ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ವಿರುಷ್ಕಾ: ಪತ್ನಿ ಬಗ್ಗೆ ಕೊಹ್ಲಿ ಹೇಳಿದ್ದೇನು ಗೊತ್ತಾ?
ಪ್ರಣಯ ಪಕ್ಷಿಗಳಂತೆ ತೇಲುತ್ತಿದ್ದ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಮಂಗಳವಾರಕ್ಕೆ ವರ್ಷಗಳು ಕಳೆದಿವೆ...

Published On :
ಮುಂಬೈ: ಪ್ರಣಯ ಪಕ್ಷಿಗಳಂತೆ ತೇಲುತ್ತಿದ್ದ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಮಂಗಳವಾರಕ್ಕೆ ವರ್ಷಗಳು ಕಳೆದಿವೆ.
ವಿವಾಹ ವಾರ್ಷಿಕೋತ್ಸವ ಸಂಭ್ರಮವನ್ನು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಆಚರಿಸುತ್ತಿದ್ದು, ಈಗಾಗಲೇ ಜೋಡಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಸುರಿಮಳೆಗಳೇ ಹರಿದು ಬರುತ್ತಿವೆ.
ಈ ನಡುವಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಪತ್ನಿ ಅನುಷ್ಕಾ ಶರ್ಮಾ ಬಗ್ಗೆ ಬರೆದಿರುವ ವಿರಾಟ್ ಕೊಹ್ಲಿಯವರು, ಪತ್ನಿಯನ್ನು ಕೊಂಡಾದಿದ್ದಾರೆ.
ಮದುವೆಯಾಗಿ ಆಗಲೇ ಒಂದು ವರ್ಷ ಕಳೆದಿದೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ನಿನ್ನೆಯಷ್ಟೇ ಮದುವೆಯಾದಂತಿದೆ. ಕಾಲ ಎಷ್ಟು ಬೇಗ ಉರುಳುತ್ತದೆ ಎಂಬುದು ತಿಳಿಯುವುದಿಲ್ಲ. ನನ್ನ ಆಪ್ತ ಗೆಳತಿ ಹಾಗೂ ಅರ್ಧಾಂಗಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಎಂದು ಹೇಳಿದ್ದಾರೆ.
ಇನ್ನು ಅನುಷ್ಕಾ ಶರ್ಮಾ ಕೂಡ ವಿವಾಹದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕೊಹ್ಲಿಯವರನ್ನು ಕೊಂಡಾಡಿದ್ದಾರೆ. ಸಮಯ ಹೋಗುವುದು ನಿಮಗೆ ತಿಳಿಯದೇ ಹೋಗುವುದು ಸ್ವರ್ಗವಿದ್ದಂತೆ. ಒಬ್ಬ ಉತ್ತಮ ವ್ಯಕ್ತಿಯನ್ನು ನೀವು ವಿವಾಹವಾಗುವುದು ಸ್ವರ್ಗ ಎಂದು ಹೇಳಿಕೊಂಡಿದ್ದಾರೆ.
It's heaven, when you don't sense time passing by ... It's heaven, when you marry a good 'man' ...
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Twitterಟ್ವಿಟರ್Anushka Sharmaಅನುಷ್ಕಾ ಶರ್ಮಾVirat Kohliವಿರಾಟ್ ಕೊಹ್ಲಿWedding Anniversaryವಿವಾಹ ವಾರ್ಷಿಕೋತ್ಸವ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


