ಬರೊಬ್ಬರಿ 1 ಸಾವಿರ ಟೆಸ್ಟ್ ಪಂದ್ಯವಾಡಿದ ಏಕೈಕ ತಂಡವಿದು, ಈ ಸಾಧನೆಗೆ ಸಾಕ್ಷಿಯಾಗಿದ್ದು ಮಾತ್ರ ಭಾರತ!
ವಿಶ್ವ ಕ್ರಿಕೆಟ್ ನಲ್ಲಿ ಬರೊಬ್ಬರಿ 1 ಸಾವಿರ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವನ್ನಾಡಿದ ಮೊದಲ ತಂಡ ಎಂಬ ಕೀರ್ತಿಗೆ ಈ ತಂಡ ಭಾಜನವಾಗಿದ್ದು,. ವಿಶೇಷವೆಂದರೆ ಈ ತಂಡದ ಸಾಧನೆಗೆ ಭಾರತೀಯ ಕ್ರಿಕೆಟ್ ತಂಡ ಸಾಕ್ಷಿಯಾಗಿರುವುದು ವಿಶೇಷ.

Published On :
ಲಂಡನ್: ವಿಶ್ವ ಕ್ರಿಕೆಟ್ ನಲ್ಲಿ ಬರೊಬ್ಬರಿ 1 ಸಾವಿರ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವನ್ನಾಡಿದ ಮೊದಲ ತಂಡ ಎಂಬ ಕೀರ್ತಿಗೆ ಈ ತಂಡ ಭಾಜನವಾಗಿದ್ದು,. ವಿಶೇಷವೆಂದರೆ ಈ ತಂಡದ ಸಾಧನೆಗೆ ಭಾರತೀಯ ಕ್ರಿಕೆಟ್ ತಂಡ ಸಾಕ್ಷಿಯಾಗಿರುವುದು ವಿಶೇಷ.
ಹೌದು.. ಕ್ರಿಕೆಟ್ ಜನಕರ ನಾಡು ಇಂಗ್ಲೆಂಡ್ ತಂಡ ಇಂತಹುದೊಂದು ಐತಿಹಾಸಿಕ ಸಾಧನೆ ಗೈದಿದ್ದು, ಎಡ್ಜ್ ಬ್ಯಾಸ್ಟನ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ತಂಡ ಸಾಧನೆಗೆ ಪಾತ್ರವಾಗಿದೆ. ಇಂಗ್ಲೆಂಡ್ ತಂಡಕ್ಕೆ ಇದು 1000ನೇ ಅಂತಾರಾಷ್ಟ್ರೀಯ ಟೆಸ್ಚ್ ಪಂದ್ಯವಾಗಿದ್ದು, ಈ ಐತಿಹಾಸಿಕ ದಾಖಲೆಗೆ ಭಾರತ ತಂಡ ಸಾಕ್ಷಿಯಾಗಿರುವುದು ವಿಶೇಷವಾಗಿದೆ.
1877ರಲ್ಲಿ ಮೊಟ್ಟ ಮೊದಲ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವನ್ನಾಡಿದ್ದ ಇಂಗ್ಲೆಂಡ್ ತಂಡ ಅಂದಿನಿಂದ ಇಂದಿನವರೆಗೂ ಸಾಂಪ್ರದಾಯಿಕ ಎದುರಾಳಿ ಆಸ್ಚ್ರೇಲಿಯಾ, ಒಂದು ಕಾಲದ ಕ್ರಿಕೆಟ್ ದಿಗ್ಗಜರಾಗಿದ್ದ ವೆಸ್ಟ್ ಇಂಡೀಸ್ ಹಾಲಿ ಟೆಸ್ಟ್ ಚಾಂಪಿಯನ್ ಭಾರತ ತಂಡ ಸೇರಿದಂತೆ ಹಲವು ದೇಶಗಳ ವಿರುದ್ಧ ಟೆಸ್ಟ್ ಸರಣಿಗಳನ್ನಾಡಿದೆ. ಈ ಪೈಕಿ 358 ಪಂದ್ಯಗಳನ್ನು ಗೆದ್ದಿರುವ ಇಂಗ್ಲೆಂಡ್ ತಂಡ, 345 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದು, 297 ಪಂದ್ಯಗಳಲ್ಲಿ ಸೋಲು ಕಂಡಿದೆ.
ಇನ್ನು ಪಟ್ಟಿಯಲ್ಲಿ ಇಂಗ್ಲೆಂಡ್ ತಂಡದ ಸಾಂಪ್ರದಾಯಿಕ ಎದುರಾಳಿ ಆಸ್ಚ್ರೇಲಿಯಾ ತಂಡ ಎರಡನೇ ಸ್ಥಾನದಲ್ಲಿದ್ದು, ಕಾಂಗರೂಗಳು ಒಟ್ಟು 812 ಪಂದ್ಯಗಳನ್ನಾಡಿದ್ದಾಗೆ. 3ನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ತಂಡವಿದ್ದು, ಕೆರಿಬಿಯನ್ನರು 535 ಪಂದ್ಯಗಳನ್ನಾಡಿದ್ದಾರೆ. ಆ ಬಳಿಕದ ಸ್ಥಾನದಲ್ಲಿ ಭಾರತ ತಂಡವಿದ್ದು, ಟೀಂ ಇಂಡಿಯಾ ಒಟ್ಟು 523 ಪಂದ್ಯಗಳನ್ನಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
CricketLondonಲಂಡನ್Recordದಾಖಲೆಇಂಗ್ಲೆಂಡ್EnglandCricket Offbeatಕ್ರಿಕೆಟ್ ಸ್ವಾರಸ್ಯIndia vs Englandಭಾರತ ವರ್ಸಸ್ ಇಂಗ್ಲೆಂಡ್1000 Tests1 ಸಾವಿರ ಟೆಸ್ಟ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


