ಬೆಂಗಳೂರು ಟೆಸ್ಟ್: 3ನೇ ದಿನದಾಟದಂತ್ಯಕ್ಕೆ ಆಸಿಸ್ ವಿರುದ್ಧ 126 ರನ್ ಗಳ ಮುನ್ನಡೆ ಸಾಧಿಸಿದ ಭಾರತ!
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ 3ನೇ ದಿನಗದಾಟದ ಅಂತ್ಯಕ್ಕೆ ಭಾರತ 126 ರನ್ ಗಳ ಅಲ್ಪ ಮುನ್ನಡೆ ಸಾಧಿಸಿದೆ.

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ 3ನೇ ದಿನಗದಾಟದ ಅಂತ್ಯಕ್ಕೆ ಭಾರತ 126 ರನ್ ಗಳ ಅಲ್ಪ ಮುನ್ನಡೆ ಸಾಧಿಸಿದೆ.
ಆಸ್ಟ್ರೇಲಿಯಾ ತಂಡವನ್ನು 276 ರನ್ ಗಳಿಗೆ ಆಲ್ ಔಟ್ ಮಾಡಿದ ಭಾರತ 87 ರನ್ ಗಳ ಮೊದಲ ಇನ್ನಿಂಗ್ಸ್ ಹಿನ್ನಡೆಯೊಂದಿಗೇ ಎರಡನೇ ಇನ್ನಿಂಗ್ಸ್ ಆರಂಭಿಸಿತ್ತು. 3ನೇ ದಿನದಾಟದಂತ್ಯಕ್ಕೆ ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 2013 ರನ್ ಗಳಿಸಿದ್ದು, 79 ರನ್ ಗಳಿಸಿರುವ ಪೂಜಾರಾ ಮತ್ತು 40 ರನ್ ಗಳಿಸಿರುವ ರಹಾನೆ ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಹಾಗೂ ಮುಕುಂದ್ ಉತ್ತಮವಾಗಿ ಆಡುವ ನಿರೀಕ್ಷೆ ಮೂಡಿಸಿದರಾದರೂ 16 ರನ್ ಗಳಿಸಿದ್ದ ಮುಕಂದ್ ಹೇಜಲ್ ವುಡ್ ಬೌಲಿಂಗ್ ನಲ್ಲಿ ಔಟ್ ಆದರು. ಬಳಿಕ ಪೂಜಾರಾ ಜೊತೆ ಗೂಡಿದ ರಾಹುಲ್ ಉತ್ತಮವಾಗಿ ಬ್ಯಾಟ್ ಬೀಸಿದರು. 85 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ರಾಹುಲ್ ಒಕೀಫ್ ಬೌಲಿಂಗ್ ನಲ್ಲಿ ಸ್ಮಿತ್ ಗೆ ಕ್ಯಾಚಿತ್ತು ಹೊರ ನಡೆದರು.
ಬಳಿಕ ಬಂದ ನಾಯಕ ವಿರಾಟ್ ಕೊಹ್ಲಿ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲುವ ಪ್ರಯತ್ನ ಮಾಡಿದರಾದರೂ, ಹೇಜಲ್ ವುಡ್ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದರು. ಆದರೆ ಮತ್ತೊಂದು ತುದಿಯಲ್ಲಿದ್ದ ಪೂಜಾರಾ ರಕ್ಷಣಾತ್ಮಕವಾಗಿ ರನ್ ಕದಿಯುತ್ತಿದ್ದರು. ಕೊಹ್ಲಿ ಬಳಿಕ ಬಂದ ರವೀಂದ್ರ ಜಡೇಜಾ ಕೂಡ 2 ರನ್ ಗಳಿಸಿ ಹೇಜಲ್ ವುಡ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಪೂಜಾರ ಜೊತೆಗೂಡಿದ ಅಂಜಿಕ್ಯಾ ರಹಾನೆ ರಕ್ಷಣಾತ್ಮಕ ಆಟದೆ ಮೊರೆ ಹೋಗಿ ತಂಡಕ್ಕೆ ಮತ್ತೊಂದು ಆಘಾತ ಬೀಳದಂತೆ ನೋಡಿಕೊಂಡರು. ನಿಧಾನವಾಗಿಯೇ ಬ್ಯಾಟ್ ಬೀಸಿದ ಈ ಜೋಡಿ 93 ರನ್ ಗಳ ಸಮಯೋಚಿತ ಜೊತೆಯಾಟ ನೀಡಿತು. ಅಜೇಯ 79 ರನ್ ಗಳಿಸಿರುವ ಪೂಜಾರ ಶತಕದಂಚಿನಲ್ಲಿದ್ದು, 40 ರನ್ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿರುವ ರಹಾನೆ ನಾಳೆಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇನ್ನು ಆಸಿಸ್ ಪರ ಹೇಜಲ್ ವುಡ್ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರೆ, ಕಳೆದ ಪಂದ್ಯದ ಹೀರೋ ಒಕೀಫ್ 1 ವಿಕೆಟ್ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


