ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದ 2ನೇ ಉತ್ತಮ ಇನ್ನಿಂಗ್ಸ್: ಶತಕದ ಕುರಿತು ಕೊಹ್ಲಿ ಹೇಳಿಕೆ
ಎಡ್ಜ್ ಬ್ಯಾಸ್ಟನ್ ನಲ್ಲಿ ಗುರುವಾರ ಸಿಡಿಸಿದ ಶತಕ ನನ್ನ ವೃತ್ತಿ ಜೀವನದ 2ನೇ ಅವಿಸ್ಮರಣೀಯ ಇನ್ನಿಂಗ್ಸ್ ಎಂದು ಭಾರತ ತಂಡದ ನಾಕ ವಿರಾಟ್ ಕೊಹ್ಲಿ ಬಣ್ಣಿಸಿದ್ದಾರೆ.

Published On :
ಲಂಡನ್: ಎಡ್ಜ್ ಬ್ಯಾಸ್ಟನ್ ನಲ್ಲಿ ಗುರುವಾರ ಸಿಡಿಸಿದ ಶತಕ ನನ್ನ ವೃತ್ತಿ ಜೀವನದ 2ನೇ ಅವಿಸ್ಮರಣೀಯ ಇನ್ನಿಂಗ್ಸ್ ಎಂದು ಭಾರತ ತಂಡದ ನಾಕ ವಿರಾಟ್ ಕೊಹ್ಲಿ ಬಣ್ಣಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಒಟ್ಟು 225 ಎಸೆತಗಳಲ್ಲಿ 149 ರನ್ ಪೇರಿಸಿದರು. ಆ ಮೂಲಕ ತಂಡ ಗಳಿಸಿದ ಒಟ್ಟಾರೆ ಮೊತ್ತದಲ್ಲಿ ಶೇ.55ರಷ್ಟು ರನ್ ಗಳನ್ನು ತಾವೊಬ್ಬರೇ ಗಳಿಸಿದರು. ಇನ್ನು ಇಂಗ್ಲೆಂಡ್ ನೆಲದಲ್ಲಿ ತಮ್ಮ ಈ ಹಿಂದಿನ ಕಳಪೆ ಪ್ರದರ್ಶನವನ್ನು ಮೆಟ್ಟಿನಿಂತ ಕೊಹ್ಲಿ ಶತಕ ಸಿಡಿಸಿದರು.
ದಿನದಾಟದ ಬಳಿಕ ಈ ಬಗ್ಗೆ ಬಿಸಿಸಿಐ ಟಿವಿಯೊಂದಿಗೆ ಮಾತನಾಡಿದ ವಿರಾಟ್ ಕೊಹ್ಲಿ, ಇದು ನನ್ನ ವೃತ್ತಿ ಜೀವನದ ಎರಡನೇ ಅವಿಸ್ಮರಣೀಯ ಇನ್ನಿಂಗ್ಸ್ ಎಂದು ಹೇಳಿದ್ದಾರೆ. ಇನ್ನು2015ರಲ್ಲಿ ಅಡಿಲೇಡ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ ಗಳಿಸಿದ್ದ 141 ರನ್ ಗಳ ಶತಕ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ ಎಂದು ಹೇಳಿದ್ದಾರೆ.
ನಿಜಕ್ಕೂ ಅಡಿಲೇಡ್ ಇನ್ನಿಂಗ್ಸ್ ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ, 364 ರನ್ ಗಳನ್ನು ಬೆನ್ನು ಹತ್ತಿದ್ದಾಗ ಅಂತಿಮ ದಿನದಲ್ಲಿ ಬಂದ ಶತಕವದು. ಹೀಗಾಗಿ ಅದು ನನ್ನ ವೃತ್ತಿ ಜೀವನ ಅವಿಸ್ನರಣೀಯ ಇನ್ನಿಂಗ್ಸ್ ಎಂದು ಹೇಳಿದ್ದಾರೆ. ಅಂತೆಯೇ ಹಾಲಿ ಶತಕದ ಕುರಿತು ಮಾತನಾಡಿದ ಅವರು, ಕಣಕ್ಕಿಳಿಯುವಾಗಲೇ ನಾನು ಸುದೀರ್ಘ ಸಮಯ ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದ. ಅದಕ್ಕೆ ತಕ್ಕಂತೆ ನನ್ನ ಮನಸ್ಥಿತಿಯನ್ನೂ ಬದಲಿಸಿಕೊಂಡಿದ್ದೆ, ಹೀಗಾಗಿ ಶತಕ ಸಾಧ್ಯವಾಯಿತು. ನಿಜಕ್ಕೂ ಈ ಶತಕ ಖುಷಿ ನೀಡಿದೆ ಎಂದು ಕೊಹ್ಲಿ ಹೇಳಿದ್ದಾರೆ.
ಅಂತೆಯೇ ಇನ್ನಿಂಗ್ಸ್ ನ ಅಂತಿಮ ಭಾಗದಲ್ಲಿ ಬೌಲರ್ ಗಳಾದ ಹಾರ್ದಿಕ್ ಪಾಂಡ್ಯ, ಇಶಾಂತ್ ಶರ್ಮಾ, ಉಮೇಶ್ ಯಾದವ್ ಉತ್ತಮ ಸಹಕಾರ ನೀಡಿದರು ಎಂದು ಕೊಹ್ಲಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


