ಈ ನಾಲ್ಕು ತಂಡಗಳೇ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಮೀಸ್ ನಲ್ಲಿ ಸೆಣಸಬಹುದು: ಇಯಾನ್ ಚಾಪೆಲ್
ಮಿನಿ ವಿಶ್ವಕಪ್ ಮಹಾ ಸಮರ ಎಂದೇ ಖ್ಯಾತಿ ಗಳಿಸಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಇಯಾನ್ ಚಾಪೆಲ್ ಟೂರ್ನಿಯ ಸೆಮಿಫೈನಲ್ ಹಂತಕ್ಕೇರಬಹುದಾದ ನಾಲ್ಕು ತಂಡಗಳನ್ನು ಹೆಸರಿಸಿದ್ದಾರೆ.

ಲಂಡನ್: ಮಿನಿ ವಿಶ್ವಕಪ್ ಮಹಾ ಸಮರ ಎಂದೇ ಖ್ಯಾತಿ ಗಳಿಸಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಇಯಾನ್ ಚಾಪೆಲ್ ಟೂರ್ನಿಯ ಸೆಮಿಫೈನಲ್ ಹಂತಕ್ಕೇರಬಹುದಾದ ನಾಲ್ಕು ತಂಡಗಳನ್ನು ಹೆಸರಿಸಿದ್ದಾರೆ.
ಇಯಾನ್ ಚಾಪೆಲ್ ಪ್ರಕಾರ ಪ್ರಸಕ್ತ ಸಾಲಿವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಟೂರ್ನಿ ಸೆಮಿ ಫೈನಲ್ ಹಂತಕ್ಕೇರುವ ಎಲ್ಲ ಅರ್ಹತೆಗಳು ಮತ್ತು ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದ್ದಾರೆ. ಅಂತೆಯೇ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳೂ ಕೂಡ ಬಲಿಷ್ಟವಾಗಿದ್ದು, ಈ ತಂಡಗಳನ್ನು ಕಡಿಮೆ ಅಂದಾಜು ಮಾಡಬಾರದು ಎಂದು ಹೇಳಿದ್ದಾರೆ.
ಖ್ಯಾತ ಕ್ರಿಕೆಟ್ ಅಂತರ್ಜಾಲ ತಾಣ ಕ್ರಿಕ್ ಇನ್ಱೋಗೆ ಬರೆದಿರುವ ತಮ್ಮ ಅಂಕಣದಲ್ಲಿ ಈ ಬಗ್ಗೆ ಇಯಾನ್ ಚಾಪೆಲ್ ಹೇಳಿಕೊಂಡಿದ್ದು, ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಎಲ್ಲ ವಿಭಾಗಗಳಲ್ಲೂ ಬಲಿಷ್ಟವಾಗಿದೆ. ಹಾಲಿ ಚಾಂಪಿಯನ್ನರಾಗಿರುವ ಭಾರತ ಯಾವುದೇ ಕಾರಣಕ್ಕೂ ಪ್ರಶಸ್ತಿಯನ್ನು ಬಿಟ್ಟುಕೊಡಲು ಸಿದ್ಧವಿಲ್ಲ. ಕೊಹ್ಲಿ ಅಕ್ರಮಣಕಾರಿ ಮನೋಭಾವ ಮತ್ತು ಎಂಎಸ್ ಧೋನಿ, ಯುವರಾಜ್ ಸಿಂಗ್ ರಂತಹ ಉತ್ತಮ ಮ್ಯಾಚ್ ಫಿನಿಷರ್ ಗಳ ದಂಡೇ ಟೀಂ ಇಂಡಿಯಾದಲ್ಲಿದೆ. ಅಲ್ಲದೆ ಸೂಕ್ತ ಸಂದರ್ಭಗಳಲ್ಲಿ ಮಾಜಿ ನಾಯಕ ಧೋನಿ ಅವರ ಸಲಹೆ ಕೂಡ ಕೊಹ್ಲಿ ಸಿಗಲಿದೆ ಎಂದು ಚಾಪೆಲ್ ಹೇಳಿದ್ದಾರೆ.
ಇದಲ್ಲದೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳೂ ಕೂಡ ಪ್ರಶಸ್ತಿ ಗಳಿಸುವ ನೆಚ್ಚಿನ ತಂಡಗಳಾಗಿದ್ದು, ಇತ್ತೀಚೆಗೆ ಮುಕ್ತಾಯವಾದ ಐಪಿಎಲ್ ಟೂರ್ನಿ ಈ ತಂಡದ ಆಟಗಾರರಿಗೆ ಅಭ್ಯಾಸಕ್ಕೆ ಉತ್ತಮ ವೇದಿಕೆಯಾಗಿ ಮಾರ್ಪಟ್ಟಿತ್ತು. ದೊಡ್ಡ ಹೊಡೆತಗಳ ಆಟಗಾರರಿಗೆ ಐಪಿಎಲ್ ಉತ್ತಮ ವೇದಿಕೆಯಾಗಿ ಮಾರ್ಪಟ್ಟಿತ್ತು ಎಂದು ಹೇಳಿದ್ದಾರೆ. ಪ್ರಮುಖವಾಗಿ ಕ್ರಿಕೆಟ್ ಜನಕ ಇಂಗ್ಲೆಂಡ್ ಈ ವರೆಗೂ ಐಸಿಸಿಯ ಯಾವುದೇ ಪ್ರಮುಖ ಏಕದಿನ ಪ್ರಶಸ್ತಿಗಳನ್ನು ಗೆದ್ದಿಲ್ಲ. ಹೀಗಾಗಿ ಇಂಗ್ಲೆಂಡ್ ಈ ಬಾರಿ ಸಂಪೂರ್ಣ ಸಾಮರ್ಥ್ಯದೊಂದಿಗೆ ಆಡಲಿದ್ದು, ದಕ್ಷಿಣ ಆಫ್ರಿಕಾ ತಂಡ ಕೂಡ ತಮ್ಮ ಚೋಕರ್ಸ್ ಪಟ್ಟಿ ಕಳಚಿಕೊಳ್ಳಲು ಹೊರಾಡಲಿದೆ. ತಂಡದಲ್ಲಿ ಡಿವಿಲಿಯರಸ್ ರಂತಹ ಸ್ಫೋಟಕ ಬ್ಯಾಟ್ಸಮನ್ ಗಳ ದಂಡೇ ಇದೆ ಎಂದು ಚಾಪೆಲ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


