ಅಮಿತಾಬ್ ಬಚ್ಚನ್ ನಿಡಾಹಸ್ ಸರಣಿ ಗೆಲುವಿನ ಹೀರೋ ದಿನೇಶ್ ಕಾರ್ತಿಕ್ ಕ್ಷಮೆ ಕೇಳಲು ಕಾರಣ!
ಶ್ರೀಲಂಕಾದಲ್ಲಿ ನಡೆದ ನಿಡಾಹಸ್ ತ್ರಿಕೋನ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ದಿನೇಶ್ ಕಾರ್ತಿಕ್ ಭರ್ಜರಿ ಬ್ಯಾಟಿಂಗ್ ನಿಂದಾಗಿ ಟೀಂ ಇಂಡಿಯಾ ವಿರೋಚಿತ...

Published On :
ಶ್ರೀಲಂಕಾದಲ್ಲಿ ನಡೆದ ನಿಡಾಹಸ್ ತ್ರಿಕೋನ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ದಿನೇಶ್ ಕಾರ್ತಿಕ್ ಭರ್ಜರಿ ಬ್ಯಾಟಿಂಗ್ ನಿಂದಾಗಿ ಟೀಂ ಇಂಡಿಯಾ ವಿರೋಚಿತ ಗೆಲುವು ಸಾಧಿಸಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು.
ದಿನೇಶ್ ಕಾರ್ತಿಕ್ ಆಟಕ್ಕೆ ಹಿರಿಯ-ಕಿರಿಯ ಆಟಗಾರರೂ ಸೇರಿದಂತೆ ಬಾಲಿವುಡ್ ಮಂದಿಯೂ ಕಾರ್ತಿಕ್ ಆಟವನ್ನು ಗುಣಗಾನ ಮಾಡಿದ್ದರು. ಆದರೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಮಾತ್ರ ಕಾರ್ತಿಕ್ ಕ್ಷಮೆ ಕೋರಿ ಸುದ್ದಿಯಾಗಿದ್ದಾರೆ.
ಅಮಿತಾಬ್ ಬಚ್ಚನ್ ಓರ್ವ ಕ್ರಿಕೆಟ್ ಪ್ರೇಮಿ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದರೆ ಬಚ್ಚನ್ ಟ್ವೀಟ್ ಮಾಡುವ ಭರದಲ್ಲಿ ಕಾರ್ತಿಕ್ ಅದ್ಭುತ ಆಟವಾಡಿದರು. 2 ಓವರ್ ನಲ್ಲಿ 24 ರನ್ ಗಳ ಅಗತ್ಯವಿದ್ದಾಗ, ಕೊನೆಯ ಎಸೆತದಲ್ಲಿ 5 ರನ್ ಗಳಿಸಬೇಕಿದ್ದಾಗ, ಕೊನೆಯ ಎಸೆತದಲ್ಲಿ 5 ರನ್ ಬೇಕಿದ್ದಾಗ ಸಿಕ್ಸರ್ ಬಾರಿಸಿ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದರು.
ಆದರೆ ತಕ್ಷಣ ಎಚ್ಚೆತ್ತುಕೊಂಡ ಬಿಗ್ ಬಿ 2 ಓವರ್ ನಲ್ಲಿ 34 ರನ್ ಗಳ ಅಗತ್ಯವಿತ್ತು ಎಂದಾಗಬೇಕಿತ್ತು. 24 ಅಲ್ಲ, ತಪ್ಪು ಟ್ವೀಟ್ ಗಾಗಿ ಕಾರ್ತಿಕ್ ಕ್ಷಮೆ ಕೇಳುತ್ತೇನೆ ಎಂದು ಅಮಿತಾಬ್ ಬಚ್ಚನ್ ಕ್ಷಮೆ ಕೋರಿ ಮರು ಟ್ವೀಟ್ ಮಾಡಿದ್ದಾರೆ.
ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಲು ಅವಕಾಶ ಪಡೆದ ಬಾಂಗ್ಲಾದೇಶ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿ, ಭಾರತ ಗೆಲ್ಲಲು 167ರನ್ ಗಳ ಟಾರ್ಗೆಟ್ ನೀಡಿತು. ಭಾರತ 168 ಬಾರಿಸಿ 4 ವಿಕೆಟ್ ಗಳಿಂದ ಜಯ ಗಳಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್indiaಭಾರತAmitabh Bachchanಅಮಿತಾಬ್ ಬಚ್ಚನ್ಬಾಂಗ್ಲಾದೇಶBangladeshColomboಕೊಲಂಬೋದಿನೇಶ್ ಕಾರ್ತಿಕ್Dinesh KarthikNidahas Trophyನಿಡಹಾಸ್ ಟ್ರೋಫಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


