ಕ್ರಿಕೆಟ್

ಚಾಂಪಿಯನ್ಸ್ ಟ್ರೋಫಿ: ಪಾಕ್ ಆಟಕ್ಕೆ ಕೊಹ್ಲಿ ಶ್ಲಾಘನೆ, ಧನ್ಯವಾದ ಹೇಳಿದ ಪಾಕಿಸ್ತಾನಿ ಅಭಿಮಾನಿಗಳು!

ಚಾಂಪಿಯನ್ಸ್ ಟ್ರೋಫಿ ಸೋಲಿನ ಬಳಿಕ ಕೊಹ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ವಿಲನ್ ಆಗಿದ್ದರೆ, ಅಚ್ಚರಿ ಎಂಬಂತೆ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಮಾತ್ರ ನಾಯಕರಾಗಿದ್ದಾರೆ.

ಚಾಂಪಿಯನ್ಸ್ ಟ್ರೋಫಿ: ಪಾಕ್ ಆಟಕ್ಕೆ ಕೊಹ್ಲಿ ಶ್ಲಾಘನೆ, ಧನ್ಯವಾದ ಹೇಳಿದ ಪಾಕಿಸ್ತಾನಿ ಅಭಿಮಾನಿಗಳು!
ಟ್ವೀಟ್ ಚಿತ್ರ
Published On :

ಲಂಡನ್: ಚಾಂಪಿಯನ್ಸ್ ಟ್ರೋಫಿ ಸೋಲಿನ ಬಳಿಕ ಕೊಹ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ವಿಲನ್ ಆಗಿದ್ದರೆ, ಅಚ್ಚರಿ ಎಂಬಂತೆ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಮಾತ್ರ ನಾಯಕರಾಗಿದ್ದಾರೆ.

ಹೌದು...ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಸೋಲಿನ ಬಳಿಕ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಪಾಕಿಸ್ತಾನ ತಂಡದ ಆಟವನ್ನು ಶ್ಲಾಘಿಸಿ ಕೊಹ್ಲಿ ಆಡಿದ್ದ ಮಾತುಗಳು ಪಾಕ್ ಕ್ರಿಕೆಟ್ ಪ್ರೇಮಿಗಳ ಶ್ಲಾಘನೆಗೆ ಪಾತ್ರವಾಗಿದೆ. ಕೊಹ್ಲಿ ಅವರ ಅಭಿನಂದನಾ ಹೇಳಿಕೆಗೆ ವ್ಯಾಪಕ ಬೆಂಬಲ ವ್ಯಕ್ತಪಡಿಸಿರುವ ಪಾಕ್ ಕ್ರಿಕೆಟ್ ಅಭಿಮಾನಿಗಳು,  ತಂಡದ ನಾಯಕರಾಗಿದ್ದು ಕೊಂಡು ಎದುರಾಳಿ ತಂಡದ ಆಟವನ್ನು ಶ್ಲಾಘಿಸಿದ ಪರಿ ನಿಜಕ್ಕೂ ಎಲ್ಲ ಪಾಕ್ ಕ್ರಿಕೆಟ್ ಅಭಿಮಾನಿಗಳಿಗೆ ಸ್ಪೂರ್ತಿದಾಯಕವಾಗಿತ್ತು. ನಿಮ್ಮ ಮಾತುಗಳೇ ನಿಮ್ಮ ಸಹೃದಯವನ್ನು ಪರಿಚಯ ಮಾಡುತ್ತದೆ. ನಿಜಕ್ಕೂ ನೀವು ವಿಶ್ವದ ಕೋಟ್ಯಂತರ ಅಭಿಮಾನಿಗಳ ಮನಸ್ಸು ಗೆದ್ದಿದ್ದೀರಿ ಎಂದು ಟ್ವೀಟ್ ಮಾಡಿದ್ದಾರೆ.

ನಿನ್ನೆ ನಡೆದ ಪ್ರಶಸ್ತಿ ಸಮಾರಂಭದ ವೇಳೆ ಕೊಹ್ಲಿ ಪಾಕಿಸ್ತಾನ ತಂಡದ ಸಾಂಘಿಕ ಆಟವನ್ನು ಶ್ಲಾಘಿಸಿದ್ದರು. "ಪಾಕಿಸ್ತಾನ ತಂಡ ಇಂದು ಎಲ್ಲ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ನೀಡಿತು. ಟೂರ್ನಿಯಲ್ಲಿ ಅವರು ಸೋಲಿನ ಬಳಿಕ ಎದ್ದು ಬಂದ ರೀತಿ ನಿಜಕ್ಕೂ ಅದ್ಬುತ. ಪರಿಸ್ಥಿತಿಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಂಡ ರೀತಿ ಅದ್ಬುತವಾಗಿತ್ತು. ಪಾಕ್ ತಂಡದಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಎಲ್ಲರೂ ಪ್ರತಿಭೆಗೆ ತಕ್ಕಂತೆ ಪ್ರದರ್ಶನ ನೀಡಿದರು. ಆ ಮೂಲಕ ವಿಶ್ವದ ಯಾವುದೇ ಬಲಿಷ್ಟ ತಂಡವನ್ನೂ ಕೂಡ ಮಣಿಸಬಲ್ಲರು ಎಂಬುದನ್ನು ಸಾಬೀತು ಪಡಿಸಿದರು. ನಿಜಕ್ಕೂ ಇಂದಿನ ದಿನ ಭಾರತಕ್ಕೆ ನಿರಾಶಾದಾಯಕವಾಗಿತ್ತು ಎಂದು ಕೊಹ್ಲಿ ಹೇಳಿದರು.

ಕೊಹ್ಲಿ ಹೇಳಿಕೆಗೆ ಬಂದ ಕೆಲ ಪ್ರತಿಕ್ರಿಯೆಯ ಟ್ವೀಟ್ ಗಳು ಇಂತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.