ಟೀಂ ಇಂಡಿಯಾ ಮನವಿ ಮೇರೆಗೆ ಬದಲಾಯ್ತು ಮೊಹಾಲಿ ಪಿಚ್
ಆಸಿಸ್ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ರೋಚಕ ವಿಜಯ ಸಾಧಿಸಿದ ಟೀಂ ಇಂಡಿಯಾ ಪಂದ್ಯದ ಆರಂಭಕ್ಕೂ ಮುನ್ನ ಪಿಚ್ ಬದಲಾವಣೆ..

ಮೊಹಾಲಿ: ಆಸಿಸ್ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ರೋಚಕ ವಿಜಯ ಸಾಧಿಸಿದ ಟೀಂ ಇಂಡಿಯಾ ಪಂದ್ಯದ ಆರಂಭಕ್ಕೂ ಮುನ್ನ ಪಿಚ್ ಬದಲಾವಣೆಗೆ ಬಿಸಿಸಿಐ ಬಳಿ ಮನವಿ ಮಾಡಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಪಾಕಿಸ್ತಾನ, ಆಸ್ಟ್ರೇಲಿಯಾ ಪಂದ್ಯದ ಬಳಿಕ ಭಾರತಕ್ಕೆ ಈ ಪಿಚ್‍ನ ಬಗ್ಗೆ ಅಸಮಾಧಾನ ಉಂಟಾಗಿದ್ದ ಹಿನ್ನಲೆಯಲ್ಲಿ, ಸ್ಪಿನ್ ಪಿಚ್ ತಯಾರಿಸುವಂತೆ ಟೀಂ ಇಂಡಿಯಾ ಆಟಗಾರರು ಮನವಿ ಮಾಡಿದ್ದರು. ಕಳೆದ ಮಾರ್ಚ್ 25ರಂದು ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ ಇಲ್ಲಿ ಮ್ಯಾಚ್ ನಡೆದಿತ್ತು. ಆಗ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡ ಆಸ್ಟ್ರೇಲಿಯಾ 4 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿತ್ತು, ನಂತರ ಪಾಕಿಸ್ತಾನ 8 ವಿಕೆಟ್ ಕಳೆದುಕೊಂಡು 172ರನ್ ಗಳಿಸಿತ್ತು.
ಐಸಿಸಿ ಈ ಪಂದ್ಯಕ್ಕೆ ಪಿಚ್ ಹೇಗೆ ಸಿದ್ದಪಡಿಸಿತ್ತೋ ಅದೇ ರೀತಿಯಾಗಿ ಇಂದು ನಡೆಯಲಿರುವ ಭಾರತ ಆಸ್ಟ್ರೇಲಿಯಾ ಪಂದ್ಯಕ್ಕೂ ಸಿದ್ದಪಡಿಸಬೇಕಿತ್ತು. ಆದರೆ ಬಿಸಿಸಿಐನ ಮನವಿ ಮೇರೆಗೆ ಸ್ಪಿನ್ನರ್ ಗಳಿಗೆ ಸಹಾಕಾರಿಯಾಗುವಂತೆ ಪಿಚ್ ತಯಾರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಘಟನೆಯ ಮೂಲಕ ಐಸಿಸಿ ನಿರ್ಧಾರಗಳಲ್ಲಿ ಬಿಸಿಸಿಐ ಪಾತ್ರ ಹೆಚ್ಚಿರುತ್ತದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದ್ದು, ಟೀಂ ಇಂಡಿಯಾದ ಮ್ಯಾನೇಜ್‍ಮೆಂಟ್ ಮತ್ತು ಬಿಸಿಸಿಐ ಮನವಿಗೆ ಮಣಿದು ಐಸಿಸಿ ಮೊಹಾಲಿ ಪಿಚ್‍ನಲ್ಲಿ ಬದಲಾವಣೆ ಮಾಡಿದೆ ಎನ್ನಲಾಗಿದೆ. ಐಸಿಸಿ ತನ್ನ ಯಾವುದೇ ಕ್ರೀಡಾಕೂಟಕ್ಕೆ ತಾನು ನಿಯೋಜಿಸಿದ ಕ್ಯೂರೇಟರ್‍ನಿಂದ ಪಿಚ್‍ನ್ನು ತಯಾರಿಸುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


