12 ಕೋಟಿ ರು.ಗೆ ಆರ್ ಸಿಬಿ ಪಾಲಾದ ಇಂಗ್ಲೆಂಡ್ ವೇಗಿ ಟಿ.ಮೈಲ್ಸ್!
ಇಂಗ್ಲೆಂಡ್ ತಂಡದ ಮತ್ತೋರ್ವ ವೇಗಿ ಟಿ ಮೈಲ್ಸ್ 12 ಕೋಟಿ ರು.ಗೆ ಆರ್ ಸಿಬಿ ಪಾಲಾಗಿದ್ದಾರೆ. ಇಂದಿನ ಹರಾಜು ಪ್ರಕ್ರಿಯೆಯಲ್ಲಿ ಮೈಲ್ಸ್ ಅತೀ ಹೆಚ್ಚು ಮೊತ್ತಕ್ಕೆ ಹರಾಜಾದ ಎರಡನೇ ಆಟಗಾರರಾಗಿದ್ದಾರೆ.

ಬೆಂಗಳೂರು: ಐಪಿಎಲ್ 10ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಬೆನ್ ಸ್ಟೋಕ್ಸ್ ಬಲಿಕ ಇಂಗ್ಲೆಂಡ್ ತಂಡದ ಮತ್ತೋರ್ವ ವೇಗಿ ಟಿ ಮೈಲ್ಸ್ 12 ಕೋಟಿ ರು.ಗೆ ರಾಯಲ್ ಚಾಲೆಂಜರ್ಸ್ ತಂಡದ ಪಾಲಾಗಿದ್ದಾರೆ. ಇಂದಿನ ಹರಾಜು ಪ್ರಕ್ರಿಯೆಯಲ್ಲಿ ಮೈಲ್ಸ್ ಅತೀ ಹೆಚ್ಚು ಮೊತ್ತಕ್ಕೆ ಹರಾಜಾದ ಎರಡನೇ ಆಟಗಾರರಾಗಿದ್ದಾರೆ.
(UPDATES) ಉಳಿದಂತೆ ದ.ಆಫ್ರಿಕಾ ವೇಗಿ ರಬಾಡಾ ಅವರನ್ನು 5 ಕೋಟಿ ರು. ನೀಡಿ ದೆಹಲಿ ತಂಡ ಖರೀದಿಸಿದ್ದು, ಪ್ಯಾಟ್ ಕ್ಯುಮಿನ್ಸ್ ಅವರನ್ನು 4.5 ಕೋಟಿ ರು ನೀಡಿ ಇದೇ ದೆಹಲಿ ತಂಡವೇ ಖರೀದಿ ಮಾಡಿದೆ. ಇದ್ದು ಇದೇ ಮೊದಲ ಬಾರಿಗೆ ಆಫ್ಘಾನಿಸ್ತಾನದ ಕ್ರಿಕೆಟಿಗನೋರ್ವನನ್ನು ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಖರೀದಿ ಮಾಡಲಾಗಿದ್ದು, ಆಫ್ಘನ್ ತಂಡದ ಮಹಮದ್ ನಬಿಯನ್ನು 30 ಲಕ್ಷ ರು ನೀಡಿ ಆರ್ ಸಿಬಿ ಖರೀದಿಸಿದೆ. ಭಾರತೀಯ ಕ್ರಿಕೆಟ್ ತಂಡದ ಉದಯೋನ್ಮುಖ ಆಟಗಾರ ಗೌತಮ್ ಕೆ ಅವರನ್ನು ದೆಹಲಿ ತಂಡ 2 ಕೋಟಿ ರು. ನೀಡಿ ಖರೀದಿಸಿದೆ.
ಗೌತಮ್ ಅವರ ಮೂಲ ಬೆಲೆ 10 ಲಕ್ಷ ರು.ಗಳಾಗಿದ್ದು, ಇದರ 20 ಪಟ್ಟು ಹಣ ನೀಡಿ ದೆಹಲಿ ತಂಡ ಖರೀದಿ ಮಾಡಿದೆ. ಅಂತೆಯೇ ಭಾರತದ ಮತ್ತೋರ್ವ ಆಟಗಾರ ಆದಿತ್ಯಾ ತಾರೆ (25 ಲಕ್ಷ ರು), ದೆಹಲಿ ಪಾಲಾಗಿದ್ದರೆ, ಏಕಲವ್ಯ ದ್ವಿವೇದಿ (75 ಲಕ್ಷ ರು.) ಹೈದರಾಬಾದ್ ತಂಡದ ಪಾಲಾಗಿದ್ದಾರೆ. ಮತ್ತೋರ್ವ ಭಾರತೀಯ ಆಟಗಾರ ಅನಿಕೇತ್ ಚೌದರಿಯನ್ನು ಆರ್ ಸಿಬಿ ತಂಡ 2 ಕೋಟಿ ರು ನೀಡಿ ಖರೀದಿ ಮಾಡಿದ್ದು, ಟಿ ನಟರಾಜನ್ ಅವರನ್ನು 3 ಕೋಟಿ ರು. ನೀಡಿ ಪಂಜಾಬ್ ತಂಡ ಖರೀದಿ ಮಾಡಿದೆ.
ಉಳಿದಂತೆ ನಾತು ಸಿಂಗ್ (50 ಲಕ್ಷ ರು), ಬಸಿಲ್ ಥಾಂಪಿ (85 ಲಕ್ಷ ರು.) ಗುಜರಾತ್ ಗೆ, ಸ್ಪಿನ್ನರ್ ಮುರುಘನ್ ಅಶ್ವಿನ್ (1 ಕೋಟಿ ರು.) ದೆಹಲಿಗೆ, ಆಫ್ಘನ್ ಸ್ಪಿನ್ನರ್ ರಷೀದ್ ಖಾನ್ ಅರ್ಮಾನ್ (4 ಕೋಟಿ ರು.)ಹೈದರಾಬಾದ್ ತಂಡ ಪಾಲಾಗಿದ್ದಾರೆ. ಪ್ರವೀಣ್ ತಾಂಬೆ (10 ಲಕ್ಷ ರು.) ಹೈದರಬಾದ್ ಪಾಲಾಗಿದ್ದು, ಇಂಗ್ಲೆಂಡ್ ವೇಗಿ ಕ್ರಿಸ್ ವೋಕ್ಸ್ (4.2 ಕೋಟಿ) ಕೋಲ್ಕತಾಗೆ ಹರಾಜಾಗಿದ್ದಾರೆ. ಸ್ಪಿನ್ನರ್ ಕರಣ್ ಶರ್ಮಾ (3.2 ಕೋಟಿ ರು) ಮುಂಬೈ ತಂಡದ ಪಾಲಾಗಿದ್ದು, ರಿಷಿ ಧವನ್ (55 ಲಕ್ಷ ರು.) ಕೋಲ್ಕತಾ ಪಾಲಾಗಿದ್ದಾರೆ.
---
ಬಹು ನಿರೀಕ್ಷಿತ ಐಪಿಎಲ್ 10ನೇ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆಗೆ ಸೋಮವಾರ ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದ್ದು, ವಿದೇಶಿ ಆಟಗಾರರೂ ಸೇರಿದಂತೆ ಒಟ್ಟು 351 ಆಟಗಾರರನ್ನು ಹರಾಜಿಗೆ ಇಡಲಾಗಿದೆ.
ಹರಾಜಿನಲ್ಲಿ ಒಟ್ಟು ಎಂಟು ತಂಡಗಳ ಫ್ರಾಂಚೈಸಿಗಳು ಪಾಲ್ಗೊಂಡಿದ್ದು, ಸುಮಾರು 351 ಮಂದಿ ಆಟಗಾರರ ಪೈಕಿ 76 ಆಟಗಾರರನ್ನು ಮಾತ್ರ ಕೊಳ್ಳಬಹುದಾಗಿದೆ. ಇಂದಿನ ಹರಾಜು ಪ್ರಕ್ರಿಯೆಯಲ್ಲಿ ಭಾರತದ ಇರ್ಫಾನ್ ಪಠಾಣ್, ಇಶಾಂತ್ ಶರ್ಮಾ ಫ್ರಾಂಚೈಸಿಗಳ ಕೇಂದ್ರ ಬಿಂದುವಾಗಿದ್ದು, ಫಾರ್ಮ್ ನಲ್ಲಿರುವ ಈ ಆಟಗಾರರ ಮೇಲೆ ಭಾರಿ ಪ್ರಮಾಣದ ಹಣ ಸುರಿಯಲು ಫ್ರಾಂಚೈಸಿಗಳು ತುದಿಗಾಲಲ್ಲಿ ನಿಂತಿದ್ದಾರೆ.
ಬರೊಬ್ಬರಿ 14.5 ರು. ಪುಣೆ ತಂಡಕ್ಕೆ ಬಿಕರಿಯಾದ ಬೆನ್ ಸ್ಟೋಕ್ಸ್
ಇನ್ನು ಇದೇ ವೇಳೆ ಇಂಗ್ಲೆಂಡ್ ತಂಡದ ಆಟಗಾರ ಬೆನ್ ಸೋಟ್ಕ್ಸ್ ಬರೊಬ್ಬರಿ 14.5 ರುಗೆ ಪುಣೆ ತಂಡದ ಪಾಲಾಗಿದ್ದು, ಐಪಿಎಲ್ 10 ಆವೃತ್ತಿಯಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಹರಾಜಾದ ಮೊದಲ ಆಟಗಾರ ಎಂಬ ಕೀರ್ತಿಗೆ ಭಜನರಾಗಿದ್ದಾರೆ. ಅಂತೆಯೇ ಕೋರಿ ಅಂಡರ್ಸನ್ 1 ಕೋಟಿ ರುಗೆ ದೆಹಲಿ ಪಾಲಾದರೆ, ಇಯಾನ್ ಮಾರ್ಗನ್ ಕಿಂಗ್ಸ್ ಇಲೆವನ್ ತಂಡಕ್ಕೆ 2 ಕೋಟಿಗೆ ಮಾರಾಟವಾಗಿದ್ದಾರೆ. ಪವನ್ ನೇಗಿ 1 ಕೋಟಿ ರು.ಗೆ ಆರ್ ಸಿಬಿ ಪಾಲಾದರೆ, ಲಂಕಾದ ಆಟಗಾರ ಏಂಜಲೋ ಮ್ಯಾಥ್ಯೂಸ್ 2 ಕೋಟಿ ರು. ದೆಹಲಿ ತಂಡದ ಪಾಲಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


