ಅನುಷ್ಕಾ ಕದ್ದುಮುಚ್ಚಿ ಪಂದ್ಯ ವೀಕ್ಷಿಸಿದ್ದು ಯಾಕೆ?, ಸರಣಿ ಗೆಲುವಿನ ಬಳಿಕ ವಿರುಷ್ಕಾ ಹಗ್!
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಆಂಗ್ಲರ ನಾಡಲ್ಲಿ ಟಿ20 ಸರಣಿಯನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಇದರ ಜೊತೆಗೆ ಇಲ್ಲೊಂದು ವಿಶೇಷ ಸಂಗತಿಯೊಂದು ನಡೆದಿದೆ.

Published On :
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಆಂಗ್ಲರ ನಾಡಲ್ಲಿ ಟಿ20 ಸರಣಿಯನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಇದರ ಜೊತೆಗೆ ಇಲ್ಲೊಂದು ವಿಶೇಷ ಸಂಗತಿಯೊಂದು ನಡೆದಿದೆ. ಗಂಡನಾದವನು ತಂಡವನ್ನು ಮುನ್ನಡೆಸಬೇಕಾದರೇ ಪತ್ನಿಯಾದವಳು ಕ್ರೀಡಾಂಗಣದಲ್ಲಿ ಬಹಿರಂಗವಾಗಿ ಕಾಣಿಸಿಕೊಂಡು ತಂಡವನ್ನು ಪ್ರೋತ್ಸಾಹಿಸುವುದು ಸಾಮಾನ್ಯ.
ಆದರೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾಗೆ ಕ್ರೀಡಾಂಗಣದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಂತೆ ಹೇಳಿದ್ದರಂತೆ. ಅದೇ ರೀತಿ ಅನುಷ್ಕಾ ಶರ್ಮಾ ಸಹ ಯಾರಿಗೂ ಕಾಣಿಸದಂತೆ ಪಂದ್ಯವನ್ನು ವೀಕ್ಷಿಸಿದ್ದು ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯ ಗೆದ್ದು ತಂಡ ಸರಣಿ ಗೆದ್ದ ನಂತರ ಅನುಷ್ಕಾ ಬಹಿರಂಗವಾಗಿ ಕಾಣಿಸಿಕೊಂಡಿದ್ದರು. ಅಲ್ಲದೆ ಈ ಸಂತೋಷವನ್ನು ವಿರುಷ್ಕಾ ಜೋಡಿ ಮೈದಾನದಲ್ಲಿ ತಬ್ಬಿಕೊಳ್ಳುವ ಮೂಲಕ ಸಂಭ್ರಮಿಸಿದರು.
ಕ್ರೀಡಾಂಗಣದಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳದಂತೆ ಅನುಷ್ಕಾಗೆ ವಿರಾಟ್ ಕೊಹ್ಲಿ ಹೇಳಲು ಒಂದು ಕಾರಣವಿದೆ. ಅದೇನೆಂದರೆ ಮೈದಾನದಲ್ಲಿ ಅನುಷ್ಕಾ ಕಾಣಿಸಿಕೊಂಡ ಕೆಲ ಪಂದ್ಯಗಳನ್ನು ತಂಡ ಸೋತಿದೆ. ಭಾರತ ಪಂದ್ಯ ಸೋಲಲು ಅನುಷ್ಕಾ ಕಾರಣ ಎಂದು ಕೆಲ ಅಭಿಮಾನಿಗಳು ಈ ಹಿಂದೆ ಟ್ವೀಟ್ ಮಾಡುವ ಮೂಲಕ ವಿರುಷ್ಕಾರ ಕಾಲೆಳೆದಿದ್ದರು. ಈ ಹೆದರಿಕೆಯಿಂದಲೇ ಅನುಷ್ಕಾ ಇಂಗ್ಲೆಂಡ್ ಸರಣಿಯ ಟಿ20 ಪಂದ್ಯಗಳನ್ನು ಯಾರಿಗೂ ಕಾಣದಂತೆ ನೋಡಿದರು. ಇನ್ನು ಟಿ20 ಸರಣಿ ಗೆದ್ದ ನಂತರ ಅವರು ಮೈದಾನಕ್ಕೆ ಬಂದಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು.
ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ 2-1ರ ಅಂತರದಿಂದ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಇನ್ನು ಇಂಗ್ಲೆಂಡ್ ಮೈದಾನದಲ್ಲಿ ಇದು ಟೀಂ ಇಂಡಿಯಾದ ಮೊದಲ ಟಿ20 ಸರಣಿ ಗೆಲುವಾಗಿದೆ.
@AnushkaSharma & @imVkohli after the series win at The Bristol Pavilion ♥️
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಟೀಂ ಇಂಡಿಯಾTeam IndiaAnushka Sharmaಅನುಷ್ಕಾ ಶರ್ಮಾVirat Kohliವಿರಾಟ್ ಕೊಹ್ಲಿEnglandT20 seriesಟಿ20 ಸರಣಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


