ಕ್ರಿಕೆಟ್

ಐಸಿಸಿ ಮಹಿಳಾ ತಂಡಕ್ಕೆ ಮಿಥಾಲಿ ರಾಜ್, ಹರ್ಮನ್‌ ಪ್ರೀತ್, ಏಕ್ತಾ ಬಿಷ್ಟ್ ಆಯ್ಕೆ

ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ(ಐಸಿಸಿ) ವರ್ಷದ ಏಕದಿನ ಮತ್ತು ಟಿ-20 ಮಹಿಳಾ ತಂಡವನ್ನು ಗುರುವಾರ ಪ್ರಕಟಿಸಿದ್ದು,

ಐಸಿಸಿ ಮಹಿಳಾ ತಂಡಕ್ಕೆ ಮಿಥಾಲಿ ರಾಜ್, ಹರ್ಮನ್‌ ಪ್ರೀತ್, ಏಕ್ತಾ ಬಿಷ್ಟ್ ಆಯ್ಕೆ
ಮಿಥಾಲಿ ರಾಜ್
Published On :
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ(ಐಸಿಸಿ) ವರ್ಷದ ಏಕದಿನ ಮತ್ತು ಟಿ-20 ಮಹಿಳಾ ತಂಡವನ್ನು ಗುರುವಾರ ಪ್ರಕಟಿಸಿದ್ದು, ಭಾರತೀಯ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಹಾಗೂ ಹರ್ಮನ್ ಪ್ರೀತ್ ಕೌರ್ ಮತ್ತು ಏಕ್ತಾ ಬಿಷ್ಟ್ ಅವರು ಸ್ಥಾನ ಪಡೆದಿದ್ದಾರೆ.
ಏಕದಿನ ಪಂದ್ಯಕ್ಕೆ ಮಿಥಾಲಿ ರಾಜ್ ಹಾಗೂ ಹರ್ಮನ್ ಪ್ರೀತ್ ಕೌರ್ ಅವರು ಟಿ-20ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ. ಏಕ್ತಾ ಒಬ್ಬರೆ ಟಿ-20 ಮತ್ತು ಏಕದಿನ ಎರಡಕ್ಕೂ ಆಯ್ಕೆಯಾಗಿದ್ದಾರೆ.
ಐಸಿಸಿ ಏಕದಿನ ತಂಡಕ್ಕೆ ಇಂಗ್ಲೆಂಡ್ ನ ಹೀದರ್ ನೈಟ್ ಅವರು ನಾಯಕಿಯಾಗಿದ್ದು, ಟಿ-20ಗೆ ವೆಸ್ಟ್ ಇಂಡೀಸ್ ನ ಸ್ಟ್ಯಾಫಾನಿ ಟೇಲರ್ ಅವರು ನಾಯಕಿಯಾಗಿದ್ದಾರೆ.
ಸೆಪ್ಟೆಂಬರ್ 21, 2016ರಿಂದೀಚೆಗಿನ ಆಟದ ಪ್ರದರ್ಶನದ ಆಧಾರದ ಮೇಲೆ ಐಸಿಸಿ ತಂಡಕ್ಕೆ ವಿವಿಧ ದೇಶಗಳಿಂದ ಆಟಗಾರರನ್ನು ಆಯ್ಕೆ ಮಾಡುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.