ಭಾರತ-ಇಂಗ್ಲೆಂಡ್ 2ನೇ ಏಕದಿನ ಪಂದ್ಯದ ನಡುವೆಯೇ ಪ್ರೇಯಸಿಗೆ ಪ್ರಪೋಸ್ ಮಾಡಿದ ಯುವಕ, ವಿಡಿಯೋ ವೈರಲ್
ಭಾರತ ಮತ್ತು ಇಂಗ್ಲೆಂಡ್ ನಡುವಿನ 2ನೇ ಏಕದಿನ ಪಂದ್ಯ ಸ್ವಾರಸ್ಯಕರ ಘಟನೆಯೊಂದಕ್ಕೆ ಸಾಕ್ಷಿಯಾಗಿದ್ದು, ಪಂದ್ಯ ನಡೆಯುತ್ತಿರುವಾಗಲೇ ಯುವಕನೋರ್ವ ತನ್ನ ಪ್ರೇಯಸಿಗೆ ಪ್ರೇಮ ನಿವೇದನೆ ಮಾಡಿದ್ದಾನೆ.

Published On :
ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ 2ನೇ ಏಕದಿನ ಪಂದ್ಯ ಸ್ವಾರಸ್ಯಕರ ಘಟನೆಯೊಂದಕ್ಕೆ ಸಾಕ್ಷಿಯಾಗಿದ್ದು, ಪಂದ್ಯ ನಡೆಯುತ್ತಿರುವಾಗಲೇ ಯುವಕನೋರ್ವ ತನ್ನ ಪ್ರೇಯಸಿಗೆ ಪ್ರೇಮ ನಿವೇದನೆ ಮಾಡಿದ್ದಾನೆ.
ಲಂಡನ್ ಮೂಲದ ಯುವಕ ತನ್ನ ಪ್ರೇಯಸಿಗೆ ಮಂಡಿಯೂರಿ ಉಂಗುರ ಕೊಟ್ಟು ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಹತ್ತಿರದಲ್ಲಿದ್ದ ನೂರಾರು ಮಂದಿ ಪ್ರೇಕ್ಷಕರು ಯುವ ಜೋಡಿಗೆ ಚಪ್ಪಾಳೆ ತಟ್ಟಿ ಹಾರೈಸಿದ್ದಾರೆ. ಈ ವಿಡಿಯೋವನ್ನು ಪ್ರೇಕ್ಷಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಂತೆಯೇ ಇದು ಲಾರ್ಡ್ಸ್‌ನಲ್ಲಿ ಮೊದಲ ಪ್ರೇಮ ನಿವೇದನೆ ಎಂದು ಬರೆದು ಕೊಂಡಿದ್ದಾನೆ.
ಯುವಕನ ಪ್ರೇಮ ನಿವೇದನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
Oh wow. First televised proposal at Lord’s and Bumble is all over it
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
indiaಭಾರತಇಂಗ್ಲೆಂಡ್Englandಲಾರ್ಡ್ಸ್ಪ್ರೇಮ ನಿವೇದನೆCricket Offbeatಕ್ರಿಕೆಟ್ ಸ್ವಾರಸ್ಯLordsLove Pruposeಲವ್ ಪ್ರಪೋಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


