ಕ್ರಿಕೆಟ್

ಪುತ್ರನೊಂದಿಗೆ 'ಚೆಸ್' ಆಡಿದ್ದಕ್ಕೂ ಕ್ರಿಕೆಟಿಗ ಕೈಫ್'ರನ್ನು ಟ್ರೋಲ್ ಮಾಡಿದ ಮತೀಯವಾದಿಗಳು

ಇತ್ತೀಚೆಗೆ ಮುಸ್ಲಿಂ ಧರ್ಮಕ್ಕೆ ಸೇರಿದ ಕ್ರಿಕೆಟಿಗರ ಮೇಲೆ ಕೆಲ ಮತೀಯವಾದಿಗಳು ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಹಾಯುವುದು ಸಾಮಾನ್ಯವಾಗಿ ಹೋಗಿದೆ, ಕ್ರಿಕೆಟಿಗ ಇರ್ಫಾನ್ ಪಠಾಣ್ ವಿರುದ್ಧ ಹರಿಹಾಯ್ದಿದ್ದ ಕೆಲ ಇಸ್ಲಾಂ ಮೂಲಭೂತವಾದಿಗಳು ಇದೀಗ...

ಪುತ್ರನೊಂದಿಗೆ 'ಚೆಸ್' ಆಡಿದ್ದಕ್ಕೂ ಕ್ರಿಕೆಟಿಗ ಕೈಫ್'ರನ್ನು ಟ್ರೋಲ್ ಮಾಡಿದ ಮತೀಯವಾದಿಗಳು
ಪುತ್ರನೊಂದಿಗೆ 'ಚೆಸ್' ಆಡಿದ್ದಕ್ಕೂ ಕ್ರಿಕೆಟಿಗ ಕೈಫ್'ರನ್ನು ಟ್ರೋಲ್ ಮಾಡಿದ ಮತೀಯವಾದಿಗಳು
Published On :
ನವದೆಹಲಿ: ಇತ್ತೀಚೆಗೆ ಮುಸ್ಲಿಂ ಧರ್ಮಕ್ಕೆ ಸೇರಿದ ಕ್ರಿಕೆಟಿಗರ ಮೇಲೆ ಕೆಲ ಮತೀಯವಾದಿಗಳು ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಹಾಯುವುದು ಸಾಮಾನ್ಯವಾಗಿ ಹೋಗಿದೆ, ಕ್ರಿಕೆಟಿಗ ಇರ್ಫಾನ್ ಪಠಾಣ್ ವಿರುದ್ಧ ಹರಿಹಾಯ್ದಿದ್ದ ಕೆಲ ಇಸ್ಲಾಂ ಮೂಲಭೂತವಾದಿಗಳು ಇದೀಗ ಪುತ್ರನೊಂದಿಗೆ ಚೆಸ್ ಆಡಿದ ಕಾರಣಕ್ಕೆ ಮೊಹಮ್ಮದ್ ಕೈಫ್ ರನ್ನು ಟ್ರೋಲ್ ಮಾಡಿದ್ದಾರೆ. 
ಪುತ್ರನೊಂದಿಗೆ ಚೆಸ್ ಆಡುತ್ತಿರುವ ಫೋಟೋವೊಂದನ್ನು ಇತ್ತೀಚೆಗಷ್ಟೇ ಮೊಹಮ್ಮದ್ ಕೈಫ್ ಅವರು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಾಕಿದ್ದರು. ಇದಕ್ಕೆ ಕೆಲ ಮತೀಯವಾದಿಗಳು ಚೆಸ್ ಆಡುವುದು ಇಸ್ಲಾಂ ವಿರುದ್ಧವಾಗಿದೆ ಎಂದು ಕೈಫ್ ವಿರುದ್ಧ ಹರಿಹಾಯ್ದಿದ್ದಾರೆ. 
ಈ ಹಿಂದೆ ಕೈಫೇ ಅವರು ಸೂರ್ಯ ನಮಸ್ಕಾರ ಮಾಡುತ್ತಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಹಲವು ಟೀಕೆಗಳಿಗೆ ಗುರಿಯಾಗಿದ್ದರು. ಇದೀಗ ಮಗನೊಂದಿಗೆ ಚೆಸ್ ಆಡುತ್ತಿರುವ ಫೋಟೋವನ್ನು ಹಾಕಿರುವುದಕ್ಕೆ ಕೆಲ ಇಸ್ಲಾಂ ಮೂಲಭೂತವಾದಿಗಳು ಕೈಫ್ ರನ್ನು ಟ್ರೋಲ್ ಮಾಡುತ್ತಿದ್ದಾರೆ. 
ನೀವು ಯಾವತ್ತಿಗೂ ಮುಸ್ಲಿಂ ಧರ್ಮದ ಆಶಯಕ್ಕೆ ವಿರುದ್ಧವಾಗಿ ನಡೆಸುತ್ತೀರ...ಚೆಸ್ ಆಡುವುದು ಇಸ್ಲಾಂ ಧರ್ಮಕ್ಕೆ ವಿರುದ್ಧವಾದದ್ದು ಎಂದು ಹಲವರು ಕಿಡಿಕಾರಿದ್ದಾರೆ. 
ಕೈಫ್ ಅವರಿಗೆ ಕೆಲ ಮುಸ್ಲಿಂ ಮೌಲ್ವಿಗಳು ಬೆಂಬಲ ವ್ಯಕ್ತಪಡಿಸಿದ್ದು, ಕೈಫ್ ಅವರ ಕುರಿತು ಹಾಗೂ ಇತರರ ಕುರಿತು ಟೀಕೆ ಮಾಡುತ್ತಿರುವವರು ಮೊದಲು ಇಸ್ಲಾಂ ಧರ್ಮದ ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕಿದೆ. ಮೊಹಮ್ಮದ್ ಶಮಿ ಹಾಗೂ ಇರ್ಫಾನ್ ಪಠಾಣ್ ಅವರು ತಮ್ಮ ಪತ್ನಿಯರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ಇದು ಇಸ್ಲಾಂ ಧರ್ಮಕ್ಕೆ ವಿರುದ್ಧವಾದದ್ದು. ಪಠಾಮ್, ಶಮಿಯವರ ಪೋಸ್ಟ್ ಗೂ ಕೈಫ್ ಅವರ ಪೋಸ್ಟ್ ಗೂ ಸಾಕಷ್ಟು ಭಿನ್ನತೆಗಳಿವೆ ಎಂದಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರುತಮ್ಮ ಪತ್ನಿ ಜೊತೆಗಿದ್ದ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಫೋಟೋದಲ್ಲಿ ಪಠಾಣ್ ಅವರ ಪತ್ನಿ ಬುರ್ಖಾ ಧರಿಸಿದ್ದರು. ಆದರೆ, ಕೈಗಳಿಗೆ ಉಗುರು ಬಣ್ಣ ಹಾಕಿರುವುದಕ್ಕೆ ಕೆಲ ಮೂಲಭೂತವಾದಿಗಳು ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಪಠಾಣ್ ಅವರು, ಭಾರತ ಸರ್ವ ಧರ್ಮದ ಬೀಡು. ಇಲ್ಲಿ ಎಲ್ಲರಿಗೂ ಅವರ ಇಷ್ಟದಂತೆ ಬದುಕುವ ಅವಕಾಶವಿದೆ ಎಂದು ಹೇಳಿದ್ದರು. 
ಈ ಹಿಂದೆ ಕ್ರಿಕೆಟಿಗ ಮೊಹಮ್ಮದ್ ಶಮಿಯವರೂ ಕೂಡ ಕ್ಷುಲ್ಲಕ ಕಾರಣಕ್ಕೆ ಮೂಲಭೂತವಾದಿಗಳ ಸಿಟ್ಟಿಗೆ ಗುರಿಯಾಗಿದ್ದರು. ಪತ್ನಿ ಜೊತೆಗಿದ್ದ ಫೋಟೋವನ್ನು ಹಾಕಿದ್ದ ಶಮಿಯವರ ವಿರುದ್ಧ ಟೀಕೆಗಳ ಸುರಿಮಳೆಗಳೇ ಸುರಿದ್ದವು. ಶಮಿ ಪತ್ನಿ ಬುರ್ಖಾ ಧರಿಸಿಲ್ಲ ಎಂದು ವಿರೋಧಗಳು ವ್ಯಕ್ತವಾಗಿದ್ದವು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.