ಕೊನೆಯ ಓವರ್‌ನಲ್ಲಿ 4 ಭರ್ಜರಿ ಸಿಕ್ಸರ್ ಸಿಡಿಸಿದ ಹಾರ್ದಿಕ್ ಪಾಂಡ್ಯ
ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬಿರುಗಾಳಿ ಎಬ್ಬಿಸಿದರು. ಅಶೋಕ್ ದಿಂಡಾ ಅವರ ಓವರ್ ನಲ್ಲಿ ಹ್ಯಾಟ್ರಿಕ್...

Published On :
ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬಿರುಗಾಳಿ ಎಬ್ಬಿಸಿದರು. ಅಶೋಕ್ ದಿಂಡಾ ಅವರ ಓವರ್ ನಲ್ಲಿ ಹ್ಯಾಟ್ರಿಕ್ ಸಿಕ್ಸ್ ಸೇರಿದಂತೆ ನಾಲ್ಕು ಸಿಕ್ಸರ್ ಬಾರಿಸಿದರು.
ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪುಣೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇದರೊಂದಿಗೆ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಮಾಡಿತು. ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಹಾರ್ದಿಕ್ ಪಾಂಡ್ಯ 15 ಎಸೆತಗಳಲ್ಲಿ ಅಜೇಯ 35 ರನ್ ಸಿಡಿಸಿ ತಂಡ ಉತ್ತಮ ಮೊತ್ತ ಕಲೆಹಾಕಲು ನೆರವಾದರು. ಎದುರಾಳಿ ತಂಡದ ಅಶೋಕ್ ದಿಂಡಾ ಕೊನೆಯ ಓವರ್ ಮಾಡಿದರು. ಈ ವೇಳೆ ಸ್ಟೈಕ್ ನಲ್ಲಿದ್ದ ಹಾರ್ದಿಕ್ ಪಾಂಡ್ಯ ಮೊದಲ ಎಸೆತವನ್ನು ಆಫ್ ಸೈಡ್ ನಲ್ಲಿ ಸಿಕ್ಸರ್ ಬಾರಿಸಿದರು. ಎರಡನೇ ಎಸೆತವನ್ನು ಆಫ್ ಸೈಡ್ ಸ್ಟ್ರೈಕ್ ಮಾಡಿದರು. ಮೂರನೇ ಎಸೆತವನ್ನು ಲೆಗ್ ಸೈಡ್ ನಲ್ಲಿ ಸ್ಟ್ರೈಕ್ ಮಾಡಿ ಹ್ಯಾಟ್ರಿಕ್ ಸಿಕ್ಸ್ ಬಾರಿಸಿದರು, ನಂತರ ಐದನೇ ಎಸೆತವನ್ನು ಲೆಗ್ ಸೈಡ್ ನಲ್ಲಿ ಹೊಡೆಯುವ ಮೂಲಕ ನಾಲ್ಕನೇ ಸಿಕ್ಸರ್ ಬಾರಿಸಿದರು.
ಇನ್ನು ಪಂದ್ಯವೊಂದರಲ್ಲಿ ನಾಲ್ಕು ಸಿಕ್ಸರ್ ಬಾರಿಸಿದ ಹಾರ್ದಿಕ್ ಪಾಂಡ್ಯಗೆ ಯೆಸ್ ಬ್ಯಾಂಕ್ ಮ್ಯಾಕ್ಸಿಮಮ್ ಸಿಕ್ಸಸ್ ಪ್ರಶಸ್ತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Hardik Pandyaಹಾರ್ದಿಕ್ ಪಾಂಡ್ಯCricket Offbeatಕ್ರಿಕೆಟ್ ಸ್ವಾರಸ್ಯಐಪಿಎಲ್ 2017IPL 2017Ashoke Dindaಅಶೋಕ್ ದಿಂಡಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


