ಚಾಂಪಿಯನ್ಸ್ ಟ್ರೋಫಿ ಫೈನಲ್: ಚೊಚ್ಚಲ ಶತಕ ಸಿಡಿಸಿದ ಪಾಕ್ ಆಟಗಾರ ಫಖರ್ ಝಮಾನ್
ಬ್ರಿಟನ್ ನಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಪಾಕಿಸ್ತಾನ ಉತ್ತಮ ರನ್ ಗಳಿಕೆಯತ್ತ ಸಾಗುತ್ತಿದೆ.

Published On :
ಲಂಡನ್: ಬ್ರಿಟನ್ ನಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಪಾಕಿಸ್ತಾನ ಉತ್ತಮ ರನ್ ಗಳಿಕೆಯತ್ತ ಸಾಗುತ್ತಿದೆ. ಭಾರತದ ಬೌಲರ್ ಗಳ ಎಸೆತಗಳನ್ನು ಮನಸೋ ಇಚ್ಛೆ ದಂಡಿಸಿದ ಪಾಕಿಸ್ತಾನದ ಬ್ಯಾಟ್ಸ್ ಮನ್ ಫಖರ್ ಝಮಾನ್ ಅಂತಾರಾಷ್ಟ್ರೀಯ ಏಕದಿನ ಪಂದ್ಯದ ಮೊದಲ ಶತಕವನ್ನು ದಾಖಲಿಸಿದ್ದಾರೆ.
114 ರನ್ ಗಳನ್ನು ಗಳಿಸಿದ್ದ ಫಖರ್ ಝಮಾನ್ ವೇಗಿ ಹಾರ್ದಿಕ್ ಪಾಂಡ್ಯ ಓವರ್ ನಲ್ಲಿ ಬೌಂಡರಿ ಹೊಡೆಯಲು ಹೋಗಿ ಜಡೇಜಾಗೆ ಕ್ಯಾಚ್ ಇತ್ತು ಔಟ್ ಆದರು. ಆದರೂ ಪಾಕಿಸ್ತಾನ ತಂಡ ಭಾರತದ ವಿರುದ್ಧ ಹೆಚ್ಚು ರನ್ ಗಳಿಸಲು ಫಖರ್ ಝಮಾನ್ 106 ಎಸೆತಗಳಲ್ಲಿ 114 ರನ್ ಗಳಿಸಿದ್ದು ನೆರವಾಯಿತು.
ಇತ್ತೀಚಿನ ವರದಿ ಪ್ರಕಾರ 42 ಓವರ್ ಗಳಿಗೆ 267 ರನ್ ಗಳನ್ನು ಗಳಿಸಿರುವ ಪಾಕಿಸ್ತಾನ 4 ವಿಕೆಟ್ ಕಳೆದುಕೊಂಡಿದೆ. ಕ್ಷಣ ಕ್ಷಣದ ಅಪ್ ಡೇಟ್ ಗಾಗಿ ಕನ್ನಡಪ್ರಭ.ಕಾಂ ಲೈವ್ ಸ್ಕೋರ್ ನ್ನು ಕ್ಲಿಕ್ಕಿಸಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಶತಕmaiden centuryಭಾರತ-ಪಾಕಿಸ್ತಾನIndia vs Pakistanಐಸಿಸಿ ಚಾಂಪಿಯನ್ಸ್ ಟ್ರೋಫಿ 2017ICC champions trophy 2017 FinalsFakhar Zamanಫಖರ್ ಝಮಾನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


