ಸರಿಗಮ ಸಂಸ್ಥೆಗೆ ಒಲಿದ ಹಕ್ಕು: ಸಂಗೀತ ಮಾಂತ್ರಿಕ ಇಳಯರಾಜಾಗೆ ಕೋರ್ಟ್‌ನಲ್ಲಿ ಹಿನ್ನಡೆ; ಮ್ಯೂಸಿಕ್ ಲೋಕದಲ್ಲಿ ಹೊಸ ಸಂಚಲನ!
ಈ ಕಾನೂನು ಸಂಘರ್ಷದ ಮೂಲ ‘ಅಗತ್ಯಾ’ ಸಿನಿಮಾ. ಈ ಚಿತ್ರಕ್ಕಾಗಿ ಇಳಯರಾಜಾ ಅವರ ‘ಎನ್ ಇನಿಯ ಪೊನ್ ನಿಲವೇ’ ಹಾಡನ್ನು ಮರುಬಳಕೆ ಮಾಡಲು ವೆಲ್ಸ್ ಫಿಲ್ಮ್ ಇಂಟರ್ ನ್ಯಾಷನಲ್ ಸಂಸ್ಥೆ ನಿರ್ಧರಿಸಿತ್ತು.

ಕಾನೂನು ಸಮರದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಗೆ ದೊಡ್ಡ ಆಘಾತ ಎದುರಾಗಿದೆ. ತಾವೇ ಸಂಯೋಜಿಸಿದ ಸಾರ್ವಕಾಲಿಕ ಹಿಟ್ ಹಾಡುಗಳ ಹಕ್ಕುಸ್ವಾಮ್ಯ ವಿಚಾರವಾಗಿ ಅವರಿಗೆ ಹಿನ್ನಡೆಯಾಗಿದೆ.
ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಇದರಿಂದಾಗಿ ‘ಸರಿಗಮ’ ಮ್ಯೂಸಿಕ್ ಕಂಪನಿಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ತೀರ್ಪು ಸಂಗೀತ ರಂಗದಲ್ಲಿ ಹೊಸ ಸಂಚಲನ ಮೂಡಿಸಿದೆ.
ಈ ಕಾನೂನು ಸಂಘರ್ಷದ ಮೂಲ ‘ಅಗತ್ಯಾ’ ಸಿನಿಮಾ. ಈ ಚಿತ್ರಕ್ಕಾಗಿ ಇಳಯರಾಜಾ ಅವರ ‘ಎನ್ ಇನಿಯ ಪೊನ್ ನಿಲವೇ’ ಹಾಡನ್ನು ಮರುಬಳಕೆ ಮಾಡಲು ವೆಲ್ಸ್ ಫಿಲ್ಮ್ ಇಂಟರ್ನ್ಯಾಷನಲ್ ಸಂಸ್ಥೆ ನಿರ್ಧರಿಸಿತ್ತು. ಇದಕ್ಕಾಗಿ ಇಳಯರಾಜಾ ಅವರಿಂದಲೇ ಪರವಾನಗಿ ಪಡೆಯಲಾಗಿತ್ತು. ಆದರೆ, ಇದಕ್ಕೆ ಸರಿಗಮ ಸಂಸ್ಥೆ ತೀವ್ರ ವಿರೋಧ ವ್ಯಕ್ತಪಡಿಸಿತು. ಚಿತ್ರದ ಮೂಲ ನಿರ್ಮಾಪಕರಿಂದ ತಮಗೆ ಪೂರ್ಣ ಹಕ್ಕು ಸಿಕ್ಕಿದೆ ಎಂದು ಕೋರ್ಟ್ ಮೆಟ್ಟಿಲೇರಿತು.
ಈ ಪ್ರಕರಣವನ್ನು ಆಲಿಸಿದ ದೆಹಲಿ ಹೈಕೋರ್ಟ್ ಪ್ರಮುಖ ಆದೇಶ ನೀಡಿತು. ಇಳಯರಾಜಾ ಅವರಿಗೆ ಕೇವಲ ರಾಗ/ಮೆಲೋಡಿ ಸಂಯೋಜನೆಯ ಹಕ್ಕು ಮಾತ್ರ ಇರುತ್ತದೆ. ಆದರೆ, ಇಡೀ ಧ್ವನಿಮುದ್ರಣ ಮತ್ತು ಸಾಹಿತ್ಯದ ಮೇಲೆ ಪೂರ್ಣ ಹಕ್ಕಿರುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿತು. ಹೀಗಾಗಿ ಸರಿಗಮ ಸಂಸ್ಥೆಯ ಅನುಮತಿ ಇಲ್ಲದೆ ಹಾಡನ್ನು ಬಳಸದಂತೆ ದೆಹಲಿ ಹೈಕೋರ್ಟ್ ತಡೆ ನೀಡಿತು.
ದೆಹಲಿ ಹೈಕೋರ್ಟ್ ನೀಡಿದ ಈ ಆದೇಶವನ್ನು ಪ್ರಶ್ನಿಸಿ ಇಳಯರಾಜಾ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದರು. ಆದರೆ, ವಿಭಾಗೀಯ ಪೀಠವು ಅವರ ಅರ್ಜಿಯನ್ನು ವಜಾಗೊಳಿಸಿತು. ಬಳಿಕ ಇಳಯರಾಜಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠವು ಈ ಅರ್ಜಿಯನ್ನು ವಜಾ ಮಾಡಿತು. ಹೈಕೋರ್ಟ್ ಆದೇಶವೇ ಅಂತಿಮ ಎಂದು ಸ್ಪಷ್ಟಪಡಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



