ನಿವೃತ್ತಿ ನಿರ್ಧಾರದ ಬಗ್ಗೆ ಅಫ್ರೀದಿ ಮತ್ತೆ ಯು ಟರ್ನ್
ಟಾಸ್ ವೇಳೆ ನಿವೃತ್ತಿ ವಿಚಾರದ ಬಗ್ಗೆ ಅಫ್ರೀದಿಯಲ್ಲಿ ಕೇಳಿದಾಗ, ತಾನು ಇಲ್ಲಿಯವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ನಾನು ನನ್ನ ದೇಶಕ್ಕೆ ಹೋದ...

Published On :
ಮೊಹಾಲಿ: ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ನಿರ್ಧಾರದ ಬಗ್ಗೆ ಪಾಕಿಸ್ತಾನದ ಕ್ರಿಕೆಟ್ ತಂಡದ ನಾಯಕ ಶಾಹಿದ್ ಅಫ್ರೀದಿ ಮತ್ತೆ ಮನಸ್ಸು ಬದಲಿಸಿದ್ದಾರೆ.
ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟಿ20 ವಿಶ್ವಕಪ್ ಪಂದ್ಯದ ಮುನ್ನ ಟಾಸ್ ವೇಳೆ ಅಫ್ರೀದಿ ನಿವೃತ್ತಿ ನಿರ್ಧಾರದ ಬಗ್ಗೆ ತಾನು ಯೋಚಿಸಿಲ್ಲ ಎಂದು ಹೇಳಿದ್ದಾರೆ.
ಟಿ20 ವಿಶ್ವಕಪ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಮತ್ತು ಭಾರತದೊಂದಿಗೆ ಪರಾಭವಗೊಂಡಿರುವ ಪಾಕಿಸ್ತಾನಕ್ಕೆ ಶುಕ್ರವಾರ ನಡೆಯುತ್ತಿರುವ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಒಂದು ವೇಳೆ ಇವತ್ತಿನ ಪಂದ್ಯದಲ್ಲಿ ಪಾಕಿಸ್ತಾನ ಸೋತರೆ ಅವರು ಈ ವಿಶ್ವಕಪ್ ಪಂದ್ಯಾಟದಿಂದ ಹೊರಗೆ ನಡೆಯಲೇ ಬೇಕಾಗುತ್ತದೆ.
ಇಂತಿರ್ಪ, ಮ್ಯಾಚ್ ಗೆಲ್ಲಲೇ ಬೇಕಾದ ಒತ್ತಡ ಪಾಕಿಸ್ತಾನದ ಮೇಲಿದೆ. ಟಾಸ್ ವೇಳೆ ನಿವೃತ್ತಿ ವಿಚಾರದ ಬಗ್ಗೆ ಅಫ್ರೀದಿಯಲ್ಲಿ ಕೇಳಿದಾಗ, ತಾನು ಇಲ್ಲಿಯವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ನಾನು ನನ್ನ ದೇಶಕ್ಕೆ ಹೋದ ನಂತರವೇ ಅದನ್ನು ನಿರ್ಧರಿಸುವೆ ಎಂದು ಹೇಳಿದ್ದಾರೆ.
ಈ ಹಿಂದೆ ನ್ಯೂಜಿಲ್ಯಾಂಡ್ ವಿರುದ್ದ ಪರಾಭವಗೊಂಡಾಗ ತಾನು ಆಸ್ಟ್ರೇಲಿಯಾ ವಿರುದ್ಧ ಆಡುವ ಪಂದ್ಯ ನನ್ನ ವೃತ್ತಿ ಜೀವನದ ಕೊನೆಯ ಪಂದ್ಯವಾಗಲಿದೆ ಎಂದು ಅಫ್ರೀದಿ ಹೇಳಿದ್ದರು. ಅದೇ ವೇಳೆ ಟಿ20 ವಿಶ್ವಕಪ್ ಪಂದ್ಯದ ನಂತರ ಅಫ್ರೀದಿಯನ್ನು ನಾಯಕ ಸ್ಥಾನದಿಂದ ಕೆಳಗಿಳಿಸಲಾಗುವುದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿತ್ತು.
ಪದೇ ಪದೇ ತಾನು ನಿವೃತ್ತಿ ಘೋಷಿಸುತ್ತೇನೆ ಎಂದು ಹೇಳಿ ಅಫ್ರೀದಿ ತಮ್ಮ ನಿರ್ಧಾರ ಬದಲಿಸುತ್ತಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ಬಗ್ಗೆ ಯಾವ ನಿರ್ಧಾರವನ್ನು ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್Pakistanಪಾಕಿಸ್ತಾನನಿವೃತ್ತಿretirementShahid Afridiಶಾಹಿದ್ ಅಫ್ರೀದಿಐಸಿಸಿ ಟಿ20 ವಿಶ್ವಕಪ್ICC T20 World Cup
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


