ಅಂಡರ್-14 ದೆಹಲಿ ಕ್ರಿಕೆಟ್ ತಂಡದಲ್ಲಿ 5 ವರ್ಷದ ಬಾಲಕ!: ವೈರಲ್ ಆಯ್ತು ವಿಡಿಯೋ
ಪುಟಾಣಿ ಮಕ್ಕಳೊಂದಿಗೆ ಪ್ಲಾಸ್ಟಿಕ್ ಬ್ಯಾಟ್ ಹಿಡಿದು ಆಡುವ ವಯಸ್ಸು ಆಗಿದ್ದರೂ, ಇಲ್ಲೊಬ್ಬ ಪುಟ್ಟ ಬಾಲಕನೊಬ್ಬ ಪ್ಯಾಡ್, ಹೆಲ್ಮೆಟ್ ಧರಿಸಿ ಬ್ಯಾಟ್ ಹಿಡಿದು ಬಂದು ಅನುಭವಿ ಕ್ರಿಕೆಟರ್ ನಂತೆ ಮೈದಾನಕ್ಕಿಳಿದು ಆಟವಾಡುವ ಮೂಲಕ ಕ್ರೀಡಾಲೋಕದಲ್ಲಿ...

ನವದೆಹಲಿ: ಪುಟಾಣಿ ಮಕ್ಕಳೊಂದಿಗೆ ಪ್ಲಾಸ್ಟಿಕ್ ಬ್ಯಾಟ್ ಹಿಡಿದು ಆಡುವ ವಯಸ್ಸು ಆಗಿದ್ದರೂ, ಇಲ್ಲೊಬ್ಬ ಪುಟ್ಟ ಬಾಲಕನೊಬ್ಬ ಪ್ಯಾಡ್, ಹೆಲ್ಮೆಟ್ ಧರಿಸಿ ಬ್ಯಾಟ್ ಹಿಡಿದು ಬಂದು ಅನುಭವಿ ಕ್ರಿಕೆಟರ್ ನಂತೆ ಮೈದಾನಕ್ಕಿಳಿದು ಆಟವಾಡುವ ಮೂಲಕ ಕ್ರೀಡಾಲೋಕದಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.
ದೆಹಲಿಯ ಅಂಡರ್-14 ತಂಡದಲ್ಲಿ ಆಟವಾಡುತ್ತಿರುವ ಈ ಪುಟ್ಟ ಬಾಲಕನ ಹೆಸರು ರುದ್ರಪ್ರತಾಪ್ ಸಿಂಗ್, ಐದು ವರ್ಷದ ಈ ಪೋರ ಬ್ಯಾಟ್ ಹಿಡಿದು ತನ್ನ ವಯಸ್ಸಿಗಿಂತಲೂ ದುಪ್ಪಟ್ಟು ವಯಸ್ಸಿರುವ ಕ್ರಿಕೆಟರ್ ಗಳ ಜೊತಗೆ ಆಟವಾಡಿದ್ದಾನೆ. ಬಾಲಕ ಬ್ಯಾಟಿಂಗ್ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದು, ಸಾಕಷ್ಟು ವೈರಲ್ ಆಗಿದೆ.
ರುದ್ರಪ್ರತಾಪ್ ಸಿಂಗ್ 5 ವರ್ಷದ ಬಾಲಕನಾಗಿದ್ದು, ಈತನಿಗೆ ಸರಿಹೊಂದುವ ಅಳತೆಯ ಪ್ಯಾಡ್ ಗಳು, ಹೆಲ್ಮೆಟ್ ಗಳು ಲಭ್ಯವಾಗಿಲ್ಲ. ಆದರೂ, ಯಾವುದಕ್ಕೂ ಹಿಂಜರಿಯದೆಯೇ ಕ್ಯಾಪ್ ಧರಿಸಿ ಅದರ ಮೇಲೆ ಹೆಲ್ಮೆಟ್ ಧರಿಸಿ ಆಟವಾಡಿದ್ದಾನೆ. ಕ್ರಿಕೆಟ್ ಟೂರ್ನಿಯಲ್ಲಿ ಕಾಣಿಸಿಕೊಂಡ ಈ 5 ವರ್ಷದ ಬಾಲಕ ಪಿಚ್ ನಲ್ಲಿ ಬಾಲ್ ಎದುರಿಸಿದ ಶೈಲಿ, ವಿಕೆಟ್ ಮುಂದೆ ಬಂದು ಬ್ಯಾಟ್ ಕುಟ್ಟಿತ್ತಿರುವ ಪರಿ ಪಂದ್ಯದ ಕಾಮೆಂಟರಿ ಮಾಡುತ್ತಿದ್ದವರಿಂದ ಹಿಡಿದು ಪಂದ್ಯವನ್ನು ಟಿವಿಯಲ್ಲಿ ನೋಡುತ್ತಿದ್ದವರಿಗೂ ಆಶ್ಚರ್ಯವನ್ನು ಮೂಡಿಸಿದೆ.
ಅಂಡರ್-14 ಕ್ರಿಕೆಟ್ ತಂಡದಲ್ಲಿರುವ ಎಲ್ಲಾ ಮಕ್ಕಳು 14 ವರ್ಷದ ಮೇಲಿನವರೇ ಆಗಿದ್ದು, ರುದ್ರಪ್ರತಾಪ್ ಸಿಂಗ್ ಮಾತ್ರ 5 ವರ್ಷದ ಆಟಗಾರನಾಗಿದ್ದಾನೆ. ಆದರೆ, ವಯಸ್ಸಿನ ಅಳುಕಿಲ್ಲದೆ ಬಾಲಕ ಮೈದಾನದಲ್ಲಿ ಕಾಣಿಸಿಕೊಂಡಿದ್ದು ಇದೀಗ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


