ಐಸಿಸಿ ಚಾಂಪಿಯನ್ಸ್ ಟ್ರೋಫಿ: ಇಂದು ಪಾಕ್-ಇಂಗ್ಲೆಂಡ್ ನಡುವೆ ಮೊದಲ ಸೆಮೀಸ್ ಕದನ!
ಪ್ರಸಕ್ತ ಸಾಲಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿ ನಿರ್ಣಾಯಕ ಘಟ್ಟ ತಲುಪಿದ್ದು, ಬುಧವಾರ ಕಾರ್ಡಿಫ್ ನಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಮೊದಲ ಸೆಮಿ ಫೈನಲ್ ಪಂದ್ಯ ನಡೆಯಲಿದೆ.

ಲಂಡನ್: ಪ್ರಸಕ್ತ ಸಾಲಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿ ನಿರ್ಣಾಯಕ ಘಟ್ಟ ತಲುಪಿದ್ದು, ಬುಧವಾರ ಕಾರ್ಡಿಫ್ ನಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಮೊದಲ ಸೆಮಿ ಫೈನಲ್ ಪಂದ್ಯ ನಡೆಯಲಿದೆ.
ಟೂರ್ನಿಯಲ್ಲಿ ಆಡಿರುವ ಮೂರು ಪಂದ್ಯಗಳನ್ನು ಗೆದ್ದು ಭರ್ಜರಿಯಾಗಿ ಸೆಮೀಸ್ ಗೆ ಅಡಿ ಇಟ್ಟಿರುವ ಇಂಗ್ಲೆಂಡ್ ತಂಡಕ್ಕೆ 2 ಪಂದ್ಯಗಳಲ್ಲಿ ಗೆಲುವ ಸಾಧಿಸಿರುವ ಪಾಕಿಸ್ತಾನ ಸಾವಾಲೊಡ್ಡಲಿದೆ. ಇಂಗ್ಲೆಂಡ್ ತಂಡ ಎಲ್ಲ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದು, ಪಾಕಿಸ್ತಾನ ತಂಡ ಇಂಗ್ಲೆಂಡ್ ಗೆ ಕಠಿಣ ಸವಾಲೊಡ್ಡಲು ಮುಂದಾಗಿದೆ. ಪ್ರಸಕ್ತ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಕಾರ್ಡಿಫ್ ಅಂಗಳದಲ್ಲಿ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಲಾ 1 ಪಂದ್ಯಗಳಲ್ಲಿ ಎದುರಾಗಿವೆ. ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ 87 ರನ್‌ಗಳ ಭರ್ಜರಿ ಜಯ ಗಳಿಸಿದ್ದರೆ, ಶ್ರೀಲಂಕಾ ವಿರುದ್ಧ ಪಾಕಿಸ್ತಾನ 3 ವಿಕೆಟ್‌ಗಳ ರೋಚಕ ಜಯ ದಾಖಲಿಸಿದೆ.
ಇದೇ ಮೊದಲ ಬಾರಿಗೆ ಎರಡೂ ತಂಡಗಳು ಚಾಂಪಿಯನ್ಸ್ ಟ್ರೋಫಿಯಲ್ಲಿ ಮುಖಾಮುಖಿ ಆಗುತ್ತಿದ್ದು, ಯಾರಿಗೆ ಗೆಲುವಿನ ಅದೃಷ್ಟಒಲಿಯಲಿದೆ ಎಂಬ ಕುತೂಹಲ ಮೂಡಿದೆ. ಮಾರ್ಗನ್ ಪಡೆ ಎಲ್ಲಾ ವಿಭಾಗಗಳಲ್ಲೂ ಶಕ್ತಿಯುತವಾಗಿದ್ದು, ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ತವರಿನ ಬೆಂಬಲವು ಆಂಗ್ಲನ್ನರ ಬೆನ್ನಿಗಿದೆ. 2015ರ ವಿಶ್ವಕಪ್‌ನಲ್ಲಿ ಮೊದಲ ಹಂತದಲ್ಲೇ ಹೊರಬಿದಿದ್ದ ಆಂಗ್ಲನ್ನರು, ಕಳೆದ ವರ್ಷ ಪಾಕಿಸ್ತಾನ ವಿರುದ್ಧ ತವರಿನಲ್ಲಿ ನಡೆದ ಏಕದಿನ ಸರಣಿಯನ್ನು 4-1 ರ ಅಂತರಗಳಿಂದ ತಮ್ಮದಾಗಿಸಿಕೊಳ್ಳುವ ಮೂಲಕ ಪುಟ್ಟಿದೆದ್ದಿದ್ದರು. ಅಲ್ಲದೇ ಈ ಸರಣಿಯಲ್ಲಿ ಪಾಕ್ ವಿರುದ್ಧ ದಾಖಲೆಯ 444 ರನ್ ಸಹ ಗಳಿಸಿ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿಕೊಂಡಿದ್ದರು.
ಇತ್ತ ಕಳೆದ 3 ಬಾರಿ ಚಾಂಪಿಯನ್ಸ್ ಟ್ರೋಫಿ ಸೆಮೀಸ್‌ನಲ್ಲಿ ಎಡವಿರುವ ಪಾಕ್ ಈ ಬಾರಿಯಾದರೂ ಫೈನಲ್ ಪ್ರವೇಶಿಸುವ ಕಾತರದಲ್ಲಿದೆ. ಭಾರತ ವಿರುದ್ಧದ ಸೋಲಿನ ಬಳಿಕ ದ.ಆಫ್ರಿಕಾವನ್ನು ಸೋಲಿಸಿದ ಸರ್ಫರಾಜ್ ಪಡೆ, ಕೊನೆಯ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ರೋಚಕ ಜಯ ಸಾಧಿಸಿ 4ರ ಘಟ್ಟಕ್ಕೇರಿದೆ. ಈ ಮೂಲಕ ತಮ್ಮನ್ನು ಕಡೆಗಣಿಸುವ ಎದುರಾಳಿ ತಂಡಗಳಿಗೆ ಪ್ರಬಲ ಸಂದೇಶ ರವಾನೆ ಮಾಡಿದೆ.
ಬ್ಯಾಟಿಂಗ್‌ಗೆ ಹೋಲಿಕೆ ಮಾಡಿದರೆ ಪಾಕ್ ಬೌಲಿಂಗ್ ವಿಭಾಗದಲ್ಲಿ ಶಕ್ತಿಯುತವಾಗಿದೆ.
ಇನ್ನು ಐಸಿಸಿ ಆಯೋಜಿಸಿರುವ ಪಂದ್ಯಾವಳಿಗಳಲ್ಲಿ ಪಾಕಿಸ್ತಾನಕ್ಕಿಂತ ಇಂಗ್ಲೆಂಡ್ ಮುನ್ನಡೆಯಲಿದ್ದು, ಎರಡು ತಂಡಗಳು ಒಟ್ಟು 11 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ 6ರಲ್ಲಿ ಆಂಗ್ಲನ್ನರು ಗೆದ್ದರೆ, 4ರಲ್ಲಿ ಪಾಕಿಸ್ತಾನ ಗೆಲುವಿನ ನಗೆ ಬೀರಿದೆ. ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿದೆ.
ಉತ್ತಮ ಕ್ರಿಕೆಟ್ ಪಿಚ್
ಕಾರ್ಡಿಫ್ ನ ಸೋಫಿಯಾ ಗಾರ್ಡನ್ ಪಿಚ್ ಆರಂಭದಲ್ಲಿ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡಿದರೂ ಆನಂತರ ಬ್ಯಾಟಿಂಗ್ ಗೆ ಸಹಕಾರಿಯಾಗಲಿದೆ. ಹೀಗಾಗಿ ಎರಡನೇ ಬ್ಯಾಟಿಂಗ್ ಮಾಡುವ ತಂಡಕ್ಕೆ ಲಾಭ ಹೆಚ್ಚು. ಟೂರ್ನಿಯ 3 ಪಂದ್ಯಗಳು ಇದೇ ಪಿಚ್ ನಲ್ಲಿ ನಡೆದಿದ್ದು, ಎರಡೂ ಪಂದ್ಯಗಳಲ್ಲಿ ಎರಡನೇ ಬ್ಯಾಟಿಂಗ್ ಮಾಡಿದ ತಂಡ ಗೆದ್ದಿರುವುದೇ ಇದಕ್ಕೆ ಸಾಕ್ಷಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


