ನಾನು 2 ವರ್ಷಗಳಿಗಿಂತ ಈಗ ಹೆಚ್ಚು ಸುಧಾರಿಸಿದ್ದೇನೆ: ತ್ರಿಶತಕ ವೀರ ಕರುಣ್ ನಾಯರ್
ಆಫ್ಘಾನಿಸ್ತಾನ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯಕ್ಕೆ ಕಮ್ ಬ್ಯಾಕ್ ಮಾಡಿರುವ ಕನ್ನಡಿಗ ಕರುಣ್ ನಾಯರ್ ಕಳೆದ ಎರಡು ವರ್ಷಗಳಿಗಿಂತ ಈಗ ಹೆಚ್ಚು ಸುಧಾರಿಸಿದ್ದೇನೆ ಎಂದು ಹೇಳಿದ್ದಾರೆ...

Published On :
ಬೆಂಗಳೂರು: ಆಫ್ಘಾನಿಸ್ತಾನ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯಕ್ಕೆ ಕಮ್ ಬ್ಯಾಕ್ ಮಾಡಿರುವ ಕನ್ನಡಿಗ ಕರುಣ್ ನಾಯರ್ ಕಳೆದ ಎರಡು ವರ್ಷಗಳಿಗಿಂತ ಈಗ ಹೆಚ್ಚು ಸುಧಾರಿಸಿದ್ದೇನೆ ಎಂದು ಹೇಳಿದ್ದಾರೆ.
ಕಳೆದ ಒಂದುವರೆ ವರ್ಷದಿಂದ ನಾನು ತಂಡದಿಂದ ದೂರ ಉಳಿದಿದ್ದೆ ಈ ವೇಳೆ ನಾನು ಬ್ಯಾಟಿಂಗ್ ಕೌಶಲ್ಯಗಳನ್ನು ಕಲಿತಿದ್ದು ಇದೀಗ ಹೆಚ್ಚು ಸದೃಢನಾಗಿ ನನ್ನನ್ನು ನಾನು ಅರಿತಿದ್ದೇನೆ. ಜೊತೆಗೆ ದೇಶೀಯಾ ಕ್ರಿಕೆಟ್ ನಲ್ಲಿ ಹೆಚ್ಚು ರನ್ ಬಾರಿಸಿದ್ದೇನೆ ಎಂದು ಹೇಳಿದ್ದಾರೆ.
2016ರಲ್ಲಿ ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 303 ರನ್ ಗಳಿಸಿದ್ದ ನಂತರ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಕರುಣ್ ನಾಯರ್ ವಿಫಲರಾಗಿದ್ದರು. ಇದೀಗ ಆಫ್ಘಾನ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿರುವ ಅವರು ಉತ್ತಮ ಪ್ರದರ್ಶನ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ.
ನನ್ನ ವೃತ್ತಿ ಜೀವನ ಇನ್ನು ಸುದೀರ್ಘವಾಗಿದೆ ಎಂದು ಭಾವಿಸುತ್ತೇನೆ. ಆಫ್ಘಾನ್ ಟೆಸ್ಟ್ ನಂತರ ಭಾರತ ಎ ತಂಡದೊಂದಿಗೆ ಆಡುತ್ತೇನೆ. ನಾನು ಅಲ್ಲಿಯವರೆಗೂ ಏನನ್ನು ಯೋಚಿಸಿಲ್ಲ. ಮುಂದಿನ ಸರಣಿಗಾಗಿ ಸಿದ್ಧತೆಯಲ್ಲಿ ತೊಡಗಿದ್ದೇನೆ ಎಂದು ಕರುಣ್ ನಾಯರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


