ಕ್ರಿಕೆಟ್

ನನ್ನಿಂದಾಗಿ ಇವತ್ತು ಎಂಎಸ್ ಧೋನಿ ಟೀಂ ಇಂಡಿಯಾದಲ್ಲಿದ್ದಾರೆ: ಪಾರ್ಥೀವ್ ಪಟೇಲ್

ಟೀ ಇಂಡಿಯಾದ ಆಟಗಾರ ಪಾರ್ಥಿವ್ ಪಟೇಲ್ ನಾನು ಅವತ್ತು ಉತ್ತಮ ಪ್ರದರ್ಶನ ನೀಡಿದ್ದರೆ ಇವತ್ತು ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾದಲ್ಲಿ ಇರುತ್ತಿರಲಿಲ್ಲ ಎಂದು ಹೇಳಿದ್ದಾರೆ...

ನನ್ನಿಂದಾಗಿ ಇವತ್ತು ಎಂಎಸ್ ಧೋನಿ ಟೀಂ ಇಂಡಿಯಾದಲ್ಲಿದ್ದಾರೆ: ಪಾರ್ಥೀವ್ ಪಟೇಲ್
ಮಹೇಂದ್ರ ಸಿಂಗ್ ಧೋನಿ-ಪಾರ್ಥಿವ್ ಪಟೇಲ್
Published On :
ಹೈದರಾಬಾದ್: ಟೀ ಇಂಡಿಯಾದ ಆಟಗಾರ ಪಾರ್ಥಿವ್ ಪಟೇಲ್ ನಾನು ಅವತ್ತು ಉತ್ತಮ ಪ್ರದರ್ಶನ ನೀಡಿದ್ದರೆ ಇವತ್ತು ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾದಲ್ಲಿ ಇರುತ್ತಿರಲಿಲ್ಲ ಎಂದು ಹೇಳಿದ್ದಾರೆ. 
ಪಾರ್ಥಿವ್ ಪಟೇಲ್ ತಮ್ಮ 17ನೇ ವಯಸ್ಸಿಗೆ ಟೀಂ ಇಂಡಿಯಾದಲ್ಲಿ ಸ್ಥಾನಪಡೆದಿದ್ದರು. ಆರಂಭದ ಕಾಲದಲ್ಲಿ ಉತ್ತಮವಾಗಿ ಆಡುತ್ತಿದ್ದ ಪಾರ್ಥಿವ್ ಪಟೇಲ್ ತದನಂತರ ಅವರಿಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದ್ದರು. 
ಅದಾದ ಬಳಿಕ 2004ರಲ್ಲಿ ಟೀಂ ಇಂಡಿಯಾಗೆ ಎಂಎಸ್ ಧೋನಿ ಪಾದಾರ್ಪಣೆ ಮಾಡಿದ್ದರು. ಆರಂಭದಲ್ಲಿ ವಿಫಲಗೊಂಡರೂ ತದನಂತರ ಅದ್ಭುತ ಪ್ರದರ್ಶನ ನೀಡುವ ಜತೆಗೆ ವಿಕೆಟ್ ಕೀಪಿಂಗ್ ನಲ್ಲಿ ಜಾದು ಮಾಡಿದ್ದರು. ಹೀಗಾಗಿ ಇವತ್ತು ಧೋನಿ ತಂಡದ ಕಾಯಂ ಸದಸ್ಯರಾಗಿದ್ದಾರೆ. 
ಇನ್ನು ಧೋನಿಯನ್ನು ಹೊಗಳಿರುವ ಪಾರ್ಥೀವ್ ಪಟೇಲ್ ಅವರೊಬ್ಬ ಮಹಾನ್ ಆಟಗಾರ. ಅವರ ಆಟ ನೋಡಲು ನಿಜಕ್ಕೂ ಅದ್ಭುತವಾಗಿರುತ್ತದೆ. ಹೀಗಾಗಿ ಇವತ್ತಿಗೂ ಅವರಿಗೆ ತಂಡದಲ್ಲಿ ಅವಕಾಶವಿದೆ ಎಂದು ಹೇಳಿದ್ದಾರೆ. 
2002ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದ ಪಾರ್ಥೀವ್ ಪಟೇಲ್ 25 ಟೆಸ್ಟ್, 38 ಏಕದಿನ ಪಂದ್ಯಗಳನ್ನಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.