ಕ್ರಿಕೆಟ್

ಬಾಕ್ಸಿಂಗ್​ ಡೇ ಟೆಸ್ಟ್​ಗೆ ರವೀಂದ್ರ ಜಡೇಜಾ ಫಿಟ್: ಬಿಸಿಸಿಐ ದೃಢೀಕರಣ

ಭಾರತ- ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಗೆ ರವೀಂದ್ರ ಜಡೇಜಾ ಆಯ್ಕೆಯಾಗಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ(ಬಿಸಿಸಿಐ) ದೃಢಪಡಿಸಿದೆ.

ಬಾಕ್ಸಿಂಗ್​ ಡೇ ಟೆಸ್ಟ್​ಗೆ ರವೀಂದ್ರ ಜಡೇಜಾ ಫಿಟ್: ಬಿಸಿಸಿಐ ದೃಢೀಕರಣ
ರವೀಂದ್ರ ಜಡೇಜಾ
Published On :
ಮೆಲ್ಬೋರ್ನ್: ಭಾರತ- ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಗೆ ರವೀಂದ್ರ ಜಡೇಜಾ ಆಯ್ಕೆಯಾಗಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ದೃಢಪಡಿಸಿದೆ.
ಭಾರತ ಕ್ರಿಕೆಟ್ ನ ಅತ್ಯುನ್ನತ ಸಂಸ್ಥೆಯಾದ ಬಿಸಿಸಿಐ ಪರ್ಥ್ ಟೆಸ್ಟ್ ನಲ್ಲಿ ರವೀಂದ್ರ ಜಡೇಜಾ ಅನುಪಸ್ಥಿತಿಯು ಭಾರತ ತಂಡದ ಮೇಲೆ ಮಹತ್ವದ ಪರಿಣಾಮ ಬೀರಿದ್ದು ಭಾರತ 146 ರನ್ ಗಳ ಸೋಲು ಕಂಡಿತು ಎಂದಿದೆ. ಅದೇ ವೇಳೆ ಗಾಯದ ಸಮಸ್ಯೆಯಿಂದ ಇನ್ನೂ ಚೇತರಿಸಿಕೊಳ್ಳದ ಆರ್. ಅಶ್ವಿನ್ ಈ ಬಾರಿಯೂ ಕ್ರೀಸ್ ಗಿಳಿಯುವುದು ಅನುಮಾನ ಎನ್ನಲಾಗಿದೆ.
ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ XI ವಿರುದ್ಧದ ಅಭ್ಯಾಸ ಪಂದ್ಯದ ಮೊದಲು ಜಡೇಜಾ ಭುಜದ ತೊಂದರೆ ಬಗ್ಗೆ ಹೇಳಿದ್ದರು.ಆದರೆ ಜಡೇಜಾ ಮತ್ತೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬಿಸಿಸಿಐ ಹೇಳಿದೆ.
2018,ರವೆಸ್ಟ್ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ದೀರ್ಘಾವಧಿಯ ಬೌಲಿಂಗ್ಬಳಿಕ ಆಲ್-ರೌಂಡರ್ ರವೀಂದ್ರ ಜಡೇಜಾ ಎಡ ಭುಜದ ನೋವಿನಿಂದ ಬಳಲಿದ್ದರು.ನವೆಂಬರ್ 2 ರಂದು ಮುಂಬೈಯಲ್ಲಿ ಈ ಸಂಬಂಧ ಅವರು ಚಿಕಿತ್ಸೆ ಪಡೆದಿದ್ದರು ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೆ ಈ ಚಿಕಿತ್ಸೆ ಬಳಿಕ ಜಡೇಜಾ ಉತ್ತಮವಾಗಿ ಚೇತರಿಸಿಕೊಂಡಿದ್ದು  12 ರಿಂದ 15 ನವೆಂಬರ್ ವರೆಗೆ ನಡೆದ ಸೌರಾಷ್ಟ್ರದ ರಣಜಿ ಟ್ರೋಫಿಯಲ್ಲಿ ಅವರು 64 ಓವರ್ ಗಳನ್ನು ಪೂರ್ಣಗೊಳಿಸಿದ್ದರು.ಈಗ ಅವರು ಯಾವುದೇ ಸಮಸ್ಯೆ ಇಲ್ಲದೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಆಗಮಿಸಲಿದ್ದಾರೆ.
" ಜಡೇಜಾ ಅವರ ಎಡಗೈ ಭುಜದ ನೋವು ಗುಣಮುಖವಾಗಿದ್ದು ಮೆಲ್ಬೊರ್ನ್ ಸರಣಿಯ 3 ನೇ ಟೆಸ್ಟ್ ಪಂದ್ಯಕ್ಕಾಗಿ ಈಗ ಅವರು ಲಭ್ಯವಿರುತ್ತಾರೆ."ಬಿಸಿಸಿಐ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.