಯನ್ ಗೆ ಹೋಗುವಂತೆ ಸೂಚಿಸಿದರು. ಆದರೆ ಆ ಬಳಿಕ ಪಂದ್ಯ ಬಿಸಿ ಏರಿಲ ಪಂದ್ಯ ರೋಚಕ ಅಂತ್ಯ ಕಂಡಿತ್ತು. ಅಲ್ಲದೆ ಮೈದಾನದಲ್ಲಿ ನಡೆದ ಕೆಲ ಪ್ರಚೋದನಕಾರಿ ಘಟನೆಗಳು ಬಾಂಗ್ಲಾ ಆಟಗಾರರು ಮೈದಾನದಲ್ಲೇ ನಾಗಿನ್ ಡ್ಯಾನ್ಸ್ ಮಾಡುವಂತೆ ಮಾಡಿದ್ದವು. ಶ್ರೀಲಂಕಾ ಪಂದ್ಯ ಸೋತ ಬಳಿಕ ಬಾಂಗ್ಲಾ ಕ್ರಿಕೆಟಿಗರು ಮತ್ತು ಅಭಿಮಾನಿಗಳು ನಾಗಿನ್ ಡ್ಯಾನ್ಸ್ ಮಾಡಿ ಲಂಕಾ ಅಭಿಮಾನಿಗಳನ್ನು ಕೆಣಕಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.