ತಮ್ಮದೇ ವಿವಾದಾತ್ಮಕ ಕ್ಯಾಚ್ ಅನುಕರಣೆ ಮಾಡಿದ ಕೊಹ್ಲಿ: ವಿಡಿಯೋ ವೈರಲ್
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮದೇ ವಿವಾದಾತ್ಮಕ ಕ್ಯಾಚ್ ಅನುಕರಣೆ ಮಾಡುವ ಮೂಲಕ ಕಾಂಗರೂಗಳ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.

Published On :
ಪರ್ತ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮದೇ ವಿವಾದಾತ್ಮಕ ಕ್ಯಾಚ್ ಅನುಕರಣೆ ಮಾಡುವ ಮೂಲಕ ಕಾಂಗರೂಗಳ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.
ಹೌದು.. ಭಾರತ ತಂಡದ ಮೊದಲ ಇನ್ನಿಂಗ್ಸ್ ವೇಳೆ ಶತಕ ಸಿಡಿಸಿ ಬೃಹತ್ ಮೊತ್ತದತ್ತ ಮುನ್ನುಗ್ಗುತ್ತಿದ್ದ ಕೊಹ್ಲಿ ವಿವಾದಾತ್ಮಕ ಕ್ಯಾಚ್ ಗೆ ಬಲಿಯಾಗಿದ್ದರು. ಪ್ಯಾಟ್ ಕಮಿನ್ಸ್ ಬೌಲಿಂಗ್ ನಲ್ಲಿ ಪೀಟರ್ ಹ್ಯಾಂಡ್ಸ್ ಕಾಂಬ್ ಹಿಡಿದಿದ್ದ ಕ್ಯಾಚ್ ವಿವಾದಕ್ಕೆ ಕಾರಣವಾಗಿತ್ತು. ಚೆಂಡು ಪೀಟರ್ ಹ್ಯಾಂಡ್ಸ್ ಕಾಂಬ್ ಕೈ ಸೇರುವ ಮುನ್ನ ನೆಲಕ್ಕೆ ತಾಗಿತ್ತು. ಹೀಗಾಗಿ ಇದು ಔಟ್ ಅಲ್ಲ ಎಂದು ಅಭಿಮಾನಿಗಳು ಕೂಗಿದ್ದರು. ಆದರೆ ಫೀಲ್ಡ್ ಅಂಪೈರ್ ಮಾತ್ರ ತತ್ ಕ್ಷಣವೇ ಔಟ್ ನೀಡಿದ್ದರು. ಅದು ಸಾಲದು ಎಂಬಂತೆ ಥರ್ಡ್ ಅಂಪೈರ್ ಕೂಡ ಇದನ್ನು ಔಟ್ ಎಂದು ತೀರ್ಪು ನೀಡಿದ್ದರು.
ಹೀಗಾಗಿ ಕೊಹ್ಲಿ ಬೇರೆ ಮಾರ್ಗವಿಲ್ಲದೇ ಅಸಮಾಧಾನದಿಂದಲೇ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದ್ದರು. ಇನ್ನು ಈ ವಿಚಾರ ದಿನದಾಟದ ಅಂತ್ಯದ ಬಳಿಕವೂ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಕ್ಯಾಮೆರಾಗಳಲ್ಲಿ ಚೆಂಡು ಪೀಟರ್ ಹ್ಯಾಂಡ್ಸ್ ಕಾಂಬ್ ಕೈ ಸೇರುವ ಮುನ್ನ ನೆಲಕ್ಕೆ ತಾಗಿರುವಂತೆ ಕಂಡಿತ್ತು.
ಇನ್ನು ಇದನ್ನ ಕೊಹ್ಲಿ ಇಂದು ಬೆಳಗ್ಗೆ ತರಬೇತಿ ವೇಳೆ ಅನುಕರಿಸುವ ಮೂಲಕ ಕಾಂಗರೂಗಳ ಕಿಚಾಯಿಸುವ ಕೆಲಸ ಮಾಡಿದರು. ಪೀಟರ್ ಹ್ಯಾಂಡ್ಸ್ ಕಾಂಬ್ ಜಿಗಿದಂತೆಯೇ ತಾವೂ ಕೂಡ ಜಿಗಿದು ಔಟ್ ಎಂದು ಕೂಗುವ ಮೂಲಕ ತಮ್ಮ ವಿವಾದಾತ್ಮಕ ಕ್ಯಾಚ್ ಗೆ ತಿರುಗೇಟು ನೀಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
Kohli mimicking Handscomb today over yesterday's controversial catch
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಕ್ರಿಕೆಟ್indiaಭಾರತಆಸ್ಟ್ರೇಲಿಯಾAustraliaVirat Kohliವಿರಾಟ್ ಕೊಹ್ಲಿPerthಪರ್ತ್Cricket OffbeatPeter Handscombಟಿಮ್ ಪೈನೆKohli Controversial Catch
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


