ಐಸಿಸಿ ನೂತನ ನಿಯಮಾವಳಿ ಸೆ.28ರಿಂದ ಜಾರಿಗೆ
ಮೈದಾನದಲ್ಲಿ ಆಟಗಾರರ ಅಸಭ್ಯ ವರ್ತನೆಗೆ ಕಡಿವಾಣ ಹಾಕುವ ಸಲುವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ನೂತನ ನಿಯಮಾವಗಳಿಗಳು ಸೆಪ್ಟೆಂಬರ್...

Published On :
ದುಬೈ: ಮೈದಾನದಲ್ಲಿ ಆಟಗಾರರ ಅಸಭ್ಯ ವರ್ತನೆಗೆ ಕಡಿವಾಣ ಹಾಕುವ ಸಲುವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ನೂತನ ನಿಯಮಾವಗಳಿಗಳು ಸೆಪ್ಟೆಂಬರ್ 28ರಿಂದ ಜಾರಿಗೆ ಬರಲಿದೆ.
ಆಟಗಾರರ ಅಸಭ್ಯ ವರ್ತನೆ, ಹಗುರ ಬ್ಯಾಟ್ ಹಾಗೂ ಡಿಆರ್ಎಸ್ ಸಂಬಂಧ ಹೊಸ ನಿಯಮಾವಳಿಗಳನ್ನು ಐಸಿಸಿ ರೂಪಿಸಿದೆ. ಈ ನಿಯಮಾವಳಿ ಸೆ.28ರಿಂದ ಜಾರಿಗೆ ಬರಲಿದ್ದು ಅಂದಿನಿಂದ ಶುರುವಾಗುವ ಸರಣಿ ಅಥವಾ ನಂತರ ಶುರುವಾಗುವ ಸರಣಿಗಳಿಗೆ ಅನ್ವಯಿಸುತ್ತದೆ. ಇನ್ನು ಸದ್ಯ ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ ನಡುವಿನ ಏಕದಿನ ಸರಣಿಯಲ್ಲಿ ಮೂರು ಪಂದ್ಯಗಳು ಮುಗಿದಿರುವುದರಿಂದ ಹಳೆಯ ನಿಯಮಾವಳಿಗಳೇ ಅನ್ವಯವಾಗಲಿದೆ.
ಮೆರಿಲ್ಬೋನ್ ಕ್ರಿಕೆಟ್ ಕ್ಲಬ್ನ(ಎಂಸಿಸಿ) ವಿಶ್ವ ಕ್ರಿಕೆಟ್ ಸಮಿತಿ ಶಿಫಾರಸನ್ನು ಐಸಿಸಿ ಜಾರಿಗೆ ತಂದಿದೆ. ಎಂಸಿಸಿ ಹೊಸದಾಗಿ ಅಂಗೀಕರಿಸಿರುವ ನಿಯಮದಂತೆ ಕ್ರಿಕೆಟಿಗರು ಬಳಸುವ ಬ್ಯಾಟ್ 108 ಎಂಎಂ ಅಗಲವಿರಬೇಕು, ಬ್ಯಾಟ್ ಮಧ್ಯಭಾಗ 67ಎಂಎಂ ದಪ್ಪವಿರಬೇಕು ಮತ್ತು ಬ್ಯಾಟ್ ಮೇಲ್ಬಾಗದ ದಪ್ಪ 40 ಎಂಎಂ ಮೀರಬಾರದು. ಆದರೆ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ, ಕ್ರಿಸ್ ಗೇಯ್ಲ್, ಡೇವಿಡ್ ವಾರ್ನರ್ ಬಳಸುತ್ತಿರುವ ಬ್ಯಾಟ್ ಮೇಲ್ಬಾಗ 44 ಎಂಎಂ ಅಳತೆ ಹೊಂದಿದೆ. ಹೀಗಾಗಿ ಈ ಮೂವರು ಆಟಗಾರರು ತಮ್ಮ ಬ್ಯಾಟ್ ಗಳನ್ನು ಬದಲಾಯಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ಇನ್ನು ಮೈದಾನದಲ್ಲಿ ಸ್ಲೆಡ್ಜಿಂಗ್, ಜಗಳ, ಜನಾಂಗಿಯ ನಿಂದನೆಯಂತಹ ದುರ್ವರ್ತನೆಗಳನ್ನು ತಡೆಯುವ ನಿಟ್ಟಿನಲ್ಲೂ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ದುರ್ವರ್ತನೆ ತೋರುವ ಆಟಗಾರನ ವಿರುದ್ಧ ದಂಡದ ರೂಪವಾಗಿ ಎದುರಾಳಿ ತಂಡಕ್ಕೆ ಹೆಚ್ಚುವರಿ ರನ್ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಅಂತೆಯೇ ರನ್ ಔಟ್, ಅಂಪೈರ್ ತೀರ್ಪನ್ನು ಅಗೌರವದಿಂದ ಕಾಣುವುದು, ಸುಖಾಸುಮ್ಮನೆ ಔಟ್ ಗಾಗಿ ಅಂಪೈರ್ ಬಳಿ ಮನವಿ ಮಾಡುವುದನ್ನೂ ಕೂಡ ನೂತನ ನಿಯಮಾವಳಿಗಳ ಪ್ರಕಾರ ದುರ್ವರ್ತನೆ ಎಂದು ಪರಿಗಣಿಸಲಾಗುತ್ತದೆ. ಇದಲ್ಲದೆ ಪಂದ್ಯ ಚಾಲ್ತಿಯಲ್ಲಿರುವ ಸಂದರ್ಭದಲ್ಲಿ ಆಟಗಾರರು ಅಧಿಕಾರಿಗಳನ್ನು ಸಂಪರ್ಕಿಸುವುದೂ ಕೂಡ ದುರ್ವರ್ತನೆ ಅಡಿಯಲ್ಲೇ ಬರಲಿದೆ.
ಅಂಪೈರ್ ನಿರ್ಧಾರ ಪರಾಮರ್ಶೆ ವ್ಯವಸ್ಥೆ(ಡಿಆರ್ಎಸ್) ಮುಂದುವರೆಯಲಿದ್ದು ರಿವ್ಯೂ ತೆಗೆದುಕೊಂಡಾಗ ಅಂಪೈರ್ ತೀರ್ಪು ಸರಿ ಇದ್ದಾಗ ಅಂತಹ ತಂಡದ ಮತ್ತೊಂದು ರಿವ್ಯೂ ಪಡೆಯುವ ಅವಕಾಶದಿಂದ ವಂಚಿತರಾಗಲಿದ್ದಾರೆ. ಇನ್ನು ಮುಂದೆ ಟಿ20 ಕ್ರಿಕೆಟ್ ನಲ್ಲೂ ಡಿಆರ್ಎಸ್ ಚಾಲನೆಗೆ ಬರಲಿದೆ.
ಇನ್ನು ರನ್ ಔಟ್ ನಲ್ಲೂ ಭಾರೀ ಬದಲಾವಣೆ ಬಂದಿದೆ. ಈ ಹಿಂದಿನ ನಿಯಮಾವಳಿ ಪ್ರಕಾರ ರನ್ ಔಟ್ ಆಗುವಾಗ ಆಟಗಾರನ ಬ್ಯಾಟ್ ಸ್ಕ್ರೀಸ್ ಒಳಗಿದ್ದು ಬ್ಯಾಟ್ ನೆಲಕ್ಕೆ ತಾಗದಿದ್ದರೆ ಅದನ್ನು ರನ್ ಔಟ್ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗ ಬ್ಯಾಟ್ ಸ್ಕ್ರೀಸ್ ಒಳಗಿದ್ದರೆ ಸಾಕು ಅದನ್ನು ನಾಟೌಟ್ ಎಂದು ಪರಿಗಣಿಸಲಾಗುತ್ತದೆ. ಈ ನಿಯಮ ಸ್ಟಂಪ್ ಔಟ್ ಗೂ ಅನ್ವಯವಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


