ಕ್ರಿಕೆಟ್

5ನೇ ಏಕದಿನ ಪಂದ್ಯ: ಭಾರತಕ್ಕೆ 7 ವಿಕೆಟ್ ಗಳ ಭರ್ಜರಿ ಗೆಲುವು!

ನಾಗಪುರದಲ್ಲಿ ನಡೆದ 5ನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರತ ತಂಡ 7 ವಿಕೆಟ್ ಗಳ ಭರ್ಜರಿ ಗೆಲುವ ಸಾಧಿಸಿದೆ.

5ನೇ ಏಕದಿನ ಪಂದ್ಯ: ಭಾರತಕ್ಕೆ 7 ವಿಕೆಟ್ ಗಳ ಭರ್ಜರಿ ಗೆಲುವು!
ರೋಹಿತ್ ಶರ್ಮಾ-ರಹಾನೆ ಜುಗಲ್ ಬಂದಿ (ಸಂಗ್ರಹ ಚಿತ್ರ)
Published On :
ನಾಗಪುರ: ನಾಗಪುರದಲ್ಲಿ ನಡೆದ 5ನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರತ ತಂಡ 7 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ಆಸ್ಟ್ರೇಲಿಯಾ ತಂಡ ನೀಡಿದ್ದ 243 ರನ್ ಗಳ ಸಾಮಾನ್ಯ ಗುರಿಯನ್ನು ಕೊಹ್ಲಿ ಪಡೆ ಕೇವಲ 3 ವಿಕೆಟ್ ಗಳನ್ನು ಕಳೆದುಕೊಂಡು ಗುರಿ ಸಾಧಿಸಿತು. ಭಾರತದ ಆರಂಭಿಕರಾದ ಅಜಿಂಕ್ಯ ರಹಾನೆ ಹಾಗೂ ರೋಹಿತ್ ಶರ್ಮಾ ಉತ್ತಮ  ಆರಂಭ ಒದಗಿಸಿದರು. ರಹಾನೆ 74 ಎಸೆತಗಳಲ್ಲಿ 61 ರನ್ ಗಳನ್ನು ಸಿಡಿಸಿ ಕಾಲ್ಟರ್ ನೈಲ್ ಬೌಲಿಂಗ್ ನಲ್ಲಿ ಔಟ್ ಆದರು. ಆದರೆ ನಾಯಕ ಕೊಹ್ಲಿ ಜೊತೆಗೂಡಿದ ರೋಹಿತ್ ಶರ್ಮಾ ತಮ್ಮ ನೈಜ ಆಟದ ಮೂಲಕ ಮೈದಾನದ  ಮೂಲೆ ಮೂಲೆಗೆ ಚೆಂಡನ್ನು ಅಟ್ಟಿದರು. ಆ ಮೂಲಕ ಭರ್ಜರಿ ಶತಕ ಸಿಡಿಸಿದರು. ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೋಡಿ ಭಾರತ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿತು.

ಭಾರತ ಗೆಲ್ಲಲು ಕೇವಲ 16 ರನ್ ಗಳ ಅವಶ್ಯಕತೆ ಇದ್ದಾಗ ರೋಹಿತ್ ಶರ್ಮಾ ಜಂಪಾ ಬೌಲಿಂಗ್ ನಲ್ಲಿ ಔಟ್ ಆದರು. ಅಷ್ಟು ಹೊತ್ತಿಗೆ ರೋಹಿತ್ ಶರ್ಮಾ ಕೇವಲ 109 ಎಸೆತಗಳಲ್ಲಿ 125 ರನ್ ಸಿಡಿಸಿದ್ದರು. ಇದು ಅವರ 14ನೇ  ಏಕದಿನ ಶತಕವಾಗಿತ್ತು. ಅವರ ಹಿಂದೆಯೇ 39 ರನ್ ಗಳಿಸಿದ್ದ ಕೊಹ್ಲಿ ಕೂಡ ಜಂಪಾ ಬೌಲಿಂಗ್ ನಲ್ಲಿ ಸ್ಟಾಯಿನಿಸ್ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ಕ್ರೀಸ್ ಗೆ ಬಂದ ಕೇದಾರ್ ಜಾದವ್ ಹಾಗೂ ಮನೀಶ್ ಪಾಂಡೆ ಗೆಲುವಿನ  ಔಪಚಾರಿಕತೆಯನ್ನು ಪೂರ್ಣಗೊಳಿಸಿದರು. ಆ ಮೂಲಕ ಭಾರತ ಆಸ್ಚ್ರೇಲಿಯಾ ವಿರುದ್ಧ 7 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿತು.

ಆಸ್ಟ್ರೇಲಿಯಾ ಪರ ಜಂಪಾ 2 ವಿಕೆಟ್ ಹಾಗೂ ಕಾಲ್ಟರ್ ನೈಲ್ 1 ವಿಕೆಟ್ ಪಡೆದರು. ಆ ಮೂಲಕ 5 ಪಂದ್ಯಗಳ ಸರಣಿಯನ್ನು ಭಾರತ 4-1ರ ಅಂತರದಲ್ಲಿ ತನ್ನ ಕೈ ವಶ ಮಾಡಿಕೊಂಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.