ಕ್ರಿಕೆಟ್

ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್: ಇಂಡೋ-ಪಾಕ್ "ಕದನ"ಕ್ಕೆ ಕ್ಷಣಗಣನೆ ಆರಂಭ!

ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬರೊಬ್ಬರಿ 32 ವರ್ಷಗಳ ಬಳಿಕ ಏಕದಿನ ಮಾದರಿಯ ಕ್ರಿಕೆಟ್ ಸರಣಿ ಫೈನಲ್ ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್: ಇಂಡೋ-ಪಾಕ್ "ಕದನ"ಕ್ಕೆ ಕ್ಷಣಗಣನೆ ಆರಂಭ!
ಸಂಗ್ರಹ ಚಿತ್ರ
Published On :

ಲಂಡನ್: ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬರೊಬ್ಬರಿ 32 ವರ್ಷಗಳ ಬಳಿಕ ಏಕದಿನ ಮಾದರಿಯ ಕ್ರಿಕೆಟ್  ಸರಣಿ  ಫೈನಲ್ ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ.

ಈಗಾಗಲೇ ಲೀಗ್ ಹಂತದ ಪಂದ್ಯದಲ್ಲಿ ಸೋತಿರುವ ಪಾಕಿಸ್ತಾನ ಫೈನಲ್ ನಲ್ಲಿ ಜಯಿಸುವ ಮೂಲಕ ತನ್ನ ಚೊಚ್ಚಲ ಏಷ್ಯಾಕಪ್ ಪ್ರಶಸ್ತಿಗೆ ಮುತ್ತಿಡಲು ಕಾತುರದಿಂದ ಕಾಯುತ್ತಿದ್ದು, ಹಾಲಿ ಚಾಂಪಿಯನ್ ಆಗಿರುವ ಭಾರತ ತಂಡ  ತನ್ನ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಹೋರಾಟ ನಡೆಸಲಿದೆ. ಅಂತೆಯೇ ಈ ಬಾರಿ ಪ್ರಶಸ್ತಿ ಗೆದ್ದರೆ ಭಾರತ ತಂಡ ಅಗ್ರ ಸ್ಥಾನಕ್ಕೇರಲಿದೆ.

ಇನ್ನು ವಿಶ್ವದಲ್ಲೇ ಬಲಿಷ್ಟ ಬ್ಯಾಟಿಂಗ್ ಕ್ರಮಾಂಕ ಹೊಂದಿರುವ ಖ್ಯಾತಿ ಭಾರತದದ್ದಾರೆ, ಉಭಯ ತಂಡಗಳ ಬೌಲಿಂಗ್ ಬಲಾಬಲ ಸಮಬಲವಾಗಿದೆ. ಅಂತೆಯೇ ಫೀಲ್ಡಿಂಗ್ ಕೂಡ ಉಭಯ ತಂಡಗಳು ಸಮನಾಗಿದ್ದು, ಕಳೆದ  ಬಾಂಗ್ಲಾದೇಶ ವಿರುದ್ಧ ಸೆಮಿಫೈನಲ್ ಪಂದ್ಯದ ಆರಂಭದಲ್ಲಿ ಭಾರತೀಯ ಫೀಲ್ಡರ್ ಗಳು ಮಾಡಿದ್ದ ಕೆಲ ಯಡವಟ್ಟುಗಳನ್ನು ಸುಧಾರಿಸಿಕೊಂಡರೆ ಖಂಡಿತಾ ಭಾರತ ತಂಡ ಪಾಕಿಸ್ತಾನದ ಮೇಲುಗೈ ಸಾಧಿಸುವುದರಲ್ಲಿ ಎರಡು  ಮಾತಿಲ್ಲ. ಇನ್ನು ಕಳೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಶಿಖರ್ ಧವನ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಭರ್ಜರಿ ಆಟವಾಡುವ ಮೂಲಕ ಫಾರ್ಮ್ ಗೆ ಮರಳಿದ್ದಾರೆ. ಹೀಗಾಗಿ ಇಂದೂ ಕೂಡ ಅದೇ ಪ್ರದರ್ಶನವನ್ನು  ನಿರೀಕ್ಷಿಸಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.