ಆಸಿಸ್ ವಿರುದ್ಧ ಸೋಲಿನ ನಡುವೆಯೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದಾಖಲೆ!
ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ 8 ವಿಕೆಟ್ ಗಳ ಅಂತರದಲ್ಲಿ ಸೋತಿದ್ದರೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮದೇ ಆದ ವಿಶಿಷ್ಟ ವಿಶ್ವದಾಖಲೆಯೊಂದನ್ನು ಬರೆದುಕೊಂಡಿದ್ದಾರೆ.

Published On :
ಗುವಾಹತಿ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ 8 ವಿಕೆಟ್ ಗಳ ಅಂತರದಲ್ಲಿ ಸೋತಿದ್ದರೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮದೇ ಆದ ವಿಶಿಷ್ಟ ವಿಶ್ವದಾಖಲೆಯೊಂದನ್ನು ಬರೆದುಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಟಿ20 ಮಾದರಿ ಕ್ರಿಕೆಟ್ ನಲ್ಲಿ ಅದ್ಬುತ ಫಾರ್ಮ್ ನಲ್ಲಿದ್ದ ವಿರಾಟ್ ಕೊಹ್ಲಿ ಸತತ 47 ಇನ್ನಿಂಗ್ಸ್ ಗಳ ಬಳಿಕ ಡಕ್ ಔಟ್ ಆಗಿದ್ದಾರೆ. ಕೊಹ್ಲಿಗೆ ಇದು 52ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವಾಗಿದೆ. ಅಂತೆಯೇ ಆಸ್ಟ್ರೇಲಿಯಾದ ಆ್ಯರಾನ್ ಫಿಂಚ್ ಮತ್ತು ವಾರ್ನರ್ ಕ್ಯಾಚ್ ಪಡೆದ ಕೊಹ್ಲಿ ತಮ್ಮ ಕ್ಯಾಚಿಂಗ್ ಗಳ ಸಂಖ್ಯೆಯನ್ನು 100ಕ್ಕೆ ಏರಿಸಿಕೊಂಡರು. ಆ ಮೂಲಕ 100 ಕ್ಯಾಚ್ ಗಳನ್ನು ಪಡೆದ ಭಾರತದ ಮೂರನೇ ಫೀಲ್ಜರ್ ಎಂಬ ಕೀರ್ತಿಗೆ ಕೊಹ್ಲಿ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ರೋಹಿತ್ ಶರ್ಮಾ ಮತ್ತು ಸುರೇಶ್ ರೈನಾ 100ಕ್ಕೂ ಅಧಿಕ ಕ್ಯಾಚ್ ಗಳನ್ನು ಪಡೆದ ಆಟಗಾರರು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಐದನೇ ಬಾರಿಗೆ ಸ್ಟಂಪ್ ಗೆ ಬಲಿಯಾದ ಧೋನಿ
ಎದುರಾಳಿ ತಂಡ ಬ್ಯಾಟ್ಸಮನ್ ಗಳನ್ನು ತಮ್ಮ ಚಾಣಾಕ್ಷ ಸ್ಟಪಿಂಗ್ ನಿಂದಾಗಿ ಔಟ್ ಮಾಡುತ್ತಿದ್ದ ಮಹೇಂದ್ರ ಸಿಂಗ್ ಧೋನಿ ಅವರೇ ಸ್ಟಂಪಿಂಗ್ ಬಲಿಯಾಗಿದ್ದು ನಿನ್ನೆ ಪಂದ್ಯದ ವಿಶೇಷಗಳಲ್ಲಿ ಒಂದಾಗಿತ್ತು. ಆಸಿಸ್ ಸ್ಪಿನ್ನರ್ ಜಂಪಾ ಬೌಲಿಂಗ್ ನಲ್ಲಿ ಫ್ರಂಟ್ ಫುಟ್ ನಲ್ಲಿ ನುಗ್ಗಿ ಆಡಲು ಬಂದ ಧೋನಿ ಎಸೆತವನ್ನು ಮಿಸ್ ಮಾಡಿಕೊಂಡಿದ್ದರು. ಕೂಡಲೇ ಕೀಪರ್ ಪೈನೇ ಸ್ಟಂಪ್ ಮಾಡಿದ್ದರು. ಇದು ಧೋನಿ ತಮ್ಮ ವೃತ್ತಿ ಜೀವನದಲ್ಲಿ ಐದನೇ ಬಾರಿಗೆ ಸ್ಟಂಪಿಂಗ್ ಬಲಿಯಾಗಿದ್ದು, ಧೋನಿ ಕೊನೆಯ ಬಾರಿಗೆ ಸ್ಟಂಪಿಂಗ್ ಬಲಿಯಾಗಿದ್ದು 2011ರ ವಿಶ್ವಕಪ್ ಟೂರ್ನಿಯಲ್ಲಿ. ವೆಸ್ಟ್ ಇಂಡೀಸ್ ಬೌಲರ್ ದೇವೇಂದ್ರ ಬಿಶೂ ಬೌಲಿಂಗ್ ನಲ್ಲಿ ಎಂಎಸ್ ಧೋನಿ ಕೊನೆಯ ಬಾರಿಗೆ ಸ್ಟಂಪ್ ಔಟ್ ಆಗಿದ್ದರು.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Virat Kohliವಿರಾಟ್ ಕೊಹ್ಲಿGuwahatiIndia vs Australiaಗುವಾಹತಿಭಾರತ ವರ್ಸಸ್ ಆಸ್ಟ್ರೇಲಿಯಾCricket Offbeatಕ್ರಿಕೆಟ್ ಸ್ವಾರಸ್ಯ2nd T202ನೇ ಟಿ20
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.