ಕ್ರಿಕೆಟ್

ಟಿ20 ವಿಶ್ವಕಪ್: ಬೆ೦ಗಳೂರು ಪ೦ದ್ಯದ ಟಿಕೆಟ್ ಮಾರಾಟ ಆರಂಭ

ಐಸಿಸಿ ವಿಶ್ವಕಪ್ ಸರಣಿಯಲ್ಲಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯ೦ನಲ್ಲಿ ನಡೆಯಲಿರುವ ಪಂದ್ಯದ ಟಿಕೆಟ್ ಆನ್ ಲೈನ್ ಟಿಕೆಟ್ ಮಾರಾಟ ಪ್ರಕ್ರಿಯೆ ಭಾನವಾರದಿಂದ ಆರಂಭವಾಗಲಿದೆ...

ಟಿ20 ವಿಶ್ವಕಪ್: ಬೆ೦ಗಳೂರು ಪ೦ದ್ಯದ ಟಿಕೆಟ್ ಮಾರಾಟ ಆರಂಭ
ಐಸಿಸಿ ಟಿ20 ವಿಶ್ವಕಪ್ ಮತ್ತು ಕೆಎಸ್ ಸಿಎ (ಸಂಗ್ರಹ ಚಿತ್ರ)
Published On :

ಬೆ೦ಗಳೂರು: ಐಸಿಸಿ ವಿಶ್ವಕಪ್ ಸರಣಿಯಲ್ಲಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯ೦ನಲ್ಲಿ ನಡೆಯಲಿರುವ ಪಂದ್ಯದ ಟಿಕೆಟ್ ಆನ್ ಲೈನ್ ಟಿಕೆಟ್ ಮಾರಾಟ ಪ್ರಕ್ರಿಯೆ ಭಾನವಾರದಿಂದ  ಆರಂಭವಾಗಲಿದೆ.

ಟಿ20 ವಿಶ್ವಕಪ್ ಕ್ರಿಕೆಟ್ ಟೂನಿ೯ಯ ಬೆಂಗಳೂರು ಪ೦ದ್ಯಗಳ ಟಿಕೆಟ್ ಮಾರಾಟದ ಆನ್‍ಲೈನ್ ಪ್ರಕ್ರಿಯೆ ಇಂದಿನಿಂದ ಆರ೦ಭಗೊಳ್ಳಲಿದ್ದು, ಮಂಗಳಾರ ಸಂಜೆ 6 ಗಂಟೆಯವರೆಗೂ ಪ್ರೇಕ್ಷಕರು  ಟಿಕೆಟ್ ಬುಕಿಂಗ್ ಮಾಡಬಹುದು ಎ೦ದು ಕೆಎಸ್‍ಸಿಎ ತಿಳಿಸಿದೆ.

ಇದೇ ಮಾಚ್‍೯ 23ರ೦ದು ರಾತ್ರಿ 7.30ಕ್ಕೆ ಭಾರತ ಹಾಗೂ ಅರ್ಹತಾ ಸುತ್ತಿನಿ೦ದ ಪ್ರಧಾನ ಸುತ್ತಿಗೇರಿದ ತ೦ಡದ ನಡುವೆ ನಡೆಯಲಿರುವ ಪ೦ದ್ಯದ ಟಿಕೆಟ್ ಬುಕ್ಕಿ೦ಗ್ ಪ್ರಕ್ರಿಯೆ  ಮ೦ಗಳವಾರ ಸ೦ಜೆ 6ರವರೆಗೆ ನಡೆಯಲಿದೆ. ಆದರೆ ಎಲ್ಲ ಕ್ರಿಕೆಟ್ ಪ್ರೇಮಿಗಳಿಗೆ ಸಮಾನ ಅವಕಾಶ ಒದಗಿಸುವ ದೃಷ್ಟಿಯಿ೦ದ ಈ ಬಾರಿ ಡ್ರಾ ಮೂಲಕ ಆಯ್ದವರಿಗೆ ಟಿಕೆಟ್  ಖಾತ್ರಿಪಡಿಸಲಾಗುವುದು. ಈ ರೀತಿ ಟಿಕೆಟ್ ಪಡೆದವರ ಹೆಸರನ್ನು ಮಾ. 9ರ೦ದು ಪ್ರಕಟಿಸಲಾಗುವುದು ಎಂದು ಕೆಎಸ್ ಸಿಎ ಅಧಿಕಾರಿಗಳು ತಿಳಿಸಿದ್ದಾರೆ.

ಆಸಕ್ತರು https://in.bookmyshow. com/sports/cricket/icc-worldt20-2016 ಮತ್ತು www.icc.cricket.com ವೆಬ್‍ಸೈಟ್‍ನಲ್ಲಿ ಆನ್‍ಲ್ಯೆನ್ ಟಿಕೆಟ್‍ಗೆ ಭಾನುವಾರ  ಬೆಳಗ್ಗೆ 10 ಗ೦ಟೆಯಿ೦ದ ಹೆಸರು ನೋ೦ದಾಯಿಸಿಕೊಳ್ಳಬಹುದು. ಡ್ರಾ ಮೂಲಕ ಟಿಕೆಟ್ ಗೆದ್ದವರಿಗೆ ಎಸ್‍ಎ೦ಎಸ್ ಅಥವಾ ಇ-ಮೇಲ್ ಮೂಲಕ ತಿಳಿಸಲಾಗುವುದು. ಬಳಿಕ ಅವರು ಟಿಕೆಟ್  ಮೊತ್ತವನ್ನು 48 ಗ೦ಟೆಗಳ ಒಳಗಾಗಿ ಪಾವತಿಸಬೇಕಾಗುತ್ತದೆ. ಮಾಚ್‍೯ 12 ರಿ೦ದ 19ರವರೆಗೆ ಕೆಎಸ್‍ಸಿಎ ಕೌ೦ಟರ್‍ನಲ್ಲಿ ಈ ಟಿಕೆಟ್ ಪಡೆಯಬಹುದಾಗಿದೆ. ಇದಲ್ಲದೆ ಜಿ ಸ್ಟ್ಯಾ೦ಡ್‍ನ ಒ೦ದು  ಸಾವಿರ ಮುಖಬೆಲೆಯ ಟಿಕೆಟ್‍ಗಳ ಕೌ೦ಟರ್ ಮಾರಾಟ ಮಾ. 16ರ೦ದು ಬೆಳಗ್ಗೆ 9 ಗ೦ಟೆಗೆ ಆರ೦ಭಗೊಳ್ಳಲಿದೆ ಎ೦ದು ಕೆಎಸ್‍ಸಿಎ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.