ಕ್ರಿಕೆಟ್

ಭುವನೇಶ್ವರ್ ಬಾರಿಸಿದ ಚೆಂಡು ಬಡಿದು ಮೈದಾನದಲ್ಲೆ ಕುಸಿದು ಬಿದ್ದ ಹಾರ್ದಿಕ್ ಪಾಂಡ್ಯ

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ವೇಗಿ ಭುವನೇಶ್ವರ್ ಬಾರಿಸಿದ ಚೆಂಡು ಸೀದಾ ಹಾರ್ದಿಕ್ ಪಾಂಡ್ಯ ತಲೆಗೆ ಬಡಿದಿದ್ದು ಕೂಡಲೇ ಅವರು ಮೈದಾನಲ್ಲೇ ಕುಸಿದು...

ಭುವನೇಶ್ವರ್ ಬಾರಿಸಿದ ಚೆಂಡು ಬಡಿದು ಮೈದಾನದಲ್ಲೆ ಕುಸಿದು ಬಿದ್ದ ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ
Published On :
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ವೇಗಿ ಭುವನೇಶ್ವರ್ ಬಾರಿಸಿದ ಚೆಂಡು ಸೀದಾ ಹಾರ್ದಿಕ್ ಪಾಂಡ್ಯ ತಲೆಗೆ ಬಡಿದಿದ್ದು ಕೂಡಲೇ ಅವರು ಮೈದಾನಲ್ಲೇ ಕುಸಿದು ಬಿದ್ದ ಘಟನೆ ನಡೆದಿದೆ. 
ಕೋಲ್ಕತ್ತಾ ಈಡನ್ ಗಾರ್ಡನ್ ನಲ್ಲಿ ನಡೆಯುತ್ತಿದ್ದ ಪಂದ್ಯದಲ್ಲಿ ಮೊದಲು ಟೀಂ ಇಂಡಿಯಾ ಬ್ಯಾಟಿಂಗ್ ಮಾಡಿತು. ತಂಡ ಆರು ವಿಕೆಟ್ ಕಳೆದುಕೊಂಡಿದ್ದಾಗ ಮೈದಾನದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಭುವನೇಶ್ವರ್ ಬ್ಯಾಟಿಂಗ್ ಮಾಡುತ್ತಿದ್ದರು. 47ನೇ ಓವರ್ ನ ಕೋಲ್ಟರ್-ನೈಲ್ 4ನೇ ಎಸೆತವನ್ನು ಭುವನೇಶ್ವರ್ ಕುಮಾರ್ ಸ್ಟ್ರೈ ಹಿಟ್ ಮಾಡಿದರು. ಆಗ ನಾನ್ ಸ್ಟ್ರೈಕ್ ನಲ್ಲಿದ್ದ ಹಾರ್ದಿಕ್ ಪಾಂಡ್ಯಗೆ ಚೆಂಡು ತಗುಲಿ ಅಲ್ಲೇ ಕುಸಿದು ಬಿದ್ದರು.
ಹಾರ್ದಿಕ್ ಪಾಂಡ್ಯ ಕುಸಿದು ಬಿಳುತ್ತಿದ್ದಂತೆ ತಂಡದ ವೈದ್ಯರು ಮೈದಾನಕ್ಕೆ ತೆರಳಿ ಪಾಂಡ್ಯಗೆ ಚಿಕಿತ್ಸೆ ನೀಡಿದರು. ಸ್ವಲ್ಪ ಸಮಯ ಸುಧಾರಿಸಿಕೊಂಡು ಹಾರ್ದಿಕ್ ಪಾಂಡ್ಯ ಮತ್ತೆ ಬ್ಯಾಟಿಂಗ್ ಮಾಡಿ ಅವರು 20 ರನ್ ಗಳಿಸಿದ್ದಾಗ 50ನೇ ಓವರ್ ನ ಮೊದಲ ಎಸೆತದಲ್ಲಿ ವಾರ್ನರ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.