ಜಮೈಕಾದಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ತೆರೆದ ಕ್ರಿಸ್ ಗೇಯ್ಲ್
ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಜಮೈಕಾದಲ್ಲಿ ಟ್ರಿಪಲ್ ಸೆಂಚುರಿ ಎಂಬ ಹೆಸರಿನಲ್ಲಿ ಕ್ರೀಡಾ ಬಾರ್ ಮತ್ತು ರೆಸ್ಟೋರೆಂಟ್...

Published On :
ಬೆಂಗಳೂರು: ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಜಮೈಕಾದಲ್ಲಿ ಟ್ರಿಪಲ್ ಸೆಂಚುರಿ ಎಂಬ ಹೆಸರಿನಲ್ಲಿ ಕ್ರೀಡಾ ಬಾರ್ ಮತ್ತು ರೆಸ್ಟೋರೆಂಟ್ ವೊಂದನ್ನು ತೆರೆದಿದ್ದಾರೆ.
ಟೀಂ ಇಂಡಿಯಾದ ಆಟಗಾರ ಯುವರಾಜ್ ಸಿಂಗ್ ಹಾಗೂ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರಂತೆ ವಿವಿಧ ವ್ಯವಹಾರಗಳಲ್ಲಿ ನಾನು ಕೂಡ ಬಂಡವಾಳ ಹೂಡಿರುವುದಾಗಿ ಆರ್ಸಿಬಿ ತಂಡದ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ತಿಳಿಸಿದ್ದಾರೆ.
ರಿಯಲ್ ಎಸ್ಟೇಟ್ ನಲ್ಲೂ ಬಂಡವಾಳ ಹೂಡಿದ್ದೇನೆ. ಐಪಿಎಲ್ ಗೆ ಬರುವ ಮುನ್ನ ಮನೆಯೊಂದನ್ನು ಕಟ್ಟಿಸಿದ್ದೇನೆ. ಆದ ಕಾರಣ ಪ್ರವಾಸದಲ್ಲಿ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ ಎಂದು ಗೇಯ್ಲ್ ಹೇಳಿದ್ದಾರೆ.
ಯುವರಾಜ್ ಸಿಂಗ್ ಯುವಿ ಕ್ಯಾಬ್ ಸಂಸ್ಥೆ ಆರಂಭಿಸಿದ್ದು, ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಆರೋಗ್ಯ ಕ್ಷೇತ್ರದಲ್ಲಿ ಬಂಡವಾಳ ಹೂಡಿದ್ದನ್ನು ಗಮನಿಸಿದೆ. ಹೀಗಾಗಿ ನಾನು ಕೂಡ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳವನ್ನು ಹೂಡಿದ್ದೇನೆ ಇದರಿಂದ ಉತ್ತಮ ಲಾಭ ಬರುತ್ತಿದ್ದು ಕ್ರಿಕೆಟ್ ಆಟ ಹೊರತುಪಡಿಸಿದರೂ ಜೀವನಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕ್ರಿಸ್ ಗೇಯ್ಲ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


