ನೀನು ಸಿಕ್ಸರ್ ಹೊಡೆದರೆ ಮುಂಬೈ ತಂಡಕ್ಕೆ ಸೇರಿಕೊಳ್ಳುತ್ತೇನೆ: ರೋಹಿತ್ ಗೆ ಆಸಿಸ್ ನಾಯಕನ ಸವಾಲು
ನೀನು ಸಿಕ್ಸರ್ ಹೊಡೆದರೆ ಮುಂಬೈ ತಂಡಕ್ಕೆ ಸೇರಿಕೊಳ್ಳುತ್ತೇನೆ ಎಂದು ಟೀಂ ಇಂಡಿಯಾದ ಬ್ಯಾಟ್ಸಮನ್ ರೋಹಿತ್ ಶರ್ಮಾಗೆ ಆಸಿಸ್ ನಾಯಕ ಟಿಮ್ ಪೈನೆ ಸವಾಲು ಎಸೆದಿದ್ದಾರೆ.

Published On :
ಮೆಲ್ಬೋರ್ನ್: ನೀನು ಸಿಕ್ಸರ್ ಹೊಡೆದರೆ ಮುಂಬೈ ತಂಡಕ್ಕೆ ಸೇರಿಕೊಳ್ಳುತ್ತೇನೆ ಎಂದು ಟೀಂ ಇಂಡಿಯಾದ ಬ್ಯಾಟ್ಸಮನ್ ರೋಹಿತ್ ಶರ್ಮಾಗೆ ಆಸಿಸ್ ನಾಯಕ ಟಿಮ್ ಪೈನೆ ಸವಾಲು ಎಸೆದಿದ್ದಾರೆ.
ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ 2ನೇ ದಿನದಾಟದ ವೇಳೆ ರೋಹಿತ್ ಶರ್ಮಾ ರನ್ನು ಆಸಿಸ್ ನಾಯಕ ಟಿಮ್ ಪೈನೆ ಕಿಚಾಯಿಸಿದರು. ರೋಹಿತ್ ಬ್ಯಾಟಿಂಗ್ ಮಾಡುತ್ತಿದ್ದಾಗ ಐಪಿಎಲ್ ಟೂರ್ನಿಯ ಕುರಿತು ಮಾತನಾಡಿದ ಪೈನೆ, ರೋಹಿತ್ ಎಂಸಿಜಿಯಲ್ಲಿ ಸಿಕ್ಸರ್ ಬಾರಿಸಿದರೆ ನಾನು ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರಿಕೊಳ್ಳುತ್ತೇನೆ ಎಂದು ಹೇಳಿದರು. ಪೈನೆ ಮಾತು ಕೇಳಿದ ರೋಹಿತ್ ನಕ್ಕು ಸುಮ್ಮನಾದರು.
ಆದರೆ ಅಷ್ಟಕ್ಕೆ ಸುಮ್ಮನಾಗದ ಪೈನೆ ತಮ್ಮ ಬದಿಯಲ್ಲಿದ್ದ ಆ್ಯರಾನ್ ಫಿಂಚ್ ರನ್ನು ಉದ್ದೇಶಿಸಿ ನೀನು ಎಲ್ಲ ತಂಡದಲ್ಲೂ ಆಡಿದ್ದೀಯಲ್ಲ.. ಎಂದರು. ಅದಕ್ಕೆ ಫಿಂಚ್ ಉತ್ತರು ಹೌದು... ಆದರೆ ಬೆಂಗಳೂರು ತಂಡವನ್ನು ಹೊರತು ಪಡಿಸಿ ಎಂದು ಉತ್ತರಿಸಿದರು. ಆ ಮೂಲಕ ಪೈನೆ ರೋಹಿತ್ ಶರ್ಮಾ ಅವರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡಿದರು.
ಆಸಿಸ್ ನಾಯಕನ ಈ ಎಲ್ಲ ಕೃತ್ಯ ಸ್ಟಂಪ್ ಮೈಕ್ ನಲ್ಲಿ ರೆಕಾರ್ಡ್ ಆಗಿದೆ. ಅಷ್ಟೇ ಅಲ್ಲದೆ ಇದನ್ನು ಕೇಳಿಸಿಕೊಂಡ ಕಾಮೆಂಟಟೇರ್ಸ್ ಕೂಡ ನಕ್ಕು ನಲಿದರು. ಇದೀಗ ಈ ವಿಡಿಯೋ ವೈರಲ್ ಆಗಿದೆ.
"If Rohit hits a six here I'm changing to Mumbai"
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


