ಸಿನಿಮಾ ಸುದ್ದಿ

ತ್ರಿಶಾ ಪ್ರೀತಿಸುತ್ತಿರುವ ವ್ಯಕ್ತಿ ವಿಜಯ್ ಅಲ್ಲ: ವರುಣ್ ಮಣಿಯನ್ ಜೊತೆ ತ್ರಿಶಾ ಮದುವೆ ನಿಲ್ಲಲು ಕಾರಣ ಉದಯನಿಧಿ ಸ್ಟಾಲಿನ್!

ಉದ್ಯಮಿ ವರುಣ್ ಮಣಿಯನ್ ಜೊತೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರೂ, ಮದುವೆಯ ಮಂಟಪ ಹತ್ತುವ ಮೊದಲೇ ಆ ಸಂಬಂಧವೂ ಅಂತ್ಯವಾಯಿತು. ಅಂದಿನಿಂದ ಇಂದಿನವರೆಗೆ ತ್ರಿಶಾ ಮದುವೆ ಎಂಬ ಹೆಸರನ್ನೇ ಎತ್ತಿಲ್ಲ.

ತ್ರಿಶಾ ಪ್ರೀತಿಸುತ್ತಿರುವ ವ್ಯಕ್ತಿ ವಿಜಯ್ ಅಲ್ಲ: ವರುಣ್ ಮಣಿಯನ್ ಜೊತೆ ತ್ರಿಶಾ ಮದುವೆ ನಿಲ್ಲಲು ಕಾರಣ ಉದಯನಿಧಿ ಸ್ಟಾಲಿನ್!
ವಿಜಯ್. ತ್ರಿಶಾ ಮತ್ತು ಉದಯನಿಧಿ ಸ್ಟಾಲಿನ್
Published On :

ವಿಜಯ್ ಅವರಿಗೆ ತ್ರಿಶಾ ಮೇಲೆ ಅತಿಯಾದ ಪ್ರೀತಿ ಇರಬಹುದು, ಆದರೆ ತ್ರಿಶಾ ಉದಯನಿಧಿ ಸ್ಟಾಲಿನ್ ಅವರನ್ನು ಪ್ರೀತಿಸುತ್ತಿದ್ದಾರೆ. ಅಸಲಿಗೆ ತ್ರಿಶಾ ಮತ್ತು ವರುಣ್ ಮಣಿಯನ್ ಮದುವೆ ನಿಲ್ಲಲು ಉದಯನಿಧಿ ಸ್ಟಾಲಿನ್ ಕಾರಣ ಎಂದು ಗಾಯಕಿ ಸುಚಿತ್ರಾ ಹೇಳಿದ್ದಾರೆ.

ತ್ರಿಶಾ ಅವರ ಮದುವೆಯ ವಿಚಾರ ಸದಾ ಚರ್ಚೆಯಲ್ಲಿರುತ್ತದೆ. ಆರಂಭದಲ್ಲಿ ತೆಲುಗು ನಟ ರಾಣಾ ದಗ್ಗುಬಾಟಿ ಜೊತೆ ತ್ರಿಶಾ ಡೇಟಿಂಗ್ ಮಾಡುತ್ತಿದ್ದರು ಎಂಬ ಬಲವಾದ ವದಂತಿ ಇತ್ತು. ಆದರೆ ಕುಟುಂಬದ ಕಾರಣಗಳಿಂದ ಆ ಸಂಬಂಧ ಮುರಿದುಬಿತ್ತು ಎನ್ನಲಾಗುತ್ತಿದೆ.

ನಂತರ ಉದ್ಯಮಿ ವರುಣ್ ಮಣಿಯನ್ ಜೊತೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರೂ, ಮದುವೆಯ ಮಂಟಪ ಹತ್ತುವ ಮೊದಲೇ ಆ ಸಂಬಂಧವೂ ಅಂತ್ಯವಾಯಿತು. ಅಂದಿನಿಂದ ಇಂದಿನವರೆಗೆ ತ್ರಿಶಾ ಮದುವೆ ಎಂಬ ಹೆಸರನ್ನೇ ಎತ್ತಿಲ್ಲ.

ಇವೆಲ್ಲದರ ನಡುವೆ ವಿವಾದಾತ್ಮಕ ಹೇಳಿಕೆಗಳಿಗೆ ಹೆಸರಾಗಿರುವ ಗಾಯಕಿ ಸುಚಿತ್ರಾ ಇತ್ತೀಚೆಗೆ 'ಸಿನಿ ಬಝ್' ಎಂಬ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತ್ರಿಶಾ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಸುಚಿತ್ರಾ ಹೇಳುವ ಪ್ರಕಾರ, ವಿಜಯ್ ಅವರಿಗೆ ತ್ರಿಶಾ ಮೇಲೆ ಅತಿಯಾದ ಪ್ರೀತಿ ಇರಬಹುದು, ಆದರೆ ತ್ರಿಶಾ ಪ್ರೀತಿಸುತ್ತಿರುವುದು ಉದಯನಿಧಿ ಸ್ಟಾಲಿನ್ ಅವರನ್ನು, ಅಸಲಿಗೆ ತ್ರಿಶಾ ಮತ್ತು ವರುಣ್ ಮಣಿಯನ್ ಮದುವೆ ನಿಂತಿದ್ದೇ ಉದಯನಿಧಿ ಸ್ಟಾಲಿನ್ ಅವರಿಂದ. ಅವರಿಬ್ಬರ ಮದುವೆ ಆಗುವುದನ್ನು ಉದಯನಿಧಿಗೆ ಸಹಿಸಲಾಗಲಿಲ್ಲ ಎಂದು ಹೇಳಿದ್ದಾರೆ.

ತ್ರಿಶಾ ಅವರು ಪುರುಷರಲ್ಲಿ ಉದಯನಿಧಿ ಸ್ಟಾಲಿನ್ ಹಾಗೂ ಮಹಿಳೆಯರಲ್ಲಿ ನಟಿ ರಮ್ಯಾ ಕೃಷ್ಣನ್ ಅವರನ್ನೂ ಅತಿಯಾಗಿ ಹಚ್ಚಿಕೊಂಡಿದ್ದಾರೆ. ಇನ್ನು ಧನುಷ್ ಹೆಸರನ್ನು ತ್ರಿಶಾ ಕೇವಲ ತನ್ನ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ನನ್ನ ಪ್ರಕಾರ ತ್ರಿಶಾ ಯಾರನ್ನೂ ಮದುವೆಯಾಗುವುದಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.