ಸಿಒಎ ವಿರುದ್ಧ ಸಚಿನ್, ಗಂಗೂಲಿ, ಲಕ್ಷ್ಮಣ್ ಬೇಸರ
ಟೀಂ ಇಂಡಿಯಾ ತಂಡದ ಬೌಲಿಂಗ್ ಮತ್ತು ಬ್ಯಾಟಿಂಗ್ ಕೋಚ್ ಆಗಿ ಜಹೀರ್ ಖಾನ್ ಮತ್ತು ರಾಹುಲ್ ದ್ರಾವಿಡ್ ರನ್ನು ಒತ್ತಾಯ ಪೂರ್ವಕವಾಗಿ ಆಯ್ಕೆ ಮಾಡಲಾಗಿದೆ ಎಂಬ ವರದಿಗಳಿಗೆ...

Published On :
ಟೀಂ ಇಂಡಿಯಾ ತಂಡದ ಬೌಲಿಂಗ್ ಮತ್ತು ಬ್ಯಾಟಿಂಗ್ ಕೋಚ್ ಆಗಿ ಜಹೀರ್ ಖಾನ್ ಮತ್ತು ರಾಹುಲ್ ದ್ರಾವಿಡ್ ರನ್ನು ಒತ್ತಾಯ ಪೂರ್ವಕವಾಗಿ ಆಯ್ಕೆ ಮಾಡಲಾಗಿದೆ ಎಂಬ ವರದಿಗಳಿಗೆ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ಸದಸ್ಯರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನಿರ್ವಾಹಕರ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಅವರಿಗೆ ಪತ್ರಬರೆದಿದ್ದು ಅದರಲ್ಲಿ ತಮಗೆ ನೋವಾಗಿದೆ ಎಂದು ಬರೆದಿದ್ದಾರೆ.
ಆಯ್ಕೆ ಸಮಿತಿ ತನ್ನ ಪತ್ರದಲ್ಲಿ ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆ ಆಯ್ಕೆ ಮಾಡುವ ಹೊಣೆಯನ್ನು ಮಾತ್ರ ನೀಡಲಾಗಿತ್ತು. ಆದರೆ ಜಹೀರ್ ಖಾನ್ ಮತ್ತು ರಾಹುಲ್ ದ್ರಾವಿಡ್ ಅವರನ್ನು ಕೋಚ್ ಆಗಿ ಆಯ್ಕೆ ಮಾಡುವ ಮೂಲಕ ಸಿಎಸಿ ತನ್ನ ವ್ಯಾಪ್ತಿಯನ್ನು ಮೀರಿದೆ ಎಂಬ ಭಾವನೆಯನ್ನು ಸಿಒಎ ಹರಡಿಸಿದೆ ಎಂದೂ ಸದಸ್ಯರು ದೂರಿದ್ದಾರೆ.
ಜಹೀರ್ ಮತ್ತು ದ್ರಾವಿಡ್ ಅವರನ್ನು ಕೋಚ್ ಆಗಿ ತೆಗೆದುಕೊಂಡರೆ ತಂಡಕ್ಕೆ ಪ್ರಯೋಜನವಾಗುತ್ತದೆ ಎಂದು ಮುಖ್ಯ ಕೋಚ್ ರವಿಶಾಸ್ತ್ರಿ ಅವರೊಂದಿಗೆ ಚರ್ಚಿಸಿದ್ದೇವು. ಅದಕ್ಕೆ ಅವರು ಸಹ ಮುಕ್ತ ಮನಸ್ಸಿನಿಂದಲೇ ಸ್ವಾಗತಿಸಿದ್ದರು. ಅಲ್ಲದೆ ತಂಡಕ್ಕೂ ಇದರಿಂದ ಅಪಾರ ಲಾಭವಾಗಲಿದೆ ಎಂದು ಒಪ್ಪಿಕೊಂಡಿದ್ದರು. ನಂತರವೇ ನಾವು ಜಹೀರ್ ಮತ್ತು ದ್ರಾವಿಡ್ ಹೆಸರನ್ನು ಅಂತಿಮಗೊಳಿಸಿದ್ದೇವು. ಈ ಬಗ್ಗೆ ವಿನೋದ್ ರಾಯ್, ಮಂಡಳಿ ಸಿಇಎ ರಾಹುಲ್ ಜೋಹ್ರಿ, ಕಾರ್ಯದರ್ಶಿ ಅಮಿತಾಭ್ ಚೌಧರಿಗೂ ದೂರವಾಣಿ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದೇವು ಎಂದೂ ಸಿಎಸಿ ಇ-ಮೇಲ್ ಮೂಲಕ ಕಳುಹಿಸಿರುವ ಪತ್ರದಲ್ಲಿ ವಿವರಿಸಲಾಗಿದೆ.
ನಾವು ಹೃದಯಪೂರ್ವಕವಾಗಿಯೇ ಕೆಲಸ ಮಾಡಿದ್ದು ಭಾರತೀಯ ಕ್ರಿಕೆಟ್ ತಂಡದ ಬೆಳವಣಿಗೆಗೆ ಪೂರಕವಾಗುವಂಥ ಸಂಪನ್ಮೂಲ ವ್ಯಕ್ತಿಗಳ ಆಯ್ಕೆಗೆ ಶ್ರಮಿಸಿದ್ದೇವೆ ಆದರೆ ಮಾಧ್ಯಮಗಳಲ್ಲಿ ಈಗ ಸಿಎಸಿ ವಿರುದ್ಧವಾಗಿ ವರದಿಗಳು ಪ್ರಸಾರವಾಗುತ್ತಿದ್ದು ಇದು ತೀವ್ರ ಬೇಸರ ಉಂಟು ಮಾಡಿದೆ ಎಂದು ಪತ್ರದಲ್ಲಿ ನಮೂದಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sachin Tendulkarಸಚಿನ್ ತೆಂಡೂಲ್ಕರ್ಟೀಂ ಇಂಡಿಯಾTeam IndiaBCCIಬಿಸಿಸಿಐSourav Gangulyಸೌರವ್ ಗಂಗೂಲಿವಿವಿಎಸ್ ಲಕ್ಷ್ಮಣ್VVS Laxman
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


