ರಾಷ್ಟ್ರೀಯ ತಂಡದ ಬಳಿಕ ಇದೀಗ ಆರ್ ಸಿಬಿ ಕೂಡ ಸಂಪೂರ್ಣ 'ಕೊಹ್ಲಿ ಮಯ'!
ಐಪಿಎಲ್ 2018ನ ಸೋಲಿನ ಕಹಿಯನ್ನು ಮರೆಯಲು ಮುಂದಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ತಂಡದಲ್ಲಿ ಬದಲಾವಣೆ ಮಾಡಲು ಮುಂದಾಗಿದೆ.

Published On :
ಬೆಂಗಳೂರು: ಐಪಿಎಲ್ 2018ನ ಸೋಲಿನ ಕಹಿಯನ್ನು ಮರೆಯಲು ಮುಂದಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ತಂಡದಲ್ಲಿ ಬದಲಾವಣೆ ಮಾಡಲು ಮುಂದಾಗಿದೆ.
ಮೂಲಗಳ ಪ್ರಕಾರ 2019ರ ಐಪಿಎಲ್ ಟೂರ್ನಿ ಹೊತ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ತನ್ನ ಕೋಚಿಂಗ್ ಸ್ಟಾಫ್ ಬದಲಾಯಿಸಲು ಮುಂದಾಗಿದೆ. ಕಳೆದ ಐಪಿಎಲ್ ಸೀಸನ್ನಲ್ಲಿ ಆರ್ಸಿಬಿ 14 ಪಂದ್ಯಗಳಲ್ಲಿ ಕೇವಲ 6 ಪಂದ್ಯಗಳಲ್ಲಿ ಮಾತ್ರ ಗೆಲುವು ದಾಖಲಿಸಿತು. ಹೀಗಾಗಿ ಸಪೋರ್ಟಿಂಗ್ ಸ್ಟಾಫ್ನಲ್ಲಿ ಚೇಂಜಸ್ ಮಾಡಲು ಹೊರಟಿರುವ ಆರ್ಸಿಬಿ ಫ್ರಾಂಚೈಸಿ ಕೋಚಿಂಗ್ ಸಿಬ್ಬಂದಿಗಳ ಬದಲಾವಣೆ ಮಾಡಲು ಮುಂದಾಗಿದೆ.
ಮೂಲಗಳ ಪ್ರಕಾರ ಆರ್ ಸಿಬಿಯ ಪ್ರಧಾನ ಕೋಚ್ ಡೇನಿಯಲ್ ವೆಟ್ಟೋರಿ , ಫೀಲ್ಡಿಂಗ್ ಕೋಚ್ ಟ್ರೆಂಟ್ ವುಡ್ ಹಿಲ್, ಬೌಲಿಂಗ್ ಕೋಚ್ ಆಂಡ್ರ್ಯೂ ಮೆಕ್ಡೊನಾಲ್ಡ್ ಅವರಿಗೆ ಕೊಕ್ ನೀಡಿದೆ. ಆದರೆ ಆರ್ಸಿಬಿ ಶೇರ್ ಹೋಲ್ಡರ್ಸ್ ಡಿಯಾಗೋ ಮ್ಯಾನೇಜ್ಮೆಂಟ್, ಆಶಿಶ್ ನೆಹ್ರಾರನ್ನ ತಂಡದ ಬೌಲಿಂಗ್ ಮೆಂಟರ್ ಆಗಿ ಮುಂದುವರೆಸಲು ತೀರ್ಮಾನಿಸಿದೆ.
ರಾಷ್ಟ್ರೀಯ ತಂಡದಂತೆ ಆರ್ ಸಿಬಿ ಕೂಡ ಕೊಹ್ಲಿ
ಈ ಹಿಂದೆ ಟೀಂ ಇಂಡಿಯಾದ ಕೋಚ್ ಆಯ್ಕೆ ವೇಳೆ ಬಿಸಿಸಿಐ ಕೊಹ್ಲಿ ಅಭಿಪ್ರಾಯದಂತೆ ನಡೆದುಕೊಂಡಿತ್ತು. ಇದೇ ವ್ಯವಸ್ಥೆ ಇಲ್ಲಿಯೂ ಪುನಾರವರ್ತನೆಯಾಗುವು ಸಾಧ್ಯತೆ ಇದ್ದು, ಮೂಲಗಳ ಪ್ರಕಾರ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ, ತಂಡದ ಮುಖ್ಯ ಕೋಚ್ ಆಯ್ಕೆ ಮಾಡಲಿದ್ದಾರಂತೆ. ಇನ್ನು ಆರ್ ಸಿಬಿ ಪ್ರಧಾನ ಕೋಚ್ ರೇಸ್ ನಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಮುಂದಿದ್ದಾರೆ ಎನ್ನಲಾಗಿದೆ.
ಸಂಜಯ್ ಬಂಗಾರ್ ಗೆ ಎದುರಾಗಲಿದೆ ವೈಯುಕ್ತಿಕ ಹಿತಾಸಕ್ತಿ ಸಂಘರ್ಷದ ಬರೆ
ಒಂದು ವೇಳೆ ಬಂಗಾರ್ ಆರ್ಸಿಬಿ ಕೋಚ್ ಹುದ್ದೆ ಅಲಂಕರಿಸಿದ್ದೇ ಆದರೆ, ಅಗ ಅವರು ಕಾನ್ ಫ್ಲಿಕ್ಟ್ ಆಫ್ ಇಂಟ್ರೆಸ್ಟ್ (ವೈಯುಕ್ತಿಕ ಹಿತಾಸಕ್ತಿ ಸಂಘರ್ಷ)ನಿಂದ ಹೊರಬರಲು, ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ಹುದ್ದೆಯನ್ನ ತ್ಯಜಿಸಬೇಕಾಗುತ್ತದೆ. ಒಟ್ಟಾರೆ ಇದೀಗ ಆರ್ ಸಿಬಿ ಕೋಚ್ ಆಯ್ಕೆ ಕೂಡ ಕುತೂಹಲ ಕೆರಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಬೆಂಗಳೂರುBengaluruVirat Kohliವಿರಾಟ್ ಕೊಹ್ಲಿDaniel Vettoriಡೇನಿಯಲ್ ವೆಟ್ಟೋರಿRCBಐಪಿಎಲ್ 2018IPL2018
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


