ಕ್ರಿಕೆಟ್

ಬಯಲಾಯ್ತು ಯುವಿ ಮಾಂತ್ರಿಕ ಶಕ್ತಿ?: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್!

ಭಾರತ ಮತ್ತು ಬಾಂಗ್ಲಾದೇಶ ನಡುವಿನ 2ನೇ ಸೆಮಿ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಭಾರತ ತಂಡದ ಸ್ಫೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್ ಅವರ ಅದ್ಬುತ ಶಕ್ತಿಯೊಂದರ ಅನಾವರಣವಾಗಿದೆ...!

ಬಯಲಾಯ್ತು ಯುವಿ ಮಾಂತ್ರಿಕ ಶಕ್ತಿ?: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್!
ಫೇಸ್ ಬುಕ್ ಚಿತ್ರ
Published On :

ಲಂಡನ್: ಭಾರತ ಮತ್ತು ಬಾಂಗ್ಲಾದೇಶ ನಡುವಿನ 2ನೇ ಸೆಮಿ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಭಾರತ ತಂಡದ ಸ್ಫೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್ ಅವರ ಅದ್ಬುತ ಶಕ್ತಿಯೊಂದರ  ಅನಾವರಣವಾಗಿದೆ...!

ಸಹಜವಾಗಿಯೇ ಟೀಂ ಇಂಡಿಯಾ ಡ್ರೆಸಿಂಗ್ ರೂಂ ಸದಾಕಾಲ ಹಾಸ್ಯ ಮತ್ತು ಕೀಟಲೆಯಿಂದ ಕೂಡಿರುತ್ತದೆ. ಇದಕ್ಕೆ ಇಂಬು ನೀಡುವ ಹಲವು ಸನ್ನಿವೇಶಗಳು ಆಗಾಗ್ಗಾ ನಡೆಯುತ್ತಿರುತ್ತದೆ. ಇದಕ್ಕೊಂದ ಹೊಸ ಸೇರ್ಪಡೆ ಎಂಬಂತೆ  ಚಂಡದ ಸ್ಫೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್ ಅವರ ಚಮತ್ಕಾರವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ. ಯುವಿ ತಮ್ಮ ಚಮತ್ಕಾರಿ ಕೈಗಳಿಂದ ಹೊಟೆಲ್ ರೂಂ ನ ಬಾಗಿಲು ತೆಗೆಯುವ  ದೃಶ್ಯ ಇದೀಗ ವೈರಲ್ ಆಗಿದೆ. ಈ ವಿಡಿಯೋವನ್ನು ಸ್ವತಃ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.

ಚಮತ್ಕಾರವಲ್ಲ...ಯುವಿ ಕೀಟಲೆ..
ಸುದ್ದಿ ನೋಡಿ ಆಚ್ಚರಿಗೊಂಡು ವಿಡಿಯೋ ನೋಡಿದರೆ ಯುವಿ ಪ್ರೇಕ್ಷಕರ ಕಾಲೆಳೆಯುವುದು ಕಾಣುತ್ತದೆ. ಸಾದಾಕಾಲ ತಮ್ಮ ಹಾಸ್ಯ ಪ್ರಜ್ಞೆ ಮತ್ತು ಕೀಟಲೆಗಳಿಂದ ಡ್ರೆಸಿಂಗ್ ರೂಂ ನಲ್ಲಿ ಸುದ್ದಿ ಮಾಡುವ ಯುವಿ ಈಗಲೂ ತಮ್ಮ  ಕೀಟಲೆಯಿಂದಲೇ ಸುದ್ದಿಯಾಗಿದ್ದಾರೆ. ಹೊಟೆಲ್ ವಿದ್ಯುತ್ ಚಾಲಿತ ಬಾಗಿಲುಗಳು ವ್ಯಕ್ತಿಗಳು ಬರುತ್ತಿದ್ದಂತೆಯೇ ತೆರೆದುಕೊಂಡು ಮುಚ್ಚಿಕೊಳ್ಳುತ್ತವೆ. ಇದನ್ನೇ ತಮ್ಮ ಕೀಟಲೆಗೆ ಬಳಕೆ ಮಾಡಿಕೊಂಡಿರುವ ಯುವಿ ತಮ್ಮ ಅದ್ಬುತ  ಶಕ್ತಿಯಿಂದ ಬಾಗಿಲುಗಳನ್ನು ತೆರೆಯುತ್ತಿರುವಂತೆ ಪೋಸ್ ನೀಡಿದ್ದಾರೆ. ಈ ವಿಡಿಯೋ ಇದೀಗ ಭಾರತೀಯ ಕ್ರಿಕೆಟ್ ಪ್ರೇಮಿಗಳ ಮನರಂಜನೆಗೆ ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.