ಕ್ರಿಕೆಟ್

ಮಹಿಳಾ ಕ್ರಿಕೆಟ್ ಪ್ರೋತ್ಸಾಹಕ್ಕಾಗಿ ಬಿಸಿಸಿಐ ನಿಂದ ಹೊಸ ಸರಣಿಗಳ ಪ್ರಸ್ತಾಪ

ಮಹಿಳಾ ಕ್ರಿಕೆಟ್ ತಂಡಕ್ಕಫೆಚ್ಚಿನ ಪ್ರೋತ್ಸಾಹ ಮತ್ತು ಉತ್ತಮ ಪ್ರದರ್ಶನಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ಬಿಸಿಸಿಐ ಭವಿಷ್ಯದಲ್ಲಿ ಭಾರತ ಎ ಮಹಿಳಾ ತಂಡದ ಪ್ರವಾಸಗಳನ್ನು ಹೆಚ್ಚು ಸಂಖ್ಯೆಯಲ್ಲಿ ಆಯೋಜಿಸಲು ತೀರ್ಮಾನಿಸಿದೆ.

ಮಹಿಳಾ ಕ್ರಿಕೆಟ್ ಪ್ರೋತ್ಸಾಹಕ್ಕಾಗಿ ಬಿಸಿಸಿಐ ನಿಂದ ಹೊಸ ಸರಣಿಗಳ ಪ್ರಸ್ತಾಪ
ಭಾರತ ಮಹಿಳಾ ಕ್ರಿಕೆಟ್ ತಂಡ
Published On :
ಹೊಸದಿಲ್ಲಿ: ಮಹಿಳಾ ಕ್ರಿಕೆಟ್ ತಂಡಕ್ಕಫೆಚ್ಚಿನ ಪ್ರೋತ್ಸಾಹ ಮತ್ತು ಉತ್ತಮ ಪ್ರದರ್ಶನಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ಬಿಸಿಸಿಐ ಭವಿಷ್ಯದಲ್ಲಿ ಭಾರತ  ಎ ಮಹಿಳಾ ತಂಡದ  ಪ್ರವಾಸಗಳನ್ನು ಹೆಚ್ಚು ಸಂಖ್ಯೆಯಲ್ಲಿ ಆಯೋಜಿಸಲು ತೀರ್ಮಾನಿಸಿದೆ.
'ಎ' ಪ್ರವಾಸದ ಹೊರತಾಗಿ, ಅಖಿಲ ಭಾರತ ಮಟ್ಟದ ಅಂದರ್-16 ದೇಶೀಯ ವಲಯ ಪಂದ್ಯಾವಳಿಯನ್ನು ನದೇಶೂಆ ಯೋಜನೆಗಳಿವೆ. ಈ ಸದ್ಯದಲ್ಲಿ, ಅಖಿಲ ಭಾರತ ಕಿರಿಯ ಪಂದ್ಯಾವಳಿ, ಅಂಡರ್-19 ಮತ್ತು ಅಂಡರ್-23 ವಿಭಾಗಗಳನ್ನು ಮಾತ್ರವೇ ಒಳಗೊಂಡಿವೆ.
ಮಹಿಳಾ ಕ್ರಿಕೆಟ್ ನಿರ್ವಹಣ ಸಮಿತಿ (ಸಿಒಎ) ಸದಸ್ಯೆ ಡಯಾನಾ ಎಡ್ಲ್ಜಿ  ಅವರನ್ನು ಒಳಗೊಂಡಿದ್ದ ಸಭೆಯಲ್ಲಿ  ಮಹಿಳಾ ಕ್ರಿಕೆಟ್ ಮಂಡಳಿಯು ದೇಶದ ಮಹಿಳಾ ಕ್ರಿಕೆಟ್ ಗೆ ಪ್ರೋತ್ಸಾಹ ನೀಡುವ ಈ ನಿರ್ಧಾರವನ್ನು ಪ್ರಸ್ತಾಪಿಸಲಾಗಿತ್ತು, 
ಸಮಿತಿಯ ಇತರ ಸದಸ್ಯರು,  ಪ್ರಸಕ್ತ ಏಕದಿನ ನಾಯಕಿ ಮಿಥಾಲಿ ರಾಜ್, ಹಿರಿಯ ವೇಗಿ ಝುಲನ್ ಗೋಸ್ವಾಮಿ, ಆಗಿದ್ದು ಬಿಸಿಸಿಐ ಜಿಎಂ - ಕ್ರೀಡಾ ಅಭಿವೃದ್ಧಿ, ರತ್ನಾಕರ ಶೆಟ್ಟಿ, ಸಂಚಾಲಕರಾಗಿದ್ದಾರೆ.
"ದೇಶೀಯ ಅಗತ್ಯಗಳನ್ನು ಪರಿಶೀಲಿಸುವ ಮೂಲಕ ಮಹಿಳಾ ತಂಡಕ್ಕೆ ಭಾರತ ಎ ಪ್ರವಾಸಗಳನ್ನು ಆಯೋಜನೆ ಮಾಡಲು ನಾವು ಯೋಜಿಸುತ್ತೇವೆ ಮಹಿಳಾ ತಂಡಕ್ಕೆ ಒಂದು ದೊಡ್ಡ ಬದಲಾವಣೆ, ಬಲವನ್ನು ತರಲು ಇದು ಅಗತ್ಯವಿರುತ್ತದೆ ಮಿಥಾಲಿ ತಾವು  ನಮ್ಮ ದೇಶೀಯ ಕ್ರಿಕೆಟ್ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ನಡುವೆ ಬಹಳಷ್ಟು ವ್ಯತ್ಯಾಸವಿದೆ ಎಂದು ಭಾವಿಸಿದ್ದಾರೆ. , "ಬಿಸಿಸಿಐ ಅಧಿಕಾರಿಯು ಪಿಟಿಐಗೆ ತಿಳಿಸಿದರು.
ಸಭೆಯಲ್ಲಿ ಚಚರ್ಚಿಸಲಾದ ಮತ್ತೊಂದು ವಿಷಯ ಎಂದರೆ ರಾಷ್ಟ್ರೀಯ ತಂಡಕ್ಕೆ ಅಂತರರಾಷ್ಟ್ರೀಯ ಕಾರ್ಯಯೋಜನೆಯ ಕೊರತೆ, ಕಳೆದ ತಿಂಗಳು ವಿಶ್ವ ಕಪ್ ನಲ್ಲಿ ಮಹಿಳಾ ತಂಡವು ಉತ್ತಮ ಪ್ರದರ್ಶನ ನೀಡುವುದರೊಡನೆ ರಾತ್ರೋರಾತ್ರಿ ಜನಮನ್ನಣೆ ಗಿಟ್ಟಿಸಿತ್ತು.
"ಈ ವರ್ಷ ಯಾವುದೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡಲು ತಂಡವು ನಿರ್ಧರಿಸಿಲ್ಲ ಆದ್ದರಿಂದ ನಾವು  ದ್ವಿಪಕ್ಷೀಯ ಸೀಮಿತ ಓವರುಗಳ ಸರಣಿ ಅಥವಾ ಟ್ರೈ ಸಿರೀಸ್ ಗಾಗಿ ಸದಸ್ಯರಿಗೆ ಮನವಿ ಮಾಡಿದ್ದೇವೆ ಇದಕ್ಕೆ   ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ.
"ಮುಂದಿನ ವರ್ಷ  ನಡೆಯುವ ಐಸಿಸಿ ಏಕದಿನ ಚಾಂಪಿಯನ್ ಶಿಪ್ ಭಾರತಕ್ಕೆ ಮುಂದಿನ ಸವಾಲ್ ಆಗಲಿದೆ. ಅಷ್ಟರಲ್ಲಿ ದ್ವಿಪಕ್ಷೀಯ ಸರಣಿ, ತ್ರಿಕೋನ ಸರಣಿಯನ್ನು ಆಡುವುದಕ್ಕೆ ನಾವು ಹೆಚ್ಚು ಆಸಕ್ತರಾಗಿದ್ದೇವೆ.ಹೆಚ್ಚಿನ ದೇಶೀಯ ಪಂದ್ಯಗಳು, ಕ್ರೀದಾ ಪ್ರವಾಸಗಳು ದೊಡ್ಡದಾದ ರೀತಿಯಲ್ಲಿ ಮಹಿಳಾ ಐಪಿಎಲ್ ಗೆಮಾನ್ಯತೆ ಪಡೆಯಲು ಸಹಕಾರಿಯಾಗಲಿದೆ" ಎಂದು ಅಧಿಕಾರಿಗಳು ತಿಳಿಸಿದರು.
ಭಾರತ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಅವರು ಭಾರತ ಎ ದೀರ್ಘಕಾಲದಿಂದ ಮಹಿಳಾ ಕ್ರಿಕೆಟ್ ಪ್ರವಾಸ ನಡೆಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.