ಲಂಕಾ ವಿರುದ್ಧ ದಾಖಲೆ ಗೆಲುವು ಬಳಿಕ ಮೈದಾನದಲ್ಲೇ ಮುಶ್ಫಿಕರ್ ನಾಗಿನ್ ಡ್ಯಾನ್ಸ್!
ನಿಡಾಹಸ್ ತ್ರಿಕೋನ ಟಿ20 ಪಂದ್ಯಾವಳಿಯ ಶ್ರೀಲಂಕಾ ವಿರುದ್ಧದ ದಾಖಲೆ ಗೆಲುವಿನ ಬಳಿಕ ಬಾಂಗ್ಲಾದೇಶ ವಿಕೆಟ್ ಕೀಪರ್ ಮುಶ್ಫಿಕರ್ ರಹೀಂ ಮೈದಾನದಲ್ಲೇ ನಾಗಿನ್...

Published On :
ಕೊಲಂಬೊ: ನಿಡಾಹಸ್ ತ್ರಿಕೋನ ಟಿ20 ಪಂದ್ಯಾವಳಿಯ ಶ್ರೀಲಂಕಾ ವಿರುದ್ಧದ ದಾಖಲೆ ಗೆಲುವಿನ ಬಳಿಕ ಬಾಂಗ್ಲಾದೇಶ ವಿಕೆಟ್ ಕೀಪರ್ ಮುಶ್ಫಿಕರ್ ರಹೀಂ ಮೈದಾನದಲ್ಲೇ ನಾಗಿನ್ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ.
ಪಂದ್ಯಾವಳಿಯ ಮೂರನೇ ಪಂದ್ಯ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವೆ ನಡೆದಿತ್ತು. ಟಾಸ್ ಸೋತು ಮೊದಲ ಬ್ಯಾಟ್ ಮಾಡಿದ ಶ್ರೀಲಂಕಾ ನಿಗದಿತ ಓವರ್ ಗೆ 6 ವಿಕೆಟ್ ಗಳ ನಷ್ಟಕ್ಕೆ 214 ರನ್ ಗಳನ್ನು ಗಳಿಸಿ ಬಾಂಗ್ಲಾದೇಶಕ್ಕೆ ಬೃಹತ್ ಮೊತ್ತದ ಟಾರ್ಗೆಟ್ ನೀಡಿತ್ತು.
215 ರನ್ ಬೃಹತ್ ಮೊತ್ತವನ್ನು ಬೆನ್ನಟ್ಟಿದ್ದ ಬಾಂಗ್ಲಾದೇಶ 19.4 ಓವರ್ ಗೆ 5 ವಿಕೆಟ್ ಗಳ ನಷ್ಟಕ್ಕೆ 215 ರನ್ ಗಳನ್ನು ಗಳಿಸಿ ಲಂಕಾ ವಿರುದ್ಧ ರೋಚಕ ಗೆಲುವು ದಾಖಲಿಸಿತು. ಈ ವೇಳೆ ಮುಶ್ಫಿಕರ್ 35 ಎಸೆತಗಳಲ್ಲಿ 75 ರನ್ ಗಳಿಸಿ ಪಂದ್ಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪಂದ್ಯವನ್ನು ಗೆಲ್ಲುತ್ತಿದ್ದಂತೆ ಮುಶ್ಫಿಕರ್ ಮೈದಾನದಲ್ಲೇ ನಾಗಿನ್ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು.
Oh, this was the actual planned celebration had they won against India in 2016
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


