ಕ್ರಿಕೆಟ್

ನಮ್ಮವರೇ ನಮ್ಮನ್ನು ಬರ್ಬಾದ್ ಮಾಡಿದರು, ಬೇರೆಯವರಿಗೆ ಆ ತಾಕತ್ತು ಎಲ್ಲಿತ್ತು: ಹಾರ್ದಿಕ್ ಪಾಂಡ್ಯಾ ಟ್ವೀಟ್!

ನಮ್ಮವರೇ ನಮ್ಮನ್ನು ಬರ್ಬಾದ್ ಮಾಡಿದರು, ಬೇರೆಯವರಿಗೆ ಆ ತಾಕತ್ತು ಎಲ್ಲಿತ್ತು ಎಂದು ಭಾರತೀಯ ಕ್ರಿಕೆಟ್ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಾ ಟ್ವೀಟ್ ಮಾಡಿದ್ದಾರೆ.

ನಮ್ಮವರೇ ನಮ್ಮನ್ನು ಬರ್ಬಾದ್ ಮಾಡಿದರು, ಬೇರೆಯವರಿಗೆ ಆ ತಾಕತ್ತು ಎಲ್ಲಿತ್ತು: ಹಾರ್ದಿಕ್ ಪಾಂಡ್ಯಾ ಟ್ವೀಟ್!
ಟ್ವಿಟರ್ ಚಿತ್ರ
Published On :

ಲಂಡನ್: ನಮ್ಮವರೇ ನಮ್ಮನ್ನು ಬರ್ಬಾದ್ ಮಾಡಿದರು, ಬೇರೆಯವರಿಗೆ ಆ ತಾಕತ್ತು ಎಲ್ಲಿತ್ತು ಎಂದು ಭಾರತೀಯ ಕ್ರಿಕೆಟ್ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಾ ಟ್ವೀಟ್ ಮಾಡಿದ್ದಾರೆ.

ನಿನ್ನೆ ನಡೆದ ಐಸಿಸಿ ಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಸೋಲು ಕಾಣುತ್ತಿದ್ದ ಭಾರತ ತಂಡದ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಹಾರ್ದಿಕ್ ಪಾಂಡ್ಯಾ ರನ್ ಔಟ್ ಗೆ ಬಲಿಯಾಗಿದ್ದರು. ಪಾಂಡ್ಯಾ ಔಟ್ ಆಗಿದ್ದೇ ತಡ ತಂಡದ ಉಳಿದ ಆಟಗಾರರು ತರಗೆಲೆಗಳಂತೆ ವಿಕೆಟ್ ಕೈ ಚೆಲ್ಲಿದರು. ಪರಿಣಾಮ ಭಾರತ ತಂಡ ಹೀನಾಯ ಸೋಲು ಕಂಡಿತು.

ಏತನ್ಮಧ್ಯೆ ನಿನ್ನೆ ರಾತ್ರಿ ಸುಮಾರು 10.15ರ ವೇಳೆ ಟ್ವೀಟ್ ಮಾಡಿದ್ದ ಹಾರ್ದಿಕ್ ಪಾಂಡ್ಯಾ, ನಮ್ಮವರೇ ನಮ್ಮನ್ನು ಬರ್ಬಾದ್ ಮಾಡಿದರು, ಬೇರೆಯವರಿಗೆ ಆ ತಾಕತ್ತು ಎಲ್ಲಿತ್ತು ಎಂದು ಆಕ್ರೋಶ ಭರಿತರಾಗಿ ಟ್ವೀಟ್ ಮಾಡಿದ್ದರು. ಇದೀಗ ಆ ಟ್ವೀಟ್ ವ್ಯಾಪಕ ವೈರಲ್ ಆಗಿದ್ದು, ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಪಾಂಡ್ಯಾ ಟ್ವೀಟ್ ಡಿಲೀಟ್ ಮಾಡಿದ್ದರೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ವ್ಯಾಪಕ ವೈರಲ್ ಆಗಿದೆ.

ಹಾರ್ದಿಕ್ ಪಾಂಡ್ಯಾ ಟ್ವೀಟ್ ಅನ್ನು ಪ್ರಿಂಟ್ ಸ್ಕ್ರೀನ್ ತೆಗೆದುಕೊಂಡಿರುವ ಕೆಲ ಟ್ವೀಟಿಗರು ಅದನ್ನೇ ಅಪ್ಲೋಡ್ ಮಾಡಿ ವ್ಯಾಪಕ ಚರ್ಚೆ ನಡೆಸುತ್ತಿದ್ದಾರೆ. ಪಾಂಡ್ಯಾ ರನ್ ಔಟ್ ಗೆ ರವೀಂದ್ರ ಜಡೇಜಾ ಅವರೇ ಕಾರಣ ಎಂಬ ಅರ್ಥದಲ್ಲಿ ಜಡ್ಡು ವಿರುದ್ಧ ವ್ಯಾಪಕ ಟೀಕೆಗಳು ಹರಿದುಬರುತ್ತಿದೆ.

ಇನ್ನು ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯಾ 43 ಎಸೆತಗಳಲ್ಲಿ 76 ರನ್ ಸಿಡಿಸಿದ್ದರು. ಅವರ ಈ ಭರ್ಜರಿ ಆಟದಲ್ಲಿ 6 ಸಿಕ್ಸರ್ ಹಾಗೂ 4 ಬೌಂಡರಿ ಸಿಡಿಸಿದ್ದರು. ಆದರೆ ತಂಡದ ಆಟಗಾರ ರವೀಂದ್ರ  ಜಡೇಜಾ ಅವರ ಅಜಾಗರೂಕ ನಡೆಯಿಂದ ಪಾಂಡ್ಯಾ ರನ್‌ ಔಟ್‌ ಆಗಿದ್ದರು. ಇದೇ ಬೇಸರದಲ್ಲಿ ಪೆವಿಲಿಯನ್‌ ಸೇರಿದ ಬಳಿಕ ಪಾಂಡ್ಯಾ ಯಾರೊಂದಿಗೂ ಮಾತನಾಡದೇ ಟ್ವಿಟರ್‌ನಲ್ಲಿ ರೀಟ್ವೀಟ್‌ ಮಾಡಿಕೊಳ್ಳುತ್ತಾ ಬ್ಯುಸಿಯಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.