ಕೀಪಿಂಗ್‌ನಲ್ಲಿ ಧೋನಿಯನ್ನು ಮೀರಿಸುವಂತೆ ರನ್-ಔಟ್ ಮಾಡಿದ ವೃದ್ಧಿಮಾನ್ ಸಹಾ
ಭಾರತ ಪರ ಕೀಪಿಂಗ್ ಮಾಡುತ್ತಿರುವ ವೃದ್ಧಿಮಾನ್ ಸಹಾ ಎಂಎಸ್ ಧೋನಿ ಉತ್ತರದಾಹಿಯಾಗಲಿದ್ದಾರೇ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ಇಲ್ಲಿದೆ...

Published On :
ಭಾರತ ಪರ ಕೀಪಿಂಗ್ ಮಾಡುತ್ತಿರುವ ವೃದ್ಧಿಮಾನ್ ಸಹಾ ಎಂಎಸ್ ಧೋನಿ ಉತ್ತರದಾಹಿಯಾಗಲಿದ್ದಾರೇ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ಇಲ್ಲಿದೆ.
ಆಂಧ್ರದ ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ ಹಸೀಬ್ ಹಮೀದ್ ರನ್ನು ಧೋನಿ ರೀತಿಯಲ್ಲಿ ಸ್ಟಂಪ್ ಮಾಡುವ ಮೂಲಕ ಗಮನ ಸೆಳೆದಿದ್ದು ವಿಡಿಯೋ ವೈರಲ್ ಆಗಿದೆ.
21ನೇ ಓವರ್ ನಲ್ಲಿ ರವೀಂದ್ರ ಜಡೇಜಾ ಅವರ ಎಸೆತದಲ್ಲಿ ರೂಟ್ ಎಗ್ ಸೈಡ್ ನಲ್ಲಿ ಚೆಂಡನ್ನು ಸಿಡಿಸುತ್ತಾರೆ. ಈ ವೇಳೆ ಎರಡನೇ ರನ್ ಪಡೆಯಲು ಮುಂದಾಗುತ್ತಾರೆ ರೂಟ್ ಅಷ್ಟರಲ್ಲಿ ಫೀಲ್ಡರ್ ಚೆಂಡನ್ನು ಎಸೆದಿದ್ದರಿಂದ ಹಮೀದ್ರನ್ನು ಹಿಂದಕ್ಕೆ ಹೋಗುವಂತೆ ಹೇಳುತ್ತಾರೆ ಆದರೆ ಅಷ್ಟರಲ್ಲಾಗಲೇ ವೃದ್ಧಿಮಾನ್ ಸಹಾ ತಮ್ಮ ಚಾಣಾಕ್ಷ ನಡೆಯಿಂದಾಗಿ ಹಿಂಬದಿಯಾಗಿ ಚೆಂಡನ್ನು ವಿಕೆಟ್ ಗೆ ಹೊಡೆಯುತ್ತಾರೆ. ಅಂಪೈರ್ ಔಟ್ ಎಂಬ ತೀರ್ಪು ನೀಡುತ್ತಾರೆ.
ಎಂಎಸ್ ಧೋನಿ ತಮ್ಮ ಚಾಣಾಕ್ಷ ನಡೆಗಳಿಂದ ಕೀಪಿಂಗ್ ನಲ್ಲಿ ಉತ್ತಮ ಹೆಸರನ್ನು ಮಾಡಿದ್ದು, ಇದೀಗ ಧೋನಿ ಸ್ಥಾನವನ್ನು ತುಂಬಲು ಯೋಗ್ಯವಾದ ವಿಕೆಟ್ ಕೀಪರ್ ಸಿಕ್ಕಿದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
indiaಭಾರತMS Dhonibrilliantಎಂಎಸ್ ಧೋನಿWriddhiman Sahaವೃದ್ಧಿಮಾನ್ ಸಹಾಇಂಗ್ಲೆಂಡ್EnglandCricket Offbeatಕ್ರಿಕೆಟ್ ಸ್ವಾರಸ್ಯರನ್ ಔಟ್run-out
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


