ಕ್ರಿಕೆಟ್

ಕ್ರೀಡಾಸ್ಪೂರ್ತಿ ಅಂದ್ರೆ ಇದೇ ಅಲ್ವಾ... ಐತಿಹಾಸಿಕ ಟೆಸ್ಟ್ ನಲ್ಲಿ ಐತಿಹಾಸಿಕ ಘಟನೆ!

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತದ ವಿರುದ್ಧ ಏಕೈಕ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋತರೂ ಆಫ್ಘಾನಿಸ್ತಾನ ಮಾತ್ರ ಹೆಮ್ಮೆಯಿಂದ ಬೀಗುತ್ತಿದೆ.

ಕ್ರೀಡಾಸ್ಪೂರ್ತಿ ಅಂದ್ರೆ ಇದೇ ಅಲ್ವಾ... ಐತಿಹಾಸಿಕ ಟೆಸ್ಟ್ ನಲ್ಲಿ ಐತಿಹಾಸಿಕ ಘಟನೆ!
ಜಂಟಿಯಾಗಿ ಫೋಟೋಗೆ ಪೋಸ್ ನೀಡಿದ ಭಾರತ ಮತ್ತು ಆಫ್ಘಾನಿಸ್ತಾನ
Published On :
ಬೆಂಗಳೂರು: ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತದ ವಿರುದ್ಧ ಏಕೈಕ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋತರೂ  ಆಫ್ಘಾನಿಸ್ತಾನ ಮಾತ್ರ ಹೆಮ್ಮೆಯಿಂದ ಬೀಗುತ್ತಿದೆ.
ಅರೆ ಸೋತರು ಹೆಮ್ಮೆ ಪಡುತ್ತಾರೆಯೇ ಎಂದು ಅಚ್ಚರಿ ಪಡಬೇಡಿ.. ಇದಕ್ಕೆ ಕಾರಣ ಭಾರತ ತಂಡದ ಕ್ರೀಡಾಸ್ಪೂರ್ತಿ. ಹೌದು ಬೆಂಗಳೂರಿನ ಎಂ ಚಿನ್ನಸ್ವಾಮಿಕ್ರೀಡಾಂಗಣದಲ್ಲಿ ನಡೆದ ಐತಿಹಾಸಿಕ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಮತ್ತು 262 ರನ್ ಗಳ ಅಂತರದಲ್ಲಿ ಭರ್ಜರಿಯಾಗಿ ಗೆದ್ದಿತು. ಆಪ್ಘಾನಿಸ್ತಾನಕ್ಕೆ ಇದು ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಪಂದ್ಯವಾಗಿದ್ದು, ಈ ಪಂದ್ಯದಲ್ಲಿ ಹೋರಾಟ ನೀಡದೇ ಸೋತಿದ್ದು, ಆ ತಂಡದ ಮುಖಭಂಗಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಆಫ್ಘನ್ ಕೋಟ್ ಸೇರಿದಂತೆ ಇಡೀ ತಂಡದ ಆಟಗಾರರು ಪಂದ್ಯದ ಬಳಿಕ ನಿರಾಸೆಯಿಂದಿದ್ದರು.
ಆದರೆ ಆ ಬಳಿಕ ಭಾರತ ತಂಡದ ಆಟಗಾರರ ಭಾವನಾತ್ಮಕ ನಡೆ ಮಾತ್ರ ಆಫ್ಘನ್ ಆಟಗಾರರಲ್ಲಿ ಹೊಸ ಉತ್ಸಾಹ ಮೂಡಿಸಿತು. ಇದಕ್ಕೆ ಕಾರಣ ತಂಡದ ನಾಯಕ ಅಜಿಂಕ್ಯ ರಹಾನೆ ಅವರ ಕ್ರೀಡಾಸ್ಪೂರ್ತಿ. ಹೌದು ಪಂದ್ಯ ಗೆದ್ದರೂ ನಾಯಕ ರಹಾನೆ ಮಾತ್ರ ಚಾಂಪಿಯನ್ ಪಟ್ಟವನ್ನು ಪ್ರವಾಸಿ ಆಫ್ಘಾನಿಸ್ತಾನಕ್ಕೆ ನೀಡಿದರು. ಪಂದ್ಯದ ಮುಕ್ತಾಯದ ಬಳಿಕ ನಡೆದ ಪ್ರಶಸ್ತಿ ವಿತರಣೆ ಮತ್ತು ಫೋಟೋ ಪೋಸ್ ಕಾರ್ಯಕ್ರಮದ ವೇಳೆ ನಿರಾಸೆಯಿಂದ ನಿಂತಿದ್ದ ಆಪ್ಘನ್ ಆಟಗಾರರಲ್ಲಿ ಭಾರತ ತಂಡದ ನಾಯಕ ಉತ್ಸಾಹ ಮೂಡಿಸುವ ಸಲುವಾಗಿ ಅವರೊಂದಿಗೆ ಟ್ರೋಫಿ ಹಂಚಿಕೊಂಡಿದ್ದಾರೆ. ಅಲ್ಲದೆ ನಾವೆಲ್ಲರೂ ಒಂದೇ ಎನ್ನುವಂತೆ ಅವರೊಟ್ಟಿಗೆ ಜಂಟಿಯಾಗಿ ಫೋಟೋಗೆ ಪೋಸ್ ನೀಡಿದ್ದಾರೆ.
ಚೊಚ್ಚಲ ಬಾರಿಗೆ ಟೆಸ್ಟ್ ಪಂದ್ಯವಾಡಿದ ಆಫ್ಘಾನಿಸ್ತಾನ ತಂಡ ಪಂದ್ಯ ಗೆದ್ದ ಭಾರತ ತಂಡದ ಜೊತೆ ಟ್ರೋಫಿ ಮುಂದೆ ಫೋಟೋಗೆ ಫೋಸ್ ನೀಡಿ ಸಂಭ್ರಮಿಸಿತು. ಭಾರತೀಯ ಆಟಗಾರರು ಮತ್ತು ಆಫ್ಘಾನಿಸ್ತಾನದ ಆಟಗಾರರೆಲ್ಲರೂ ಒಟ್ಟಿಗೆ ನಿಂತು ಫೋಟೋಗೆ ಪೋಸ್ ನೀಡಿದ್ದು ಭಾರಿ ಪ್ರಶಂಸೆಗೆ ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.