ಕ್ರಿಕೆಟ್

ಬಿಸಿ ಏರಿಸಿದ ಇಂಡೋ-ಪಾಕ್ ಫೈನಲ್: 30 ಸೆಕೆಂಡ್ ಗಳ ಜಾಹಿರಾತಿಗೆ ಬರೊಬ್ಬರಿ 1 ಕೋಟಿ!

ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್ ನಲ್ಲಿ ಮುಖಾಮುಖಿಯಾಗುತ್ತಿದ್ದು, ಭಾರಿ ನಿರೀಕ್ಷೆ ಹುಟ್ಟಿಸಿರುವ ಈ ಪಂದ್ಯದ ವೇಳೆ ಜಾಹಿರಾತಿಗೆ ವಾಣಿಜ್ಯ ಸಂಸ್ಥೆಗಳು ಭಾರಿ ಪೈಪೋಟಿ ನಡೆಸುತ್ತಿವೆ.

ಬಿಸಿ ಏರಿಸಿದ ಇಂಡೋ-ಪಾಕ್ ಫೈನಲ್: 30 ಸೆಕೆಂಡ್ ಗಳ ಜಾಹಿರಾತಿಗೆ ಬರೊಬ್ಬರಿ 1 ಕೋಟಿ!
ಸಂಗ್ರಹ ಚಿತ್ರ
Published On :

ಲಂಡನ್: ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್ ನಲ್ಲಿ ಮುಖಾಮುಖಿಯಾಗುತ್ತಿದ್ದು, ಭಾರಿ ನಿರೀಕ್ಷೆ ಹುಟ್ಟಿಸಿರುವ ಈ ಪಂದ್ಯದ ವೇಳೆ ಜಾಹಿರಾತಿಗೆ ವಾಣಿಜ್ಯ  ಸಂಸ್ಥೆಗಳು ಭಾರಿ ಪೈಪೋಟಿ ನಡೆಸುತ್ತಿವೆ.

ವಾಣಿಜ್ಯ ಸಂಸ್ಥೆಗಳ ಈ ಪೈಪೋಟಿ ಎಷ್ಟರ ಮಟ್ಟಿಗೆ ಏರಿಕೆಯಾಗಿದೆ ಎಂದರೆ ಪಂದ್ಯದ ವೇಳೆ ಜಾಹಿರಾತು ಪ್ರಸಾರ ಮಾಡಲು ಭಾರಿ ದರವನ್ನೇ ನಿಗದಿಪಡಿಸಲಾಗಿದೆ. ಮೂಲಗಳ ಪ್ರಕಾರ ಇದೇ ಭಾನುವಾರ ನಡೆಯುವ ಫೈನಲ್  ಪಂದ್ಯದ ವೇಳೆ ಜಾಹಿರಾತು ಪ್ರಸಾರದ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, 30 ಸೆಕೆಂಡ್ ಗಳ ಜಾಹಿರಾತು ಪ್ರಸಾರಕ್ಕಾಗಿ ಬರೊಬ್ಬರಿ 1 ಕೋಟಿ ದರ ನಿಗದಿ ಪಡಿಸಲಾಗಿದೆ.

ಸಾಮಾನ್ಯವಾಗಿ ಭಾರತೀಯ ಕಾರ್ಯಕ್ರಮಗಳಿಗೆ ಅತೀ ಹೆಚ್ಚು ಎಂದರೆ 10 ಲಕ್ಷ ರು.ಗಳನ್ನು ವಿಧಿಸಲಾಗುತ್ತಿತ್ತು. ಆದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಫೈನಲ್ ಪಂದ್ಯ ಭಾರಿ ನಿರೀಕ್ಷೆ ಮೂಡಿಸಿರುವ ಹಿನ್ನಲೆಯಲ್ಲಿ ಈ  ಹೈವೋಲ್ಟೇಜ್ ಪಂದ್ಯದ ನಡುವೆ ಜಾಹಿರಾತು ಪ್ರಸಾರಕ್ಕಾಗಿ ದುಬಾರಿ ಬೆಲೆ ನಿಗದಿ ಪಡಿಸಲಾಗಿದೆ ಎಂದು ತಿಳಿದುಬಂದಿದೆ. ಪಂದ್ಯ ವೀಕ್ಷಣೆಗೆ ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದ್ದು, ಜಗತ್ತಿನಾದ್ಯಂತ ಕೋಟ್ಯಂತರ ಮಂದಿ ಈ  ಪಂದ್ಯ ವೀಕ್ಷಣೆ ಮಾಡಲಿದ್ದಾರೆ. ಹೀಗಾಗಿ ಜಾಹಿರಾತು ದರವನ್ನು ಏರಿಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.