ಭಾರತದ ಬುಮ್ರಾ, ಭುವನೇಶ್ವರ್ ಕುಮಾರ್ ಅತ್ಯುತ್ತಮ ಬೌಲರ್ ಗಳು: ಆಸಿಸ್ ನಾಯಕ ಸ್ಟೀವ್ ಸ್ಮಿತ್
ಭಾರತ ಕ್ರಿಕೆಟ್ ತಂಡ ವೇಗಿಗಳಾದ ಜಸ್ ಪ್ರೀತ್ ಬುಮ್ರಾ ಮತ್ತು ಭುವನೇಶ್ವರ್ ಕುಮಾರ್ ಅತ್ಯುತ್ತಮ ಬೌಲರ್ ಗಳು ಎಂದು ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಹೇಳಿದ್ದಾರೆ.

Published On :
ಇಂದೋರ್: ಭಾರತ ಕ್ರಿಕೆಟ್ ತಂಡ ವೇಗಿಗಳಾದ ಜಸ್ ಪ್ರೀತ್ ಬುಮ್ರಾ ಮತ್ತು ಭುವನೇಶ್ವರ್ ಕುಮಾರ್ ಅತ್ಯುತ್ತಮ ಬೌಲರ್ ಗಳು ಎಂದು ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಹೇಳಿದ್ದಾರೆ.
ಇಂದೋರ್ ನಲ್ಲಿ ನಿನ್ನೆ ನಡೆದ ಮೂರನೇ ಏಕದಿನ ಪಂದ್ಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಟೀವ್ ಸ್ಮಿತ್, ಭಾರತದ ಪರ ಬುಮ್ರಾ ಮತ್ತು ಭುವನೇಶ್ವರ್ ಕುಮಾರ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಎದುರಾಳಿ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿ ಒತ್ತಡ ಹೇರುವ ಕಲೆ ಅವರಿಗೆ ಕರಗತವಾಗಿದೆ. ನಿನ್ನೆಯ ಪಂದ್ಯದಲ್ಲಿ ನಾವು ನಿಜಕ್ಕೂ 40-50 ರನ್ ಗಳ ಕೊರತೆ ಎದುರಿಸಿದೆವು. ಇನ್ನಿಂಗ್ಸ್ 38ನೇ ಓವರ್ ವರೆಗೂ ಆಸ್ಟ್ರೇಲಿಯಾ ತಂಡ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಇನ್ನಿಂಗ್ಸ್ ಕೊನೆಯ ಭಾಗದಲ್ಲಿ ಬುಮ್ರಾ ಮತ್ತು ಭುವನೇಶ್ವರ್ ಕುಮಾರ್ ನಮ್ಮ ರನ್ ವೇಗಕ್ಕೆ ಕಡಿವಾಣ ಹಾಕಿದರು ಎಂದು ಹೇಳಿದರು.
ಆಕ್ರಮಣಕಾರಿ ಆಟದ ಹೊರತಾಗಿಯೂ ಇನ್ನಿಂಗ್ಸ್ ಕೊನೆಯ ಭಾಗದಲ್ಲಿ ಭುವಿ ಮತ್ತು ಬುಮ್ರಾ ನಮ್ಮ ರನ್ ವೇಗಕ್ಕೆ ಕಡಿವಾಣ ಹಾಕಿದರು. ಕೆಲ ಸಂದರ್ಭಗಳಲ್ಲಿ ನಮಗೆ ಉತ್ತಮ ಅವಕಾಶವಿತ್ತು. ಆದರೆ ಅವುಗಳನ್ನು ನಾವು ಸದುಪಯೋಗ ಪಡಿಸಿಕೊಳ್ಳಲಾಗಲಿಲ್ಲ. ಸೋತಾಗ ತಂಡವನ್ನು ಉತ್ತೇಜಿಸುವು ಕಷ್ಟಸಾಧ್ಯ. ಅದರಲ್ಲೂ ನಾವು ಸತತ ಮೂರು ಪಂದ್ಯಗಳನ್ನು ಸೋತಾಗ ನಿಜಕ್ಕೂ ಇದು ಕಷ್ಟವಾಗುತ್ತದೆ. ಕಳೆದ 15 ಏಕದಿನ ಪಂದ್ಯದಲ್ಲಿ ನಾವು 13 ಪಂದ್ಯಗಳಲ್ಲಿ ಸೋತಿದ್ದೇವೆ. ತಂಡವನ್ನು ಮತ್ತೆ ಗೆಲುವಿನ ಟ್ರ್ಯಾಕ್ ಮರಳಿಸಲು ಸಾಕಷ್ಟು ಪರಿಶ್ರಮ ಪಡಲೇಬೇಕಿದೆ ಎಂದು ಸ್ಮಿತ್ ಹೇಳಿದರು.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
CricketIndoreಇಂದೋರ್Steve SmithBhuvneshwar KumarIndia vs Australiaಭಾರತ ವರ್ಸಸ್ ಆಸ್ಟ್ರೇಲಿಯಾJasprit Bumrahಕ್ರಿಕೆಟ್ ಸ್ವಾರಸ್ಯ3rd ODI3ನೇ ಏಕದಿನಸ್ಟೀವ್ ಸ್ಮಿತ್ಜಸ್ ಪ್ರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.